– ಇಂತಹವರನ್ನೆಲ್ಲಾ ಸುಮ್ಮನೇ ಬಿಡಬಾರದು, ಅಲ್ಲಲ್ಲೇ ಅರೆಸ್ಟ್ ಮಾಡಬೇಕು: ಹೈಕೋರ್ಟ್ ಗರಂ
ಬೆಂಗಳೂರು: ಕೆಪಿಎಸ್‌ಸಿ ಹಗರಣ (KPSC Scam) ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಇಂಥ ಕೃತ್ಯಗಳಿಂದಾಗಿ ಈಚೆಗೆ ದೇಶದಲ್ಲಿ ಭಾರಿ ಪ್ರತಿಭಟನೆ ನಡೆಯಿತು. 24 ಪ್ರತಿಭಾವಂತರಿಗೆ ಅನ್ಯಾಯವಾಗಿದೆ ಎಂದು ವರದಿ ಇದೆ. ರಾತ್ರಿ-ಹಗಲು ಓದಿದವರ ಕಥೆ ಏನಾಗಬೇಕು ಎಂದು ಹೈಕೋರ್ಟ್ ತರಾಟೆ ತೆಗೆದುಕೊಂಡಿತು. ಇದನ್ನೂ ಓದಿ: KPSC Scam | ಸಿಐಡಿ ಮುಂದೆ ಕನ್ನಾಳೆ ಹೊಸ ನಾಟಕ – ಕಾವೇರಿ ನದಿಗೆ ಸಾಕ್ಷ್ಯಾಧಾರ ಎಸೆದಿರೋದಾಗಿ ಹೇಳಿಕೆ
ಸಾಹುಕಾರ್ ಪರವಾಗಿ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಕೆಪಿಎಸ್‌ಸಿಯ ಎಲ್ಲ ಪದಾಧಿಕಾರಿಗಳ ಬಗ್ಗೆಯೂ ಆರೋಪ ಮಾಡಲಾಗಿದೆ. ಸಂಬಂಧಿಗೆ ನೆರವಾದ ಆರೋಪ ಮಾತ್ರ ಸಾಹುಕಾರ್ ವಿರುದ್ಧ ಇದೆ ಎಂದು ವಾದಿಸಿದರು.
ತಂದೆ ಸಹಕಾರ ಇಲ್ಲದೆ ಮಗಳು ಆಯ್ಕೆ ಆಗುತ್ತದೆ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಹೇಗೆ ಸಾಧ್ಯ? ಯಾರು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಜಡ್ಜ್ ಮಾತನಾಡಿದರು. ಎಸ್‌ಪಿಪಿ ಬಿ.ಎನ್.ಜಗದೀಶ್ ಉತ್ತರಿಸಿ, ಈಗಾಗಲೇ ಅವರ ಮಗಳ ಹೇಳಿಕೆಯನ್ನ ಪೊಲೀಸರು ಪಡೆದಿದ್ದಾರೆ. ನಿರ್ದಿಷ್ಟ ಹುದ್ದೆಗಳಿಗೆ ಅರ್ಜಿದಾರರೆಲ್ಲರೂ ಸಾಹುಕಾರ್ ಸಂಪರ್ಕದಲ್ಲಿದ್ದರು. ಬಂಧಿತ ಕನ್ನಾಳೆಯೂ ಸಾಹುಕಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ವಾದಿಸಿದರು.
ಇದೇ ವೇಳೆ, ಬಂಧಿತ ಐಎಎಸ್ ಅಧಿಕಾರಿ ಹಾಗೂ ಸಾಹುಕಾರ್ ಶಿವಶಂಕರಪ್ಪ ನಡುವೆ ಪೋನ್ ಸಂರ್ಪಕ ಮಾಡಿದ ಎಲ್ಲಾ ಮಾಹಿತಿಯನ್ನೂ ಜಗದೀಶ್ ನೀಡಿದರು. ಸಾಹುಕಾರ್ ಶಿವಶಂಕರಪ್ಪ ಪರೀಕ್ಷೆ ದಿನ ರಾತ್ರಿ ಕಂಟ್ರೋಲರ್‌ಗೆ 8:23 ಕ್ಕೆ ಕರೆ ಮಾಡಿದ್ದಾರೆ. ಕಚೇರಿ ಸಮಯದಲ್ಲಿ ಅಂತ ಆರೋಪಿ ಪರ ವಕೀಲರು ಹೇಳ್ತಾರೆ. ಕಚೇರಿಯಲ್ಲಿ ಸಮಯ ಬಿಟ್ಟು ರಾತ್ರಿ ಯಾಕೆ ಕರೆಯನ್ನು ಮಾಡಿ ಮಾತನಾಡುತ್ತಾರೆ ಎಂದು ಹೈಕೋರ್ಟ್‌ಗೆ ಸಿಐಡಿ ಪರ ಎಸ್‌ಪಿಪಿ ಮಾಹಿತಿ ನೀಡಿದರು. ಇದನ್ನೂ ಓದಿ: KPSC ಅಕ್ರಮದ ವಿರುದ್ಧ ಅಖಾಡಕ್ಕಿಳಿದ ವಿದ್ಯಾರ್ಥಿಗಳು; ರಾಜ್ಯದಲ್ಲಿ ಜೆನ್-ಝೀ ಮಾದರಿ ಹೋರಾಟಕ್ಕೆ ಪ್ಲ್ಯಾನ್
ಮಧ್ಯವರ್ತಿ ಬಸವರಾಜ್ ಮತ್ತು ಸಾಹುಕಾರ್‌ಗೆ ಸಂಪರ್ಕ ಇತ್ತಲ್ಲ ಎಂದು ಜಡ್ಜ್ ಕೇಳಿದರು. ಪ್ರಶ್ನೆಪತ್ರಿಕೆಯನ್ನು ಕೈಯಲ್ಲಿ ಬರೆದುಕೊಂಡು ಕೊಟ್ಟಿದ್ದಾರೆ. ಟ್ರೈನಿಂಗ್ ಮಾಡಿ ಆಮೇಲೆ ಎಕ್ಸಾಂ ಅಲ್ಲಿ ಬರೋ ಹಾಗೇ ಮಾಡಿದ್ದಾರೆ ಎಂದು ಎಸ್‌ಪಿಪಿ ವಾದ ಮಂಡಿಸಿದರು.
ಯಾರದೆಲ್ಲ ರೋಲ್ ಇದೆಯೋ ಯಾರನ್ನೂ ಬಿಡಬಾರದು ಎಂದು ಜಡ್ಜ್ ಹೇಳಿದರು. ಸಾಹುಕಾರ್ ಪರ ವಕೀಲ ಅರುಣ್ ಶ್ಯಾಮ್, ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈಕೋರ್ಟ್ ಬಲವಂತದ ಕ್ರಮ ಕೈಗೊಳ್ಳಬಾರದು ಅಂತ ಹೇಳಿದ್ದಾರೆ. ಅದೇ ರೀತಿ ರಿಲೀಫ್ ನಮ್ಮ ಕಕ್ಷಿದಾರರಿಗೆ ನೀಡಬೇಕು ಎಂದು ವಾದಿಸಿದರು. ಅದೇ ರೀತಿ ಲೈನ್‌ನಲ್ಲಿ ನಿಮ್ಮ ಕಕ್ಷಿದಾರರು ನಿಂತಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದರು. ಕೆಪಿಎಸ್‌ಸಿ ಸದಸ್ಯರು ಎಲ್ಲಾರೂ ಭಾಗಿಯಾಗಿದ್ದಾರೆ. ಯಾರೋ ಮಹಿಳೆ ಸದಸ್ಯರು ನಾಪತ್ತೆಯಾಗಿದ್ದಾರೆ. ಅವರಿಗೆ LOC ಜಾರಿ ಮಾಡಿದ್ದಾರೆ. ಹೈಕೋರ್ಟ್ ಮಾಹಿತಿ ನ್ಯೂಸ್ ಪೇಪರ್, ಟಿವಿಯಲ್ಲಿ ಬಂದಿದೆ ಎಂದು ತಿಳಿಸಿದರು.
ಶಿವಶಂಕರಪ್ಪ ಸಾಹುಕಾರ್ ಮಗ ಕೆಪಿಎಸ್‌ಸಿ ಸದಸ್ಯರ ಜೊತೆ ಮತ್ತು ಮಧ್ಯವರ್ತಿ ಜೊತೆ ಸಂಪರ್ಕದಲ್ಲಿ ಇದ್ದಾನೆ. ಶಿವಶಂಕರಪ್ಪ ಮಾತ್ರ ಅಲ್ಲ, ಅವರ ಕುಟುಂಬ ಕೂಡ ಕೆಪಿಎಸ್‌ಸಿ ಕಚೇರಿಯ ದುರುಪಯೋಗ ಮಾಡಿಕೊಂಡಿದೆ ಎಂದು ಕೋರ್ಟ್‌ನಲ್ಲಿ ಮತ್ತಷ್ಟು ಮಾಹಿತಿ ಬಹಿರಂಗಪಡಿಸಲಾಯಿತು. ಇದನ್ನೂ ಓದಿ: KPSC Scam | ಕಿಂಗ್‌ಪಿನ್ ಕನ್ನಾಳೆ ಬಳಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ರಂತೆ 15 ಅಭ್ಯರ್ಥಿಗಳು
ಇಂತಹ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೊಡಬಾರದು. ನೀಟ್ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಅವರು ಏನು ತಪ್ಪು ಮಾಡಿದ್ದಾರೆ? ಅವರ ಕುಟುಂಬ ಎಷ್ಟು ಕಷ್ಟ ಅನುಭವಿಸ್ತಾ ಇದೆ. ಇಂತಹವರನ್ನೆಲ್ಲಾ ಸುಮ್ಮನೆ ಬಿಡಬಾರದು. ಅವರನ್ನೆಲ್ಲಾ ಅಲ್ಲಲ್ಲೇ ಅರೆಸ್ಟ್ ಮಾಡಬೇಕು. ಶಿವಶಂಕರಪ್ಪ ಮತ್ತು ಅವರ ಕುಟುಂಬ, ಗ್ಯಾನೇಂದ್ರ, ಬಸವರಾಜ್ ಎಲ್ಲಾ ಹಗರಣದಲ್ಲಿ ಇದ್ದಾರೆ ಎಂದು ನ್ಯಾಯಮೂರ್ತಿಗಳು ಗರಂ ಆದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಕೋರ್ಟ್, ಶಿವಶಂಕರಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತು. ಈಗ ಶಿವಶಂಕರಪ್ಪ ಅವರಿಗೆ ಬಂಧನ ಭೀತಿ ಎದುರಾಗಿದೆ. ಇಡೀ ಕುಟುಂಬ ಈ ಪ್ರಕರಣದಲ್ಲಿ ಇದೆ ಅಂತ ಸಿಐಡಿ ಹೇಳಿದೆ. ಜಾಮೀನು ನೀಡಲು ಅಸಾಧ್ಯ ಎಂದ ಹೈಕೋರ್ಟ್ ಸ್ಪಷ್ಟಪಡಿಸಿತು.
