ಬೀಜಿಂಗ್: ಚೀನಾದ (China) ಕ್ವಿಂಗ್‌ಡಾವೊ ಬಂದರಿನಲ್ಲಿ (Qingdao Port) ನಿಂತಿದ್ದ ವಿದೇಶಿ ಧ್ವಜದ ಸರಕು ಸಾಗಣೆ ಹಡಗಿನಲ್ಲಿ (Cargo Ship) ಗುರುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಕ್ವಿಂಗ್‌ಡಾವೊ ಚೀನಾದ ಪ್ರಮುಖ ಪೂರ್ವ ಕರಾವಳಿ ಬಂದರು ನಗರವಾಗಿದ್ದು, ಅಲ್ಲಿ ನಿರ್ವಹಣಾ ಕಾಮಗಾರಿಗಾಗಿ ಹಡಗನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡಾಗ ಹಡಗಿನಲ್ಲಿ ಒಟ್ಟು 42 ಮಂದಿ ಇದ್ದರು ಎಂದು ವರದಿಯಾಗಿದೆ. ಘಟನೆಯ ಬಳಿಕ 17 ಮಂದಿಯನ್ನು ಹಡಗಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಇವರಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ | ಶಾಸ್ತ್ರದ ಮಾತು ನಂಬಿ ಊರನ್ನೇ ತೊರೆದ ಗೌಳಿ ಕುಟುಂಬಗಳು – ಸಾವಿನ ಭಯಕ್ಕೆ ಗ್ರಾಮವೇ ಖಾಲಿ
ಗುರುವಾರ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಜ್ವಾಲೆಗಳನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ವರದಿಯಾಗಿದೆ. ಚೀನಾದ ಸರ್ಕಾರಿ ಸುದ್ದಿಸಂಸ್ಥೆ ಪ್ರಕಾರ, ಬೆಳಗ್ಗೆ ಸುಮಾರು 11:15ಕ್ಕೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಂದರಿನಲ್ಲಿ ನಿರ್ವಹಣಾ ಕೆಲಸಕ್ಕಾಗಿ ಹಡಗನ್ನು ನಿಲ್ಲಿಸಲಾಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಲಕ್ನೋ-ದಮ್ಮಾಮ್ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ – ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್
ಹಡಗಿನ ಸಮೀಪದಲ್ಲಿರುವ ವಸತಿ ಪ್ರದೇಶದ ನಿವಾಸಿಯೊಬ್ಬರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಹಡಗಿನಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ತಾವು ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ಯಾವುದೇ ಸ್ಫೋಟದ ಸದ್ದು ಕೇಳಿಸಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇ-ಕಾಮರ್ಸ್ ನಿಯಮಗಳಿಗೆ ಕೇಂದ್ರ ತಿದ್ದುಪಡಿ – ಆನ್‌ಲೈನ್ ಶಾಪಿಂಗ್ ಮಾಡೋರು ತಿಳಿಯಲೇಬೇಕಾದ 7 ನಿಯಮಗಳೇನು?
ಹಡಗಿನ ಮುಂಭಾಗದ ಬಂದರು ಪ್ರದೇಶದಲ್ಲಿ ಹಲವು ಅಗ್ನಿಶಾಮಕ ವಾಹನಗಳು ಮತ್ತು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು. ಬೆಂಕಿ ನಂದಿಸುವುದು ಹಾಗೂ ಹಡಗಿನಲ್ಲಿದ್ದವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ತುರ್ತಾಗಿ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ನನ್ನ ದವಡೆ ಮೇಲೆ ಇಂದಿಗೂ ಗಾಯದ ಗುರುತಿದೆ: ಸಿಎಂ ವಿಜಯ್‌ಗೆ ಸ್ಟಾಲಿನ್ ತಿರುಗೇಟು
`ಓಷಿಯನ್ ಮೆಲೋಡಿ’ ಹೆಸರಿನ ಈ ಹಡಗು ಸುಮಾರು 190 ಮೀಟರ್ ಉದ್ದದ ಸರಕು ಹಡಗು ಆಗಿದೆ. ಈ ಹಡಗು ಲೈಬೀರಿಯಾ ಧ್ವಜವನ್ನು ಹೊಂದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

