ಬಹುನಿರೀಕ್ಷಿತ ರಾಮಾಯಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, (Ramayana) ಈ ವೇಳೆ ಖ್ಯಾತ ನಿರ್ದೇಶಕರೊಬ್ಬರು ರಾಮನ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಶ್ ರಾವಣನಾಗಿ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ʻರಾಮಾಯಣʼ ಬಿಡುಗಡೆಗೆ ಜನರೆಲ್ಲ ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಚಿತ್ರದ ಕುರಿತು ಪರ ವಿರೋಧದ ಅಲೆ ಜೋರಾಗಿದೆ. ಇದರ ನಡುವೆ ರಾಮನ ಪಾತ್ರಧಾರಿ ಕುರಿತು ನಿರ್ದೇಶಕ ಶಿವ ಸಾಗರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರು ಈ ಶಿವ ಸಾಗರ್?
ಶಿವಸಾಗರ್ ಈ ಹಿಂದಿನ ಪ್ರಸಿದ್ಧ ರಾಮಾಯಣ ಹಿಂದಿ ಧಾರಾವಾಹಿಯ ಸೃಷ್ಟಿಕರ್ತ ರಮಾನಂದ ಸಾಗರ್ ಅವರ ಮೊಮ್ಮಗ. ರಾಮಾಯಣದ ಉಳಿದೆಲ್ಲ ಪಾತ್ರಧಾರಿಗಳ ಕುರಿತು ಒಪ್ಪಿಗೆ ಸೂಚಿಸಿರುವ ರಮಾನಂದ ಸಾಗರ್ ಮೊಮ್ಮಗ, ಇದೀಗ ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಸೂಟ್ ಆಗೋದಿಲ್ಲ ಎಂದಿದ್ದಾರೆ.

ತಮ್ಮ ಮಾತಿಗೆ ಸ್ಪಷ್ಟನೆಯನ್ನೂ ಸಹ ನೀಡಿರುವ ಶಿವ ಸಾಗರ್, ಈ ರೀತಿ ಹೇಳಿಕೆ ನೀಡುವುದಕ್ಕೆ ಕಾರಣವೇ ʻಅನಿಮಲ್ʼ ಚಿತ್ರ ಎಂದಿದ್ದಾರೆ. ʻʻಈ ಹಿಂದೆ ರಣಬೀರ್ ಕಪೂರ್ ರಗಡ್, ಮತ್ತು ಬೋಲ್ಡ್ ಪಾತ್ರದ ಅನಿಮಲ್ ಚಿತ್ರ ಮಾಡಿದ್ದರು. ಈ ಸಿನಿಮಾದಲ್ಲಿ ರಣಬೀರ್ ಅತ್ಯಂತ ಕ್ರೂರಿಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಅವರ ಬೆನ್ನಿಗೆ ಎನಿಮಲ್ ಪಾತ್ರದ ಬ್ಯಾಗೇಜ್ ಇದೆ. ಈ ಕಾರಣಕ್ಕೆ ಅವರನ್ನು ರಾಮನ ರೂಪದಲ್ಲಿ ನೋಡಲು ಮನಸ್ಸು ಒಪ್ಪುವುದಿಲ್ಲʼʼ ಎಂದು ಹೇಳುವ ಮೂಲಕ ಶಾಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.ಇದನ್ನೂ ಓದಿ: ‘ಮಹಾನ್’ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಮಹಾನ್ ನಟರು
ರಾಮಾಯಣ ಸೀರಿಯಲ್ ಸೃಷ್ಟಿಕರ್ತನ ಮೊಮ್ಮಗ ಶಿವ ಸಾಗರ್ ರಾಮನ ಪಾತ್ರಧಾರಿ ರಣಬೀರ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ʻರಣಬೀರ್ ಕಪೂರ್ ಉತ್ತಮ ನಟ, ಮಾರ್ಕೇಟಿಂಗ್ ವಿಚಾರದಲ್ಲೂ ರಾಮಾಯಣ ಸಿನಿಮಾ ಅವರಿಂದ ಹೈಲೈಟ್ ಆಗುತ್ತಿದೆ. ಆದರೆ, ಅವರು ಬ್ಯಾಗೇಜ್ ಹೊಂದಿದ್ದಾರೆ. ಉತ್ತಮವಾಗಿ ನಟಿಸಬಲ್ಲರು. ಹೀಗಿದ್ದಾಗಲೂ ಅವರನ್ನು ರಾಮನಾಗಿ ನೋಡಲು ಮನಸ್ಸು ಒಪ್ಪದು ಎಂದಿದ್ದಾರೆ. ಅವರ ಈ ಮಾತನ್ನ ರಣಬೀರ್ ಅಭಿಮಾನಿಗಳು ಒಪ್ಪದಾಗಿದ್ದಾರೆ. ಓರ್ವ ನಟ ಎಲ್ಲಾ ರೀತಿ ಪಾತ್ರಗಳನ್ನೂ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆಯಲ್ಲಿ ಕಡ್ಲೆ ಬೀಜ ಸಾಂಗ್
ಶಿವ ಸಾಗರ್ ಮಾತಿಗೆ ಪರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರೋ ಟ್ರೈಲರ್ ನೋಡಿರುವ ವೀಕ್ಷಕರು, ರಾಮನ ಪಾತ್ರಧಾರಿ ರಣಬೀರ್ ಪಾತ್ರಕ್ಕೆ ಯಾವುದೇ ನೆಗೆಟಿವ್ ಕಮೆಂಟ್ ಮಾಡಿಲ್ಲ. ಅಷ್ಟೇ ಅಲ್ಲ ಸಿನಿಮಾ ಇದೇ ದೀಪಾವಳಿಗೆ ತೆರೆ ಕಾಣುವುದಕ್ಕೆ ಸಜ್ಜಾಗಿದೆ.
