ಬೆಳಗಾವಿ: ಪತ್ನಿ (Wife) ವಿಚ್ಛೇದನ (Divorce) ಕೇಳಿದ್ದಕ್ಕೆ ಸಿಟ್ಟಿಗೆದ್ದ ಪತಿ (Husband) ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಪ್ರಕರಣ ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದಲ್ಲಿ ನಡೆದಿದೆ.
ಬೈಲಹೊಂಗಲದ ಗೊಲ್ಲರ ಓಣಿ ನಿವಾಸಿ ಲಕ್ಷ್ಮಿ ಮಾಡಮಗೇರಿ (31) ಕೊಲೆಯಾದ ದುರ್ದೈವಿ. ರಾಜು ಮಾಡಮಗೇರಿ ಪತ್ನಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. ಐದು ವರ್ಷಗಳ ಹಿಂದೆ ಇಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಎರಡು ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ವಿಚ್ಛೇದನ ನೀಡುವಂತೆ ಲಕ್ಷ್ಮಿ ಕೇಳಿದ್ದಳು. ಇದನ್ನೂ ಓದಿ: ಕಲಬುರಗಿ | ಕತ್ತು ಹಿಸುಕಿ ಗಂಡನಿಂದಲೇ ಹೆಂಡತಿಯ ಕೊಲೆ
ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ರಾಜು ಕೋಪಗೊಂಡಿದ್ದ. ಇದರಿಂದ ಸಂಚು ಮಾಡಿ, ಪತ್ನಿ ಕೆಲಸಕ್ಕೆ ಹೋಗಿ ಬರುವಾಗ, ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಪರಾರಿ ಆಗಿರುವ ಹಂತಕ ರಾಜು ಮಾಡಮಗೇರಿ ಬಂಧನಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕಣ್ಣೀರಿಡುತ್ತಾ ವಿಷ ಕುಡಿದ ಪತಿ

