ನಗೋಯಾ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತ 5ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ವೈಯಕ್ತಿಕ ಶೂಟಿಂಗ್‌ನಲ್ಲಿ ಶೂಟರ್ ನೀರು ಧಂಡಾ ಅವರು ಭಾರತಕ್ಕೆ (India) ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಐಚಿ-ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನ 10ನೇ ದಿನದಲ್ಲಿ ನೀರು ಧಂಡಾ (Neeru Dhanda) ಅವರು ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಮೂಲಕ ಭಾರತ ಒಟ್ಟು 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: Asian Games 2026 | ಭಾರತಕ್ಕೆ ಮತ್ತೊಂದು ಪದಕ – ಬೆಳ್ಳಿಗೆ ಇಶಾ ಶೂಟ್
INDIA AT ASIAN GAMES HISTORY! 🇮🇳🥹
Before Neeru Dhanda’s Gold today:
India’s individual Trap medallists at AG – 0
India’s individual Gold medallists at AG 2026 – 0After Neeru’s Gold today:
India’s individual Trap medallists at AG
– Neeru Dhanda 🥇
India’s individual Gold… pic.twitter.com/xHkFf2PeJo— The Khel India (@TheKhelIndia) September 29, 2026
ಭಾರತಕ್ಕೆ ಒಟ್ಟು 47 ಪದಕ:
ನೀರು ಧಂಡಾ ಅವರ ಈ ಸಾಧನೆಯ ಬಳಿಕ ಭಾರತ ಒಟ್ಟು 47 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈವರೆಗೂ 5 ಚಿನ್ನ, 21 ಬೆಳ್ಳಿ ಹಾಗೂ 21 ಕಂಚು ಪದಕಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ:Asian Games 2026: ಶಾಟ್ ಪುಟ್‌ನಲ್ಲಿ ತಜಿಂದರ್‌ಪಾಲ್‌ಗೆ ಬೆಳ್ಳಿ, ಮಹಿಳೆಯರ 400 ಮೀಟರ್ ಓಟದಲ್ಲಿ ಪ್ರಾಚಿಗೆ ಕಂಚು

