ಉತ್ತರಪ್ರದೇಶ: ಇತ್ತೀಚಿಗೆ ಅಯೋಧ್ಯೆ ರಾಮಮಂದಿರದ (Ayodhya Ram Temple) ಹೊಸ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ (Air Marshal Jeetendra Mishra) ಅವರು ನೇಮಕಗೊಂಡಿದ್ದಾರೆ. ಅದರ ಬೆನ್ನಲ್ಲೇ ಮಂದಿರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ತರಲಾಗಿದೆ.
ಶ್ರೀ ರಾಮಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಹೊಸ ನಿಯಮಗಳ ಮೂಲಕ ಅಕ್ರಮ ತಪ್ಪಿಸಲು ಟ್ರಸ್ಟ್ ನಿರ್ಧರಿಸಿದೆ. ದೇಣಿಗೆ ಎಣಿಕೆ (Donation Counting) ಮಾಡುವ ಜೇಬಿಲ್ಲದ ಸಮವಸ್ತ್ರ ಕಡ್ಡಾಯವಾಗಿದ್ದು, ಎಣಿಕಾ ಕೇಂದ್ರದ ಪ್ರವೇಶ ಹಾಗೂ ನಿರ್ಗಮನ ವೇಳೆ ತಪಾಸಣೆ ಕಡ್ಡಾಯಗೊಳಿಸಿದ್ದಾರೆ. ಜೊತೆಗೆ ದೇಣಿಗೆ ಎಣಿಕೆಯ ಇಡೀ ಪ್ರಕ್ರಿಯೆಯ ವಿಡಿಯೋವನ್ನು ರೆಕಾರ್ಡ್ ಮಾಡಲಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

ಈ ಮೊದಲು ಸಿಸಿಟಿವಿ (CCTV) ದೃಶ್ಯಗಳನ್ನು 45 ದಿನಗಳ ಬ್ಯಾಕಪ್ ಇಡಲಾಗುತ್ತಿತು. ಇದೀಗ ಅದನ್ನು 180 ದಿನಗಳ ಕಾಲ ಸಂರಕ್ಷಿಸಲು ನಿರ್ಧಾರ ಮಾಡಲಾಗಿದೆ. ಸಾಮಾನ್ಯ ಕ್ಯಾಮೆರಾಗಳ ಬದಲಿಗೆ PTZ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಿದ್ದಾರೆ. ಇವು Auto Rotate (ಸ್ವಯಂ ತಿರುಗುವಿಕೆ) ಮತ್ತು Zooming System ಹೊಂದಿವೆ. ಎಣಿಕಾ ಕೇಂದ್ರ ಮೇಲ್ವಿಚಾರಣೆ ಮಾಡಲು 13 ಕ್ಯಾಮೆರಾಗಳ ಬದಲಿಗೆ 27 ಕ್ಯಾಮೆರಾ ಅಳವಡಿಕೆ ನಿರ್ಧಿರಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ ಎಸ್‌ಐಎಸ್ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದ್ದಾರೆ.
ಇನ್ನೂ ಎಣಿಕಾ ಕೇಂದ್ರದಲ್ಲಿ ಅನುಮತಿ ಪಡೆದ 43 ಜನರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಡಿಜಿಟಲ್ ರೂಪದಲ್ಲಿ ಲೆಕ್ಕಪತ್ರ ನಿರ್ವಹಣೆ, ಇದಕ್ಕಾಗಿ ಸಿಎ ನೇಮಕ ಮಾಡಲಾಗುವುದು. ಹಣ ಬಿಡುಗಡೆಗೆ ಖಜಾಂಚಿ ಮಹೇಶ್ ಭಾಗಚಂದಕ್ ಮತ್ತು ಮುಖ್ಯ ಎಂಜಿನಿಯರ್ ಜಗದೀಶ್ ಅಫಲೆ, ಸಿಎ ಚಂದನ್ ರೈ ಸಹಿ ಕಡ್ಡಾಯ. ಗುತ್ತಿಗೆ ನೌಕರರ ಬದಲಿಗೆ ಎಸ್‌ಬಿಐನ 36 ಸಿಬ್ಬಂದಿಯನ್ನು ಎಣಿಕೆಗೆ ನೇಮಕ ಮಾಡಲಾಗಿದೆ. ಎಸ್‌ಬಿಐ ಬ್ಯಾಂಕ್ ವಾಹನದಲ್ಲೇ ನಗದು ಹಣ ವರ್ಗಾವಣೆ ಮಾಡುವುದರ ಜೊತೆಗೆ ಪ್ರತಿ ಹಂತದ ವಿಡಿಯೋವನ್ನು ರೆಕಾರ್ಡ್ ಮಾಡುವುದಾಗಿ ಶ್ರೀ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ.ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೂವರು ಹೊಸ ಟ್ರಸ್ಟಿಗಳ ನೇಮಕ
ಇತ್ತೀಚಿಗೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೊಸ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ದೆಹಲಿ ಮೂಲದ ಮಹೇಶ್ ಭಾಗ್ಚಂದ್ಕ, ಅಯೋಧ್ಯೆಯ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಕ ಮಾಡಲಾಗಿದೆ.ಇದನ್ನೂ ಓದಿ: ರಾಮಮಂದಿರ ಸಿಇಒ ಆದ ಬಳಿಕ ಮೊದಲ ಬಾರಿಗೆ ಜಿತೇಂದ್ರ ಮಿಶ್ರಾ ಅಯೋಧ್ಯೆಗೆ ಭೇಟಿ
