ಬಿಗ್ಬಾಸ್ (Bigg Boss) ಮನೆಯ ಟಾಸ್ಕ್ವೊಂದರಲ್ಲಿ ಭಯಂಕರ ದಾಳಿ ಪ್ರತಿದಾಳಿ ನಡೆದಿದೆ. ಇದು ನಡೆದಿದ್ದು ಸ್ಪರ್ಧಿ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ. ವಸ್ತುಗಳನ್ನ ಕಾಪಾಡಿಕೊಳ್ಳುವ ಟಾಸ್ಕ್ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್ನ್ನ ಮೊದಲು ಧನುಷ್ ಕಸಿದುಕೊಳ್ಳಲು ಬರ್ತಾರೆ. ಬಳಿಕ ಮಂಜು ಎಂಟ್ರಿ ಕೊಡ್ತಾರೆ. ಆಗ ಶುರುವಾಗೋದೇ ಭಯಂಕರ ದಾಳಿ. ಮಂಜುನಿಂದ ವಾಪಸ್ ಪಡೆದುಕೊಳ್ಳಲು ಸೌಂದರ್ಯ ಕೈಯಲ್ಲಿ ಹೊಡೆಯುತ್ತಾರೆ. ದೃಶ್ಯ ವೀಡಿಯೋದಲ್ಲಿ ಕಾಣುತ್ತದೆ. ಈ ಬಳಿಕ ಮಂಜು (Manju) ಬಹಳ ಆಕ್ರೋಶದಿಂದ ಸೌಂದರ್ಯ ಬಳಿ ಹೋಗಿ, ‘ನನಗೆ ಬರ್ತಿರೋ ಕೋಪಕ್ಕೆ ಎತ್ತಿ ಕುಕ್ಕಿಬಿಡ್ತೀನಿ’ ಎಂದು ಬೆದರಿಸುತ್ತಾರೆ. ಹೀಗೆ ಎರಡನೇ ವಾರದಲ್ಲಿ ಅತಿ ಎನ್ನಿಸುವ ರೋಷಾವೇಶದ ಆಟಕ್ಕೆ ಬಿಗ್ಬಾಸ್ ಮನೆ ಸಾಕ್ಷಿ ಆಯ್ತು.
ಬಿಗ್ಬಾಸ್ ಆಟದ ರೂಲ್ಸ್ ಪ್ರಕಾರ ಇಲ್ಲಿ ಸ್ಪರ್ಧಿಗಳು ಇನ್ನೋರ್ವ ಸ್ಪರ್ಧಿಗೆ ಹೊಡೆಯುವಂತಿಲ್ಲ. ರೂಲ್ಸ್ ಬ್ರೇಕ್ ಆದರೆ ಕೂಡಲೇ ಅವರನ್ನು ಆಟದಿಂದ ಹೊರಕ್ಕೆ ಕಳಿಸಬಹುದು. ಇದೀಗ ಸೌಂದರ್ಯ ಟಾಸ್ಕ್ ಆಡುವ ಕೋಪದಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಈ ಹಿಂದಿನ ಸೀಸನ್ನಲ್ಲಿ ಹುಚ್ಚ ವೆಂಕಟ್, ರಂಜಿತ್ ಹಾಗೂ ಸಂಯುಕ್ತ ಹೆಗಡೆ ಪ್ರತಿಸ್ಪರ್ಧಿ ಮೇಲೆ ಮ್ಯಾನ್ಹ್ಯಾಂಡ್ಲಿಂಗ್ ಮಾಡಿರೋ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಇದೀಗ ಸೌಂದರ್ಯ ಮೇಲೆ ಬಿಗ್ಬಾಸ್ ಯಾವ ರೀತಿಯ ಆ್ಯಕ್ಷನ್ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಇದನ್ನೂ ಓದಿ: BBK13 | ‘ಜಸ್ಟ್ ಶೋ ಪೀಸ್’ ಎಂದ ಗಗನ್, ಧನುಷ್ ಮಾತಿಗೆ ವೈಷ್ಣವಿ ಖಡಕ್ ಕೌಂಟರ್!
ಸೌಂದರ್ಯ-ಮಂಜುನಾಥ್ ನಡುವೆ ಎಲ್ಲೆ ಮೀರಿದ ಕೋಪ… ಮುಂದೇನು?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/vvMtgQPD3g
— Colors Kannada (@ColorsKannada) September 14, 2026
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿಗೆ ರಿಶಾ ಹೊಡೆದಿದ್ದರು. ಈ ವಿಚಾರಕ್ಕೆ ಗಿಲ್ಲಿ ಅಭಿಮಾನಿಗಳು ಪ್ರತಿಭಟನೆಯನ್ನೇ ಮಾಡಿದ್ದರು. ಇದೀಗ ಕೋಪದಲ್ಲಿ ಸೌಂದರ್ಯ ಮಂಜುಗೆ ಹೊಡೆದಿದ್ದಾರೆ. ಮಂಜು ಕೂಡ ಅತಿರೇಕದ ಮಾತುಗಳನ್ನಾಡಿದ್ದಾರೆ. ಈ ಜಗಳ ತಾರಕಕ್ಕೇರಿದ್ದು ಬಿಗ್ಬಾಸ್ ಯಾವ ರೀತಿ ಆ್ಯಕ್ಷನ್ ತೆಗೆದುಕೊಳ್ತಾರೆ ಅನ್ನೋದಾಗಿ ನೋಡ್ಬೇಕು.

