ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ವಿರುದ್ಧ ವಿಮಾನಯಾನ ಕಂಪನಿ ಡ್ಯೂನ್ಸ್ ಏವಿಯೇಷನ್ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ತಮ್ಮ ಚಾರ್ಟರ್ಡ್ ವಿಮಾನದ ಬಗ್ಗೆ (Court) ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಕಂಪನಿ ಆರೋಪಿಸಿದೆ.
‘ಲೆಗೊ ವಿಮಾನ’ ಎಂದಿದ್ದ ನೋರಾ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈ-ಜೈಪುರ ಪ್ರಯಾಣದ ವೇಳೆ ನೋರಾ ಫತೇಹಿ ಸೆಸ್ನಾ ಸೈಟೇಶನ್ ಸಿಜೆ2 ವಿಮಾನದೊಳಗೆ ವಿಡಿಯೋ ರೆಕಾರ್ಡ್ ಮಾಡಿದ್ದರು. ಈ ವಿಡಿಯೋಗಳಲ್ಲಿ ವಿಮಾನವನ್ನು “ಲೆಗೊ ವಿಮಾನ” (ಆಟಿಕೆಯಂತಿರುವ ವಿಮಾನ) ಎಂದು ಕರೆದಿದ್ದರು.
ಈ ವಿಡಿಯೋಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದರು. ನೋರಾಗೆ ಸಾಮಾಜಿಕ ಮಾಧ್ಯಮದಲ್ಲಿ ಕೋಟ್ಯಂತರ ಅನುಯಾಯಿಗಳಿರುವುದರಿಂದ ಅವರ ಕಾಮೆಂಟ್‌ಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿವೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ.
ಈ ಪೋಸ್ಟ್‌ಗಳಿಂದ ಬುಕಿಂಗ್‌ಗಳು ರದ್ದಾಗಿದ್ದು, ಒಟ್ಟಾರೆ ಬುಕಿಂಗ್‌ನಲ್ಲಿ ಶೇಕಡಾ 15ರಿಂದ 20ರಷ್ಟು ಕುಸಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಕಂಪನಿಯನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ವಿಮಾನ ಡಿಜಿಸಿಎ ಪ್ರಮಾಣೀಕೃತ ಎಂದ ಕಂಪನಿ
ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮೊಕದ್ದಮೆಯಲ್ಲಿ, ನೋರಾ ಅವರ ಹೇಳಿಕೆಗಳನ್ನು ಯಾವುದೇ ತಾಂತ್ರಿಕ ಜ್ಞಾನ, ಪರಿಶೀಲನೆ ಅಥವಾ ವಾಸ್ತವಿಕ ಆಧಾರವಿಲ್ಲದೆ ಮಾಡಲಾಗಿದೆ ಎಂದು ಕಂಪನಿ ಆರೋಪಿಸಿದೆ.
ಡ್ಯೂನ್ಸ್ ಏವಿಯೇಷನ್ ತಮ್ಮ ವಿಮಾನ ಹಾರಾಟಕ್ಕೆ ಯೋಗ್ಯವಾಗಿದ್ದು, ಮಾನ್ಯ ಎನ್‌ಎಸ್‌ಒಪಿ ಅಡಿಯಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: ದೊಡ್ಮನೆ ಫ್ಲೈಟ್‌ನಲ್ಲಿ ವಾರ್ ಸೈರನ್ – ವೈಷ್ಣವಿ, ಕಿರಣ್ ಶಾಸ್ತ್ರಿ ಮಧ್ಯೆ `ಜಳಕ’ದ ಜಗಳ
ನೋರಾ ಅವರ ಈ ನಡೆಗೆ 3 ಕೋಟಿ ರೂ. ಪರಿಹಾರದ ಜೊತೆಗೆ, ವಿಮಾನದ ಕುರಿತು ನೋರಾ ಮಾಡಿರುವ ಕಾಮೆಂಟ್‌ಗಳು ಅಥವಾ ಉಲ್ಲೇಖಗಳನ್ನು ಒಳಗೊಂಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ನೋರಾ ಅವರಿಗೆ ನಿರ್ದೇಶನ ನೀಡಬೇಕು ಎಂದು ಕಂಪನಿ ಕೋರಿದೆ.ಇದನ್ನೂ ಓದಿ: ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಒಂಟಿ ಸಲಗ
