ಬಳ್ಳಾರಿ: ಇಂದು ಬಿಜೆಪಿ (BJP) ಪಾದಯಾತ್ರೆಗೆ ಕೊನೆಯ ದಿನ. ಇದರ ಬೆನ್ನಲ್ಲೇ ಇಂದು ಸಂಜೆ ಬೃಹತ್ ಸಮಾರೋಪ ಸಮಾವೇಶ ನಡೆಯಲಿದ್ದು, 50 ಸಾವಿರಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಸೆಪ್ಟೆಂಬರ್ 1 ರಿಂದ ನಡೆದ ಬಳ್ಳಾರಿ (Balalry) ಚಲೋ ಪಾದಯಾತ್ರೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ರಾಜ್ಯ ಸರ್ಕಾರದ ವಿರುದ್ಧದ 170 ಕಿ.ಮೀ ಪಾದಯಾತ್ರೆ ಸಕ್ಸಸ್ ಮಾಡಿದ್ದಾರೆ. ಇಂದು ಸಂಜೆ ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ 50ರಿಂದ 70 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಮನಗರ | ಆಕಸ್ಮಿಕ ಅಗ್ನಿ ಅವಘಡಕ್ಕೆ ಹೊತ್ತಿ ಉರಿದ ಶಾಲಾ ಕೊಠಡಿ
ಸಮಾವೇಶದ ಭದ್ರತೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ನಿನ್ನೆ (ಸೆ.9) ರಾತ್ರಿಯೇ ವಿಜಯೇಂದ್ರ ನೇತೃತ್ವದ ಟೀಂ ಬಳ್ಳಾರಿ ತಲುಪಿದ್ದು, ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ಇನ್ನೂ ಸಮಾವೇಶಕ್ಕೂ ಮುನ್ನ ವಿಜಯೇಂದ್ರ ಟೆಂಪಲ್ ರನ್ ಮಾಡಿದ್ದಾರೆ. ಬಳ್ಳಾರಿ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ನಗರದ ಪ್ರಮುಖ ಸರ್ಕಲ್‌ಗಳಿಗೆ ತೆರಳಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಬೆಳಿಗ್ಗೆ 10:30ಕ್ಕೆ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ನಂತರ 11 ಗಂಟೆಗೆ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ (ಮೋತಿ ವೃತ್ತ) ಮಾಲಾರ್ಪಣೆ ಮಾಡಿ, 11:15ಕ್ಕೆ ಡಾ ಬಾಬು ಜಗಜೀವನ್ ರಾಮ್ ಪುತ್ಥಳಿಗೆ ಮಾಲಾರ್ಪಣೆ (ರಂಗಮಂದಿರ ಎದುರುಗಡೆ) ಮಾಡಿದ್ರು. 11:30ಕ್ಕೆ ಡಾ.BR ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ (ಅಂಬೇಡ್ಕರ್ ಭವನ) ಮಾಡಿ, ಮಧ್ಯಾಹ್ನ 12ಕ್ಕೆ ಭಕ್ತ ಕನಕದಾಸ ಪುತ್ಥಳಿಗೆ ಹಾರ ಹಾಕಿ ಕಂಬಳಿ ಹೊದಿಸಿ, ಕಾಡು ಮಲ್ಲೇಶ್ವರ ದೇವರ ದರ್ಶನ ಪಡೆದರು.
ಇನ್ನೂ ಸಂಜೆ 3:30ಕ್ಕೆ ವಿಜಯೇಂದ್ರ ಅವರು ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ, ಪಾದಯಾತ್ರೆ ವಾಲ್ಮೀಕಿ ವೃತ್ತದಿಂದ ದುರ್ಗಮ್ಮ ದೇವಸ್ಥಾನದ ಮೂಲಕ ರಾಯಲ್ ಸರ್ಕಲ್ ಮಾರ್ಗವಾಗಿ ಮುನ್ಸಿಪಾಲ್ ಮೈದಾನ ತಲುಪಲಿದೆ. ಬಳಿಕ ಮುನ್ಸಿಪಲ್ ಮೈದಾನದಲ್ಲಿ ಸಮಾರೋಪ ಸಮಾರಂಭದ ಬೃಹತ್ ಸಮಾವೇಶ ನಡೆಯಲಿದೆ.ಇದನ್ನೂ ಓದಿ: ಚರಂಡಿ ದಾಟಲು ವೃದ್ಧನ ಬೆನ್ನೇರಿ ಕುಳಿತ ಕಂದಾಯ ಅಧಿಕಾರಿ

