– ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಟ್ಟ ರೆಸಾರ್ಟ್ ಬಳಿ ಗ್ಯಾನೇಂದ್ರ ಪ್ಲಾಟ್
– ಹಣಕ್ಕಾಗಿ ದೋಸ್ತ್‌ಗಳ ನಡುವೆ ಗಲಾಟೆ
ಬೆಂಗಳೂರು: ಕೆಪಿಎಸ್‌ಸಿ (KPSC) ನೇಮಕಾತಿ ಹಗರಣದಲ್ಲಿ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿವೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ (Basavaraj Kannale) ಇದೀಗ ಸಿಐಡಿ ಮುಂದೆ ಹೊಸ ನಾಟಕ ಶುರು ಮಾಡಿದ್ದು, ಸಾಕ್ಷ್ಯಾಧಾರಗಳನ್ನು ಕಾವೇರಿ ನದಿಗೆ ಎಸೆದಿರೋದಾಗಿ ಹೇಳಿದ್ದಾನೆ.
ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಗೆ (Cauvery River) ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲವನ್ನೂ ಎಸೆದಿರುವುದಾಗಿ ತಿಳಿಸಿದ್ದಾನೆ. ಇದರ ಬೆನ್ನಲ್ಲೇ ಸಿಐಡಿ ಟೆಕ್ನಿಕಲ್ ಎವಿಡೆನ್ಸ್‌ಗಾಗಿ ಹುಡುಕಾಟ ನಡೆಸಿದೆ. ಇದನ್ನೂ ಓದಿ: KPSC ಅಕ್ರಮದ ವಿರುದ್ಧ ಅಖಾಡಕ್ಕಿಳಿದ ವಿದ್ಯಾರ್ಥಿಗಳು; ರಾಜ್ಯದಲ್ಲಿ ಜೆನ್-ಝೀ ಮಾದರಿ ಹೋರಾಟಕ್ಕೆ ಪ್ಲ್ಯಾನ್
ಹಣಕ್ಕಾಗಿ ಸ್ನೇಹಿತರ ನಡುವೆ ಗಲಾಟೆ:
ಇನ್ನೂ ಸಿಐಡಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಗೆ ಸಂದರ್ಭದಲ್ಲಿ ಬಸವರಾಜ್ ಹಾಗೂ ಗ್ಯಾನೇಂದ್ರ ಗಲಾಟೆ ಮಾಡಿಕೊಂಡಿದ್ದಾರೆ. ಕನ್ನಾಳೆ, ನಾನು ಅಕ್ರಮ ಮಾಡಿದ ಹಣದಲ್ಲಿ ಗ್ಯಾನೇಂದ್ರಗೆ ಪಾಲು ನೀಡಿದ್ದೇನೆ ಅಂದ್ರೆ, ಇತ್ತ ಗ್ಯಾನೇಂದ್ರ ಪಶುವೈದ್ಯಾಧಿಕಾರಿ ಸಂದರ್ಭದಲ್ಲಿ ಹಣ ಪಡೆದೇ ಇಲ್ಲ ಅಂತಿದ್ದಾರೆ. ಇಬ್ಬರೂ ಕಳೆದ 5 ವರ್ಷಗಳಿಂದ ಸ್ನೇಹಿತರಾಗಿದ್ದು, ಆ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಿಕೊಂಡಿದ್ದಾರೆ. ಆದರೀಗ ಹಣದ ವಿಚಾರಕ್ಕೆ ಕಚ್ಚಾಡುತ್ತಿದ್ದಾರೆ.
ಟ್ರೈನಿಂಗ್ ಕೊಟ್ಟ ರೆಸಾರ್ಟ್ ಬಳಿ ಗ್ಯಾನೇಂದ್ರ ಪ್ಲಾಟ್:
ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಟ್ಟಿದ್ದ ರೆಸಾರ್ಟ್‌ನ ಕೂಗಳತೆ ದೂರದಲ್ಲಿ ಗ್ಯಾನೇಂದ್ರ ಪ್ಲಾಟ್ ಇರುವುದು ಪತ್ತೆಯಾಗಿದೆ. ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದ ಸಮಯದಲ್ಲಿ ಗ್ಯಾನೇಂದ್ರ ಅಲ್ಲಿಯೇ ಇರುತ್ತಿದ್ದ. ಇದೀಗ ಸಿಐಡಿ ಗ್ಯಾನೇಂದ್ರನ ಪ್ಲಾಟ್ ಮಹಜರು ಮಾಡಿದ್ದು, ಪ್ರಶ್ನೆಪತ್ರಿಕೆಗಾಗಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: KPSC Scam | ಕಿಂಗ್‌ಪಿನ್ ಕನ್ನಾಳೆ ಬಳಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ರಂತೆ 15 ಅಭ್ಯರ್ಥಿಗಳು
