ಅಬುದಾಬಿ: 2025ರ ಪುರುಷರ ಏಷ್ಯಾ ಕಪ್ (Asia Cup) ಕ್ರಿಕೆಟ್‌ನಲ್ಲಿ ನಡೆದ ಟ್ರೋಫಿ ಡ್ರಾಮಾ ಎಲ್ಲರಿಗೂ ಗೊತ್ತೆ ಇದೆ. ಇದೀಗ 2026ರ ಮಹಿಳಾ ಏಷ್ಯಾಕಪ್ ಟೂರ್ನಿಯ ಫೈನಲ್‌ಗೂ ಮೊಹ್ಸಿನ್ ನಖ್ವಿ (Mohsin Naqvi) ಅತಿಥಿಯಾಗಿ ಆಗಮಿಸುವ ಬಗ್ಗೆ ವರದಿಯಾಗಿದೆ. ಹೀಗಾಗಿ ಈ ಬಾರಿ ಭಾರತ ಮಹಿಳಾ ತಂಡ ಕಪ್ ಗೆದ್ದರೆ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಪ್ರಸ್ತುತ ನಡೆಯುತ್ತಿರುವ 2026ರ ಮಹಿಳಾ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ ಸೆ.13ರಂದು ನಡೆಯಲಿದೆ. ಈ ಬಾರಿ ಫೈನಲ್‌ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸುವ ಸಾಧ್ಯತೆಯಿದೆ. ಇದನ್ನೂ ಓದಿ: Women’s Asia Cup 2026: ಭಾರತದ ಸಿಂಹಿಣಿಯರ ಆರ್ಭಟಕ್ಕೆ ಸುಲಭ ತುತ್ತಾದ ಪಾಕ್

ಶನಿವಾರ (ಸೆ.5) ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ ತಂಡ ಇದೀಗ ಸೆಮಿ ಫೈನಲ್ ಪ್ರವೇಶಿಸಿದೆ. ಒಂದು ವೇಳೆ ಭಾರತ ತಂಡ ಸೆಮಿ ಫೈನಲ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿ, ಫೈನಲ್‌ನಲ್ಲಿಯೂ ಗೆಲುವು ಸಾಧಿಸಿದರೆ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸುತ್ತಾ ಎನ್ನುವ ಗೊಂದಲ ಶುರುವಾಗಿದೆ.
ಯಾಕೆ ಈ ಟ್ರೋಫಿ ವಿವಾದ?
ಕಳೆದ ಬಾರಿ 2025ರ ಪುರುಷರ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಆಗ ಮೊಹ್ಸಿನ್ ನಖ್ವಿ ಅವರೇ ಟ್ರೋಫಿ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆಗ ಭಾರತ ತಂಡ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಕೊನೆಗೆ ಟ್ರೋಫಿಯನ್ನು ನಖ್ವಿ ತಮ್ಮೊಂದಿಗೆ ತೆಗೆದುಕೊಂಡು ಹೋದರು. ಬಳಿಕ ಆ ಟ್ರೋಫಿಯನ್ನು ಎಸಿಸಿ ಕಚೇರಿಯಲ್ಲಿರಿಸಲಾಗಿದೆ. ಈವರೆಗೂ ಭಾರತ ತಂಡಕ್ಕೆ ಟ್ರೋಫಿ ನೀಡಲಾಗಿಲ್ಲ.
ಇತ್ತೀಚಿಗೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಹಾಗೂ ಪಾಕ್ ನಾಯಕಿ ಸನಾ ಮಿರ್ ಕೈಕುಲುಕಲಿಲ್ಲ. ಇದಕ್ಕೂ ಮುನ್ನ ಕಳೆದ ವರ್ಷ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ನಡುವೆಯೂ ಇದೇ ರೀತಿ ನಡೆದಿತ್ತು.ಇದನ್ನೂ ಓದಿ: ಐಪಿಎಲ್ ಮುಂದೆ ಸೋತ ಪಿಎಸ್‌ಎಲ್ – ಈ ಬಾರಿ ಜನವರಿಯಲ್ಲಿ ಆರಂಭ?

