– ಶಿಖಾ ಇನ್ ಭೀಕರ ಅಗ್ನಿ ಅವಘಡದ ನಂತರ ಸರ್ಕಾರ ನಿರ್ಧಾರ
ಕೋಲ್ಕತ್ತಾ: ಅಗ್ನಿ ಸುರಕ್ಷತಾ (Fire Accident) ಕ್ರಮಗಳನ್ನು ಪಾಲಿಸದ ಕಾರಣ ಕೋಲ್ಕತ್ತಾದ (Kolkata Hotel check) ಸುಮಾರು 919 ಹೋಟೆಲ್ಗಳು ಮತ್ತು ಗೆಸ್ಟ್ಹೌಸ್ಗಳಿಗೆ (Temporary Closure Notice) ತಾತ್ಕಾಲಿಕವಾಗಿ ಬಂದ್ ಮಾಡಲು ನೋಟಿಸ್ ನೀಡಿದೆ.
ಇತ್ತೀಚೆಗೆ ನಗರದಲ್ಲಿ ನಡೆದ ಭೀಕರ ಅಗ್ನಿ ದುರಂತದ ನಂತರ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್, ನಗರದ ಹೋಟೆಲ್ ಮತ್ತು ಗೆಸ್ಟ್ಹೌಸ್ಗಳ ಮೇಲೆ ಅಗ್ನಿ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಕಟ್ಟುನಿಟ್ಟಿನ ತಪಾಸಣೆ ನಡೆಸಿವೆ.
ಪಶ್ಚಿಮ ಬಂಗಾಳದ ಅಗ್ನಿಶಾಮಕ ಸೇವೆಗಳು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಕೋಲ್ಕತ್ತಾ ಪೊಲೀಸರ ಅಧಿಕಾರಿಗಳನ್ನೊಳಗೊಂಡ ಜಂಟಿ ತಪಾಸಣಾ ತಂಡಗಳು ಇಲ್ಲಿಯವರೆಗೆ ಕೋಲ್ಕತ್ತಾದಾದ್ಯಂತ ಸುಮಾರು 960 ಹೋಟೆಲ್ಗಳು ಮತ್ತು ಗೆಸ್ಟ್ಹೌಸ್ಗಳನ್ನು ಪರಿಶೀಲಿಸಿವೆ.
ಇನ್ನು ಇವುಗಳಲ್ಲಿ, ಕೇವಲ 41 ಸಂಸ್ಥೆಗಳು ಮಾತ್ರ ಅಗತ್ಯವಾದ ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಿರುವುದು ಕಂಡುಬಂದಿದೆ, ಉಳಿದ 919 ಸಂಸ್ಥೆಗಳಿಗೆ ನಿಗದಿತ ಸುರಕ್ಷತಾ ಮಾನದಂಡಗಳನ್ನು ಪೂರೈಸುವವರೆಗೆ ತಾತ್ಕಾಲಿಕವಾಗಿ ಹೋಟೆಲ್ ಮತ್ತು ಗೆಸ್ಟ್ಹೌಸ್ಗಳನ್ನು ಮುಚ್ಚುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಕರ್ನಾಟಕದ ರೈಲು ಜಾಲಕ್ಕೆ ಹೊಸ ಬಲ – 10 ಸಾವಿರ ಕೋಟಿ ಮೊತ್ತದ ಎರಡು ರೈಲ್ವೆ ಯೋಜನೆಗಳಿಗೆ ಕೇಂದ್ರ ಅನುಮೋದನೆ
ನಗರದಲ್ಲಿರುವ ಒಟ್ಟು 3,700 ಹೋಟೆಲ್ಗಳು ಮತ್ತು ಅತಿಥಿ ಗೃಹಗಳಲ್ಲಿ ಸುಮಾರು ಕಾಲು ಭಾಗದಷ್ಟು ತಪಾಸಣೆ ನಡೆದಿವೆ. ಇನ್ನುಳಿದ ಸಂಸ್ಥೆಗಳಿಗೂ ತಪಾಸಣಾ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಖಾ ಇನ್ ಭೀಕರ ಅಗ್ನಿ ಅವಘಡದ ನಂತರ ತೀವ್ರ ತಪಾಸಣೆ
ಆಗಸ್ಟ್ 19 ರಂದು ಮಧ್ಯ ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ನಲ್ಲಿರುವ ಶಿಖಾ ಇನ್ ಗೆಸ್ಟ್ಹೌಸ್ನಲ್ಲಿ ಸಂಭವಿಸಿತ್ತು. ಈ ಬೆಂಕಿ ಅವಘಡದಲ್ಲಿ ಏಳು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದರು. ಈ ಭೀಕರ ಅಗ್ನಿ ಅವಘಡದ ನಂತರ ನಗರದ ಪ್ರತೀ ಹೋಟೆಲ್ ಮತ್ತು ಗೆಸ್ಟ್ಹೌಸ್ಗಳಿಗೆ ಸರ್ಕಾರ ಕಟ್ಟುನಿಟ್ಟಿನ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಇದನ್ನೂ ಓದಿ: ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ: ಬಹುಭಾಷಾ ತಾರೆಯರ ಸಮಾಗಮ
