ಬೆಂಗಳೂರು: ಕೆಪಿಎಸ್ಸಿ (KPSC) ಹಗರಣದ ವಿರುದ್ಧ ದೂರು ಕೊಟ್ಟ ಅಭ್ಯರ್ಥಿ ಮಂಜುನಾಥ ಅವರಿಗೆ ಇದೀಗ ಅನಾಮಿಕ ವ್ಯಕ್ತಿಯೋರ್ವ ಬೆದರಿಕೆ ಹಾಕಿದ್ದಾನೆ.
ಕರೆ ಮಾಡಿ ಬೆದರಿಕೆ ಹಾಕಿದ ಅನಾಮಿಕ, ವೆಟರನರಿ ಆಫೀಸರ್ ಲಿಸ್ಟ್ನಲ್ಲಿ ನನ್ನ ಫ್ರೆಂಡ್ ಒಬ್ಬಳ ಹೆಸರು ಕೊಟ್ಟಿದ್ದೀರಿ. ಏನು ಪ್ರೂಫ್ ಇಟ್ಟುಕೊಂಡು ಕೊಟ್ಟಿದ್ದೀರಿ. ನಿಮಗೆ ಕನ್ಫರ್ಮ್ ಆಗಿದ್ಯಾ? ಏನಾದ್ರೂ ಪ್ರೂಫ್ ಇದ್ಯಾ? ನೀನು ಎಲ್ಲಿರೋದು? ಯಾಕೆ ದೂರು ಕೊಟ್ಟೆ? ಏನು ಎವಿಡೆನ್ಸ್ ಇದೆ ಅಂತಾ ಕೊಟ್ಟೆ? 40% ಸ್ಕ್ಯಾಮ್ ಆಗಿದೆ ಅಂತಿದ್ರಲ್ಲ ಇದಕ್ಕೆಲ್ಲ ಪ್ರೂಫ್ ಇದ್ಯಾ? ಹುಚ್ಚು ಹಿಡಿದಿದ್ಯಾ? ನೀನು ಎಲ್ಲಿರೋದು ಹೇಳು ಎಂತ ಆವಾಜ್ ಹಾಕಿದ್ದಾನೆ. ಇದನ್ನೂ ಓದಿ: ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಅನುಮಾನಾಸ್ಪದ ಅಭ್ಯರ್ಥಿಗಳ ಲಿಸ್ಟ್ ಕೊಟ್ಟಿದ್ಯಾಕೆ? ನಿಂಗೆ ಯಾರ್ ಹೇಳಿದ್ದು ಇದನ್ನೆಲ್ಲಾ ಮಾಡೋಕೆ? ನಿಮ್ಮ ಮೇಲೆ ನಾವು ಕೇಸ್ ಮಾಡ್ತೀವಿ. ನಾವು ಮಾನಹಾನಿ ಕೇಸ್ ಹಾಕ್ತೀವಿ. ನಮಗೂ ಲಾಯರ್ ಇದಾರೆ, ಎಲ್ಲಾನೂ ಗೊತ್ತಿದೆ. ಇದೆಲ್ಲ ಮಾಡೋಕೆ ನೀನೇನು ಸರ್ಕಾರನಾ? ಎಂದು ಬೆದರಿಕೆ ಹಾಕಿದ್ದಾನೆ.
