ನವದೆಹಲಿ: 72 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Awards) ಸಮಾರಂಭ ಸ್ಥಳ ಬದಲಾವಣೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ದೆಹಲಿ ಹೊರಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗುಜರಾತ್ನ ಕೆವಾಡಿಯಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದನ್ನೂ ಓದಿ: ಸಿನಿಮಾ ಆಯ್ತು ಮುಳ್ಳಿನ ಗುಲಾಬಿ ಕಾದಂಬರಿ
ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು 1954 ರಲ್ಲಿ ಪ್ರದಾನ ಮಾಡಲಾಯಿತು. ದೆಹಲಿಯ ವಿಜ್ಞಾನ ಭವನವು ದಶಕಗಳಿಂದ ಹೆಚ್ಚಿನ ಸಮಾರಂಭಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿತ್ತು. 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಈಗ ಆ ಸಂಪ್ರದಾಯದಿಂದ ಹೊರಬಂದು ಮೊದಲ ಬಾರಿಗೆ ಗುಜರಾತ್ಗೆ ಕಾರ್ಯಕ್ರಮವನ್ನು ಕೊಂಡೊಯ್ಯಲಿವೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿತವಾದ 597 ಅಡಿ ಎತ್ತರದ ಸ್ಮಾರಕವಾದ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಶಿಫ್ಟ್ ಆಗಿದೆ. ಈ ಪ್ರತಿಮೆಯನ್ನು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದನ್ನೂ ಓದಿ: BBK 13: ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಶುಭಾರಂಭ; ಇವ್ರೇ ನೋಡಿ ಈ ಬಾರಿ ಮನೆಯೊಳಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು
