ಬೆಂಗಳೂರು: ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಅವರ ನಿವಾಸಕ್ಕೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ (G Parameshwar) ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿನ (Bengaluru) ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ಪರಮೇಶ್ವರ್ ತೆರಳಿ, ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಮಹದೇವಪ್ಪ ಅವರ ಸರ್ಕಾರಿ ನಿವಾಸದ ವಿಚಾರ ಮುನ್ನೆಲೆಗೆ ಬಂದಿತ್ತು. ನಿನ್ನೆಯಷ್ಟೇ ಸಚಿವ ಬೈರತಿ ಸುರೇಶ್ ಅವರು ಡಿಪಿಎಆರ್‌ಗೆ ಮಹದೇವಪ್ಪ ಬರೆದಿದ್ದ ಪತ್ರವನ್ನ ಬಿಡುಗಡೆ ಮಾಡಿದ್ದರು. ಆಗಸ್ಟ್ 15 ರಂದೇ ಸರ್ಕಾರಿ ನಿವಾಸ ಖಾಲಿ ಮಾಡಿರುವುದಾಗಿ ಮಹದೇವಪ್ಪ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಬೈರತಿ ಸುರೇಶ್ ಹೇಳಿದ್ದರು. ಆದರೀಗ ಅದೇ ಸರ್ಕಾರಿ ನಿವಾಸದಲ್ಲಿರುವ ಮಹದೇವಪ್ಪ ಅವರನ್ನ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ಮಾಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹದೇವಪ್ಪ ಅವರು ನಿವಾಸ ಖಾಲಿ ಮಾಡಿರುವುದಾಗಿ ಪತ್ರ ಬರೆದಿರುವ ಬೆನ್ನಲ್ಲೇ, ಅವರು ಅದೇ ನಿವಾಸದಲ್ಲಿರುವಾಗಲೇ ಪರಮೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಇಬ್ಬರು ನಾಯಕರ ಭೇಟಿಯ ವೇಳೆ ಯಾವ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂಬುದು ಸದ್ಯಕ್ಕೆ ಅಧಿಕೃತವಾಗಿ ತಿಳಿದುಬಂದಿಲ್ಲ.

