ಬೆಂಗಳೂರು: ಜೈಲಿನಲ್ಲಿರೋ ಕೊಲೆ ಆರೋಪಿ ದರ್ಶನ್ ಕುಟುಂಬಕ್ಕೆ ಪಟ್ಟೆ ತಲೆ ಹೆಬ್ಬಾತು (Bar Geaded Goose) ಸಂಕಷ್ಟ ತಂದೊಡ್ಡಿದ್ದು ಹೈಕೋರ್ಟ್ ಕದ ತಟ್ಟುವಂತೆ ಮಾಡಿದೆ.
ದರ್ಶನ್ (Darshan) ಫಾರ್ಮ್ ಹೌಸ್‌ನಲ್ಲಿ 4 ಪಟ್ಟೆ ತಲೆ ಹೆಬ್ಬಾತು ಪತ್ತೆ ಹಿನ್ನೆಲೆ, ಅರಣ್ಯಾಧಿಕಾರಿಗಳಿಂದ ಟಿ.ನರಸೀಪುರ ಕೋರ್ಟ್ ಗೆ ಖಾಸಗಿ ದೂರು ಸಲ್ಲಿಕೆಯಾಗಿದೆ.
ಈ ಸಂಬಂಧ ದರ್ಶನ್, ವಿಜಯಲಕ್ಷ್ಮಿ, ನಾಗರಾಜ್‌ಗೆ ಕೋರ್ಟ್ ಸಮನ್ಸ್ ನೀಡಿತ್ತು. ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಗೆ ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ಅರ್ಜಿ ಸಲ್ಲಿಸಿದ್ದು, 4 ಪಟ್ಟೆ ತಲೆ ಹೆಬ್ಬಾತುಗಳನ್ನು ನಾವು ಸಾಕಿಲ್ಲ. ಹೀಗಾಗಿ ವನ್ಯ ಜೀವಿ ಕಾಯ್ದೆ ಅಡಿಯ ಕೇಸ್ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.

