ಬೆಂಗಳೂರು: ದೇಶದ್ಯಾಂತ (ಸೆ. 11) ಶುಕ್ರವಾರ ಬ್ಯಾಂಕ್ ಯೂನಿಯನ್‌ಗಳು (Bank Union) ಮುಷ್ಕರಕ್ಕೆ ಕರೆ ನೀಡಿದ್ದು, ಬೆಂಗಳೂರು ಸೇರಿದಂತೆ (Bank Bandh) ರಾಜ್ಯದಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ.
ಈ ತಿಂಗಳು ವಾರದ ಎರಡನೇ ಶನಿವಾರಕ್ಕೂ ಒಂದು ದಿನ ಮೊದಲೇ ಬ್ಯಾಂಕ್ ರಜೆ ಇರಲಿದೆ. ವಾರಕ್ಕೆ ಐದು ದಿನಗಳ ಕೆಲಸದ ವಿಧಾನ, ಪಿಂಚಣಿಯ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದು, ಪರಿಣಾಮ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಶುಕ್ರವಾರ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆದ ಕಾರಣ ನಾಳೆಯಿಂದ ಸತತ ನಾಲ್ಕು ದಿನಗಳ ಕಾಲ ಜನರಿಗೆ ಬ್ಯಾಂಕ್ ಸೇವೆಗಳು ಲಭ್ಯವಿರುವುದಿಲ್ಲ.
ನಾಲ್ಕು ದಿನ ಬಂದ್ ಏಕೆ?
ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ, ವಾರಕ್ಕೆ ಐದು ದಿನಗಳ ಕೆಲಸ ವಿಧಾನವನ್ನು ಜಾರಿ ಮಾಡಬೇಕು. ಪಿಂಚಣಿ ಸಮಸ್ಯೆಗಳನ್ನು ತಕ್ಷಣದಿಂದಲೇ ಬಗೆಹರಿಸಬೇಕು. ಕೆಲಸ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಚೀನಾದ ಬಂದರಿನಲ್ಲಿ ಸರಕು ಸಾಗಣೆ ಹಡಗಿಗೆ ಬೆಂಕಿ – 25 ಮಂದಿ ದುರ್ಮರಣ
ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಲು ಬ್ಯಾಂಕ್ ಯೂನಿಯನ್‌ಗಳು ಈ ನಿರ್ಧಾರ ತೆಗೆದುಕೊಂಡಿವೆ. ಇದರೊಂದಿಗೆ ನಾಳೆ ಅಂದರೆ ಸೆಪ್ಟೆಂಬರ್ 11 ರಿಂದ ಬ್ಯಾಂಕ್ ಸೇವೆಗಳಲ್ಲಿ ಸಮಸ್ಯೆಗಳು ಎದುರಾಗಲಿದೆ. ಆ ಬಳಿಕ ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದು, ಸೋಮವಾರ ಗಣೇಶ ಚತುರ್ಥಿಯ ಇರುವುದರಿಂದ ಸಾರ್ವತ್ರಿಕ ರಜೆ ಇದ್ದು, ಸತತವಾಗಿ ನಾಲ್ಕು ದಿನಗಳು ಬಂದ್ ಇರಲಿದೆ.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; 6 ಮಂದಿ ಸ್ಥಳದಲ್ಲೇ ಸಾವು

