ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ದವಡೆಯ ಮೇಲೆ ಒಂದು ಕೈಯಿಟ್ಟು ಸನ್ನೆ ಮಾಡಿ ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್‌ಗೆ (CM Vijay) ಡಿಎಂಕೆ (DMK) ಮುಖ್ಯಸ್ಥ ಹಾಗೂ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ (MK Stalin) `ತಂಬಿ’ ಅಂತಲೇ ತಿರುಗೇಟು ನೀಡಿದ್ದಾರೆ.
ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದ ಬಳಿಕ ಪೊಲೀಸರು ತಮ್ಮನ್ನು ಬಂಧಿಸಿದ ಘಟನೆ ಹಾಗೂ 1976ರಲ್ಲಿ ಜೈಲಿನಲ್ಲಿ ಅನುಭವಿಸಿದ ಭೀಕರ ಯಾತನೆಗಳನ್ನು ನೆನಪಿಸಿಕೊಂಡಿರುವ ಸ್ಟಾಲಿನ್, ತಮ್ಮ `ಎಕ್ಸ್’ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು
1976ರ ಜನವರಿ 31ರಂದು ‘ಮೀಸಾ’ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಸ್ಟಾಲಿನ್, 1977ರ ಮಾರ್ಚ್ನಲ್ಲಿ ತುರ್ತು ಪರಿಸ್ಥಿತಿ ಅಂತ್ಯಗೊಳ್ಳುವವರೆಗೂ ಸತತ ಹಲವು ತಿಂಗಳ ಕಾಲ ಮದ್ರಾಸ್ ಸೆಂಟ್ರಲ್ ಜೈಲಿನಲ್ಲಿದ್ದರು. ಎಲ್ಲರೂ ಒಂದೇ ಕೋಣೆಯಲ್ಲಿ ಮಲಗಬೇಕಿತ್ತು. ರಾತ್ರಿಯಿಡೀ ಪೊಲೀಸರು ಬೂಟುಗಳಿಂದ ಒದ್ದು, ಕ್ರೂರವಾಗಿ ಥಳಿಸುತ್ತಿದ್ದರು. ಆ ಭೀಕರ ಏಟಿಗೇ ನನ್ನ ದವಡೆ ಮುರಿದಿದ್ದು, ನೀವು ವಿಧಾನಸಭೆಯಲ್ಲಿ ದವಡೆಯ ಮೇಲೆ ಕೈಯಿಟ್ಟು ಹೀಗೆ ಸನ್ನೆ ಮಾಡಿ ತೋರಿಸಿದ್ದೀರಿ, ಅಂದು ಬಿದ್ದ ಪೆಟ್ಟಿನ ಗುರುತುಗಳು ಇಂದಿಗೂ ನನ್ನ ದವಡೆಯ ಮೇಲಿವೆ. ನಾನು ಅದನ್ನು ಇಲ್ಲ ಎನ್ನುವುದಿಲ್ಲ ಎಂದು ಸ್ಟಾಲಿನ್ ವೀಡಿಯೋದಲ್ಲಿ ಭಾವುಕರಾಗಿ ನುಡಿದಿದ್ದಾರೆ. ಇದನ್ನೂ ಓದಿ: ಕುತೂಹಲ ಕೆರಳಿಸಿದ ಹೆಚ್‌ಸಿಎಂ – ಪರಂ ಭೇಟಿ; ಮಹದೇವಪ್ಪದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ

