– ಆಗಮಿಸಲಿದ್ದಾರೆ 5 ಸಾವಿರ ಹಿಂದೂ ಕಾರ್ಯಕರ್ತರು
ಮೈಸೂರು: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ (Inspector Dhananjay) ಅವರ ಧಮ್ಕಿಗೆ ಪ್ರತಿಯಾಗಿ ಹಿಂದೂ ಜಾಗರಣ ವೇದಿಕೆ(Hindu Jagarana Vedike) ಬಹಿರಂಗ ಸವಾಲು ಹಾಕಿದ್ದು, ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಗಣೇಶ ಶೋಭಾಯಾತ್ರೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ.
ಟಿ. ನರಸೀಪುರದಲ್ಲಿ(T. Narasipura) ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ಅಂತರದಲ್ಲಿ ಹಿಂದೂ ಮಹಾಗಣಪತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಹೇಳಿದಂತೆ ಕೇಳಲು ಆಗುತ್ತಾ? ಶಿಸ್ತುಕ್ರಮದ ತೀರ್ಮಾನ ಮಾಡೋದು ಎಸ್‌ಪಿ ಅಲ್ಲ, ನಾನು: ಪ್ರಿಯಾಂಕ್ ಖರ್ಗೆ
“ಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಬಂದರೆ ಗ್ರಹಚಾರ ಬಿಡಿಸುತ್ತೇನೆ” ಎಂದು ಇನ್‌ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು ಎನ್ನಲಾದ ವಿಡಿಯೋ ತೀವ್ರ ಸಂಚಲನ ಮೂಡಿಸಿತ್ತು. ಈ ಸವಾಲನ್ನು ಸ್ವೀಕರಿಸಿರುವ ಹಿಂದೂ ಜಾಗರಣ ವೇದಿಕೆ, ಸೆಪ್ಟೆಂಬರ್ 18ರಂದು ಅದೇ ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಶೋಭಾಯಾತ್ರೆ ನಡೆಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಇನ್‌ಸ್ಪೆಕ್ಟರ್ ಧನಂಜಯ್ ದರ್ಪದ ಹಳೆಯ ಕರಾಳ ಮುಖಗಳು ಮತ್ತೆ ವೈರಲ್: ವಿಚಾರಣೆ ನೆಪದಲ್ಲಿ ಬ್ಯಾಟ್‌ನಿಂದ ಹಲ್ಲೆ
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್, ಇನ್ಸ್‌ಪೆಕ್ಟರ್ ಧನಂಜಯ್ ಅವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಸೆಪ್ಟೆಂಬರ್ 18ರಂದು ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಈ ಶೋಭಾಯಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ 5 ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಮೆರವಣಿಗೆಯನ್ನು ಇನ್‌ಸ್ಪೆಕ್ಟರ್ ಧನಂಜಯ್ ಅವರು ಕಣ್ತುಂಬ ನೋಡಿಕೊಳ್ಳಲಿ ಎಂದು ನೇರ ತಿರುಗೇಟು ನೀಡಿದ್ದಾರೆ.

