ನವದೆಹಲಿ: ನಗರದಲ್ಲಿ ಪಿಜಿ ಬಿಲ್ಡಿಂಗ್ ಕುಸಿತ (PG Building Collapse) ಪ್ರಕರಣದಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿಯ ತಾಯಿ ಮಗನ ಕಳೆದುಕೊಂಡು ಗೋಗರೆದಿದ್ದಾರೆ. ಊರಿಗೆ ಹೋಗುವ ಮುನ್ನ ರೈಲ್ವೇ ನಿಲ್ದಾಣದಲ್ಲಿ ಸಹೋದರಿಯ ಒಂಟಿ ಸೀನು… ಅಪಶಕುನ ಅಂತ ಇವತ್ತು ಬೇಡ ಎಂದಿದ್ದ ತಾಯಿ..ಇದೆಲ್ಲವೂ ಅಪಘಾತದ ಮುನ್ಸೂಚನೆಯಾಗಿತ್ತಾ? ಕೆಲ ಗಂಟೆ ಹಿಂದೆಯೇ ಮಾತನಾಡಿದ್ದ ಮಗ.. ಇದೀಗ ತಾಯಿಯ ಮುಂದೆ ಮೂಕವಿಸ್ಮಿತನಾಗಿ ಮಲಗಿದ್ದಾನೆ.
ಭಾನುವಾರ (ಸೆ.6) ಮಧ್ಯಾಹ್ನ 1:30ರ ಸುಮಾರಿಗೆ ದೆಹಲಿ ವಿಶ್ವವಿದ್ಯಾಲಯದ (Delhi University) ಕ್ಯಾಂಪಸ್ ಬಳಿಯಿರುವ ಬಾಯ್ಸ್ ಪಿಜಿ (Boys PG) ಆಗಿದ್ದ ಐದು ಅಂತಸ್ತಿನ ಕಟ್ಟಡ ಕುಸಿದಿದೆ. ಅದೇ ಪಿಜಿಯಲ್ಲಿರುತ್ತಿದ್ದ ಮೃತ ಅರ್ಪಿತ್. ಅಂದು ಬೆಳಿಗ್ಗೆಯೇ ಊರಿನಿಂದ ಬಂದಿದ್ದ. ಅಲ್ಲದೇ ಘಟನೆಗೂ ಒಂದು ಗಂಟೆಯ ಹಿಂದಷ್ಟೇ ತಾಯಿಯ ಜೊತೆ ಮಾತನಾಡಿದ್ದ. ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿದು 7 ಮಂದಿ ದುರ್ಮರಣ; ಉನ್ನತ ತನಿಖೆಗೆ ಹೈಕೋರ್ಟ್ ಆದೇಶ
ಕೆಟ್ಟದರ ಮುನ್ಸೂಚನೆ ನೀಡಿದ್ದ ಸಹೋದರಿ, ತಾಯಿ:
ರಕ್ಷಾಬಂಧನಕ್ಕಾಗಿ ಊರಿಗೆ ತೆರಳಿದ್ದ ಅರ್ಪಿತ್ ಭಾನುವಾರ (ಸೆ.6) ಬೆಳಿಗ್ಗೆ ದೆಹಲಿಗೆ (Delhi) ಬಂದಿದ್ದ. ಊರಿಗೆ ಹೊರಡುವಾಗ ರೈಲ್ವೇ ನಿಲ್ದಾಣದಲ್ಲಿ ಸಹೋದರಿ ಒಂಟಿ ಸೀನಿದಾಗ ಅಮ್ಮ ಅದನ್ನು ಅಪಶಕುನದಂತೆ ಪರಿಗಣಿಸಿ, ಮಗನಿಗೆ ಇವತ್ತು ಹೋಗದಂತೆ ತಡೆದಿದ್ದರು. ಆಗ ಮಗ ಟಿಕೆಟ್ ಕನ್ಫರ್ಮ್ ಆಗಿದೆ, ಕ್ಲಾಸ್ ಪ್ರಾರಂಭವಾಗುತ್ತವೆ ಎಂದು ಪಟ್ಟು ಹಿಡಿದು ದೆಹಲಿಗೆ ಪ್ರಯಾಣಿಯಿಸೇ ಬಿಟ್ಟ. ಆದರೆ ಅದು ಕೊನೆಯ ಪ್ರಯಾಣವಾಗಿಬಿಡುತ್ತೆ ಎಂದು ಸ್ವತಃ ಆತನೇ ಉಹಿಸಿರಲಿಲ್ಲ.
ದೆಹಲಿಗೆ ತಲುಪಿದ ಬಳಿಕ ಮಧ್ಯಾಹ್ನ ಸುಮಾರು 12:30ಕ್ಕೆ ಅರ್ಪಿತ್ ತಾಯಿಯೊಂದಿಗೆ ಮಾತನಾಡಿದ್ದ. ಅದೇ ಕೊನೆಯ ಕರೆ. ಆನಂತರ ಮಾಡಿದ ಯವುದೇ ಕರೆಯನ್ನು ಆತ ಸ್ವೀಕರಿಸಿರಲಿಲ್ಲ. ಬಳಿಕ ಅಮ್ಮನಿಗೆ ಗೊತ್ತಾಗಿದ್ದೇ ಆತನ ಸಾವಿನ ಸುದ್ದಿ.ಇದನ್ನೂ ಓದಿ: ಸಾವು ನೋವುಗಳಿಗೆ ನಾವು ಜವಾಬ್ದಾರರಲ್ಲ – ದೆಹಲಿಯಲ್ಲಿ ಕುಸಿದ ಪಿಜಿಯ ಬಾಡಿಗೆ ಅಗ್ರಿಮೆಂಟ್‌ನಲ್ಲಿ ಉಲ್ಲೇಖ!
ಮಗನ ಶವವನ್ನು ನೋಡುತ್ತಲೇ ತಾಯಿ ಕುಸಿದುಬಿದ್ದಿದ್ದು, ಅವರನ್ನು ಏಮ್ಸ್ ಆಸ್ಪತ್ರೆಗೆ (AIIMS_ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ನಂತರವೂ ಮಗನ ಸಾವನ್ನು ನಂಬಲು ತಾಯಿ ಸಿದ್ಧರಿರಲಿಲ್ಲ. ಬಳಿಕ ಅರ್ಪಿತ್ ದೆಹಲಿಗೆ ಹೊರಡುವ ಮುನ್ನ ತಾವು ಅನುಭವಿಸಿದ ಭಯವನ್ನು ನೆನಪಿಸಿಕೊಂಡು, ನಾನು ಅವನನ್ನು ದೆಹಲಿಗೆ ಬರಲು ಯಾಕೆ ಬಿಟ್ಟೆ? ಏನೋ ಕೆಟ್ಟದ್ದು ಸಂಭವಿಸುತ್ತದೆ ಎಂಬ ಭಾವನೆ ನನಗೆ ಇತ್ತು ಎಂದು ಕಣ್ಣೀರು ಹಾಕಿದ್ದಾರೆ.
ಅಪಘಾತದಲ್ಲಿ ಒಟ್ಟು 7 ಜನರು ಸಾವನ್ನಪ್ಪಿದ್ದು, ಒಟ್ಟು 12 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಸದ್ಯ ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ಸಾವು – ಐವರು ಅಧಿಕಾರಿಗಳು ಸಸ್ಪೆಂಡ್
