– ಜೈಲಲ್ಲಿ ದರ್ಶನ್ ಭೇಟಿಯಾದ ನಟ ಝೈದ್
– ಜೈಲಿನಿಂದಲೇ ಧನ್ವೀರ್ ವಿರುದ್ಧ ಕೇಸ್ ಹಾಕ್ತಾರಂತೆ ದರ್ಶನ್
– ದರ್ಶನ್ ಜೈಲಿಂದ ಹೊರಗೆ ಬರದಿರಲು ವಿಜಯಲಕ್ಷ್ಮೀ ಕಾರಣ ಅನ್ನೋದು ಸುಳ್ಳು ಎಂದ ಝೈದ್
ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಅಣ್ಣ ಹೇಳಿದರು ಎಂದು ನಟ ಝೈದ್ ಖಾನ್ ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಇಂದು ಭೇಟಿಯಾದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝೈದ್ ಖಾನ್, ಧಮ್ ಇದ್ರೆ ನನ್ ಮುಂದೆ ಮಾತಾಡ್ಲಿ. ನಾನು ಜೈಲಿನಲ್ಲಿರುವಾಗ ನನ್ ಹೆಂಡ್ತಿ-ಮಕ್ಳ ಬಗ್ಗೆ ಮಾತಾಡೋಕೆ ಅವನ್ಯಾರು ಎಂದು ದರ್ಶನ್ ಗರಂ ಆಗಿದ್ದಾರೆಂದು ಹೇಳಿದರು.
ದರ್ಶನ್ ಅಣ್ಣ ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ಹೇಳಿದ್ರು. ನಾನು ಒಳಗಡೆ ಇದ್ದಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ ಮೇಲೆ ಧೈರ್ಯ ಇದ್ರೆ ನನ್ನ ಮುಂದೆ ಮಾತಾಡಲಿ. ಪೋನ್ನಲ್ಲಿ ಎಲ್ಲೋ ಒಂದು ಕಡೆ ಕುತ್ಕೊಂಡು ಮಾತಾಡೋದಲ್ಲ ಎಂದು ಅಸಮಾಧಾನ ಹೊರಹಾಕಿರುವುದಾಗಿ ಝೈದ್ ತಿಳಿಸಿದರು.
ಜನರಿಗೆ, ಅಭಿಮಾನಿಗಳಿಗೆ ರಾಂಗ್ ಮೆಸೇಜ್ ಕೊಡ್ತಾ ಇದ್ದಾನೆ. ಎಲ್ಲರನ್ನ ಡೈವರ್ಟ್ ಮಾಡೋ ಕೆಲಸ ಮಾಡ್ತಾ ಇದ್ದಾನೆ. ಇವ್ನು ಎಲ್ಲವನ್ನೂ ನಾನು ಮಾಡ್ದೇ ಮಾಡ್ದೇ ಅಂತಾನೆ. ಇವನನ್ನ ಕೇಳಿಕೊಂಡ ಅಕ್ಕ ಮತ್ತೆ ದರ್ಶನ್ ಅಣ್ಣ ಹೋಗಿದ್ರಾ? ಸಹಾಯ ಮಾಡಿ ಅಂತ ಅಣ್ಣ ಕೂಡ ಅವನ ಹತ್ತಿರ ಹೋಗಿಲ್ಲ. ನಾನು ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ, ಮನೆ ಹಾಳು ಮಾಡ್ದಾ. ನಾವು ಎಲ್ಲರೂ ಮಾಡ್ತಾ ಇರೋದು ದರ್ಶನ್ ಅಣ್ಣನಿಗೋಸ್ಕರ. ಅವರ ಪ್ರೀತಿಸುವ ಪತ್ನಿ, ಮಗನ ಬಗ್ಗೆ ಮಾತಾಡಿದ್ರೆ ಹೇಗೆ? ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾನೆ ಎಂದು ಧನ್ವೀರ್ ನಡೆಗೆ ಝೈದ್ ಅಸಮಾಧಾನ ಹೊರಹಾಕಿದರು.
ಜೈಲಿನಿಂದಲೇ ಧನ್ವೀರ್ ವಿರುದ್ಧ ದರ್ಶನ್ ದೂರು ನೀಡ್ತಾರೆ. ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಈಗ ದೂರನ್ನ ಕೊಡ್ತಾರೆ. ನಾನೇ ಮಾತಾಡಿದ್ರೆ ಅಭಿಮಾನಿಗಳಿಗೆ ಗೊಂದಲ ಕ್ಲಿಯರ್ ಆಗುತ್ತೆ ಅಂದ್ರು. ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ. ಅಭಿಮಾನಿಗಳು ಧೈರ್ಯವಾಗಿ, ಆರಾಮಾಗಿ ಇರಿ ಅಂದ್ರು. ಸ್ವಲ್ಪ ದಿನ ಎಲ್ಲರೂ ಸಮಾಧಾನವಾಗಿ ಇರಿ. ಹಣಕಾಸಿನ ವಿಚಾರ ಅಣ್ಣಗೆ ದೊಡ್ಡ ಮ್ಯಾಟರ್ ಅಲ್ಲ. ಅವರು ಈಗ ಜೈಲಿನಲ್ಲಿ ಇದ್ದಾರೆ, ಅವರಿಗೆ ಕೆಲಸ ಇಲ್ಲ. ಕೆಲಸ ಮಾಡಿದ್ರೆನೇ ಅವರಿಗೆ ಹಣ ಬರೋದು. ಕೇಸ್ ನಡೆಸೋಕೆ ಲಾಯರ್ಗೆ ಹಣ ಕೊಡಬೇಕು. ಒಳ್ಳೆದು ಮಾಡ್ತೀನಿ ಅಂತ ಬಂದು ಈಗ ನಂಬಿಕೆಯೇ ಮುಳ್ಳಾಗಿದೆ ಎಂದು ಝೈದ್ ಬೇಸರ ಹೊರಹಾಕಿದರು.
ಅವನಂತ ಚಿಲ್ಲರೆಯವನ ಬಗ್ಗೆ ನಾನು ಮಾತಾಡಲ್ಲ. ಅವನು ಯಾರು ಸರ್ ಅವನು. ದರ್ಶನ್ ಅವರ ಹೆಸರು ಹೇಳಿಕೊಂಡು ಬೆಳೆದಿದ್ದಾನೆ. ಅವನು ಸ್ವಂತವಾಗಿ ಬೆಳೆದಿದ್ದು ಮಾತ್ರು ಏನು ಇಲ್ಲ. ಅವನು ನನ್ನ ಲೆವೆಲ್ಗೆ ಬರಲಿ ಮೊದಲು ಆಮೇಲೆ ಮಾತಾಡ್ತೀನಿ. ಸಿಎಂ, ಶಾಸಕರ ಬಗ್ಗೆಯೂ ಅನವಶ್ಯಕ ಮಾತುಗಳನ್ನ ಮಾತಾಡ್ತಾ ಇದ್ದಾರೆ ಅಂತ ದರ್ಶನ್ ಅವರು ಬೇಸರ ಮಾಡಿಕೊಂಡ್ರು. ನಾಲಿಗೆ ಇದೇ ಅಂತ ಬೇಕಾದದ್ದು ಮಾತಾಡೋದಲ್ಲ. ದೊಡ್ಡವರಿಗೆ, ಅವರ ಸ್ಥಾನಕ್ಕೆ ನಾವು ಬೆಲೆ ಕೊಡಬೇಕು. ಧನ್ವೀರ್ಗೆ ಎರಡು ಮುಖ ಅಲ್ಲ, ಅವನಿಗೆ ಮುಖನೇ ಇಲ್ಲ ಎಂದು ಕಿಡಿಕಾರಿದರು.
ಎಲ್ಲರ ಮುಖವಾಡ ಬಯಲು ಮಾಡ್ತೀನಿ ಎನ್ನುವ ವಿಚಾರವಾಗಿ ಮಾತನಾಡಿ, ನನ್ನ ಬಗ್ಗೆ ವೀಡಿಯೊ, ಆಡಿಯೋ ಇದೇ ಅಂದಿದ್ದಾನೆ ಬಿಡಲಿ. ವಾಯ್ಸ್ ರೆಕಾರ್ಡ್ ಇದೇ ಅಂದಿದ್ದಾನೆ, ಬಿಡ್ಲಿ ಜನರಿಗೆ ಗೊತ್ತಾಗ್ಲಿ. ಇವತ್ತೆ ಬಿಡ್ತೀನಿ, ನಾಳೆ ಬಿಡ್ತೀನಿ ಅಂತಾನೆ, ಬಿಡ್ಲಿ ಕರ್ನಾಟಕ ಜನತೆಗೆ ಗೊತ್ತಾಗ್ಲಿ. ಅವನೇ ಬಚ್ಚಿಟ್ಟುಕೊಂಡು ಓಡಾಡ್ತಾ ಇದ್ದಾನೆ. ಅವನ ಬಗ್ಗೆ ನನಗೆ ಮಾತಾಡೋಕೆ ಇಷ್ಟನೇ ಇಲ್ಲ. ನಾಲ್ಕೈದು ಪ್ರಶ್ನೆಗೆ ಅಣ್ಣನ ಹತ್ತಿರ ಉತ್ತರ ಬೇಕಿತ್ತು ತಗೊಂಡಿದ್ದೀವಿ ಎಂದರು.
ಅವನಿಗೆ ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡ್ಲಿ. ಧನ್ವೀರ್ ಬಗ್ಗೆ ಕಂಪ್ಲೇಟ್ ಕೊಡ್ತೀನಿ ಅಂತ ದರ್ಶನ್ ಅಣ್ಣ ಅಂದ್ರು. ಅಭಿಮಾನಿಗಳು ಟೆನ್ಷನ್ ತಗೋಬೇಡಿ ಅಂತ ಹೇಳಿದ್ರು. ಆದಷ್ಟು ಬೇಗ ಜೈಲಿನಿಂದ ಹೊರಗೆ ಬರ್ತೀನಿ ಎಂದರೆಂದು ತಿಳಿಸಿದರು.
ದರ್ಶನ್ ಅವರು ಹೊರಗೆ ಬರದಿರಲು ವಿಜಯಲಕ್ಷ್ಮೀ ಕಾರಣ ಅನ್ನೋದು ಸುಳ್ಳು. ವಿಜಯಲಕ್ಷ್ಮೀ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಂತ ನನಗೆ ಗೊತ್ತು. ದರ್ಶನ್ ಅಣ್ಣನಿಗೋಸ್ಕರ ಅವರು ಎಲ್ಲರನ್ನ ಭೇಟಿ ಮಾಡಿದ್ದಾರೆ. ಎಷ್ಟೋ ದಿನದಿಂದ ವಿಜಯಲಕ್ಷ್ಮೀ ಅಕ್ಕನಿಗೆ ನಿದ್ದೆ ಇಲ್ಲ. ಅಕ್ಕ ನೀವು ಬಿರಿಯಾನಿ ಚೆನ್ನಾಗಿ ಮಾಡ್ತೀರ ಊಟಕ್ಕೆ ಬರ್ತೀನಿ ಅಂದೆ. ನಮ್ಮ ಮನೆಯಲ್ಲಿ ಸರಿಯಾಗಿ ಅಡುಗೆ ಮಾಡಿಯೇ ಎಷ್ಟೋ ದಿನವಾಗಿದೆ ಅಂದ್ರು. ಮನೆಯಲ್ಲಿ ಬಿರಿಯಾನಿ ಮಾಡೋದನ್ನೇ ನಿಲ್ಲಿಸಿದ್ದೇವೆ. ನನ್ನ ಗಂಡ ಜೈಲಿನಲ್ಲಿ ಒಳ್ಳೆ ಊಟವನ್ನ ಮಾಡ್ತಾ ಇಲ್ಲ. ನಾನು ಹೊರಗೆ ಹೇಗೆ ಊಟ ಮಾಡೋಕೆ ಸಾಧ್ಯ ಅಂದ್ರು. ಅವರು ದರ್ಶನ್ ಸರ್ಗೆ ಹೇಗೆ ಕೆಟ್ಟದನ್ನ ಬಯಸುತ್ತಾರೆ? ಈ ಆಟ ಎಲ್ಲಾ ಆಡ್ತಾ ಇರೋದು ಇವ್ನು (ಧನ್ವೀರ್). ಈಗ ಅಕ್ಕನ ಮೇಲೆ ಗೂಬೆ ಕೂರಿಸೋ ಕೆಲಸ ಮಾಡ್ತಾ ಇದ್ದಾನೆ ಎಂದು ಗರಂ ಆದರು.
2028ರ ಚುನಾವಣೆಗೆ ವಿಜಯಲಕ್ಷ್ಮೀ ರೆಡಿಯಾಗ್ತಾ ಇದ್ದಾರೆ ಎನ್ನುವ ಆಡಿಯೋ ವಿಚಾರವಾಗಿ ಮಾತನಾಡಿ, ಅದು ಅವರ ಇಷ್ಟ ಸರ್, ಬರಲಿ ಬಿಡಿ. ನಾನು 2028ಕ್ಕೆ ಚುನಾವಣೆಗೆ ನಿಂತ್ಕೋತಿನಿ ಅದು ನನ್ ಇಷ್ಟ. ಅದು ನನ್ನ ವೈಯಕ್ತಿಕ ವಿಚಾರ, ಯಾರು ಪ್ರಶ್ನೆ ಮಾಡೋದು? ಅವನ ನಂಬಿ ಮನೆಗೆ ಕರೆಸಿದ್ದೆ, ಈಗ ಅಣ್ಣನಿಗೆ ತಪ್ಪಾಯ್ತಾ ಎಂದು ಪ್ರಶ್ನಿಸಿದರು.
ವಿಜಿ ಅಕ್ಕ, ಹುಡುಗರು ಮನೆಗೆ ಹೋಗಿ ಧಮ್ಕಿ ಹಾಕಿದ್ರು ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ ಮನೆಯವರ ತಂಟೆಗೆ ಬಂದ್ರೆ ಬಿಡ್ತೀವಿ ಅಂದ್ರು ಅಲ್ವಾ. ಈಗ ಅವರ ತಂಗಿಯ ಹಾಗೆ ವಿಜಿ ಅಕ್ಕ ಕೂಡ ಒಂದು ಹೆಣ್ಣು ಅಲ್ವಾ. ಅವರ ಬಗ್ಗೆ ಮರ್ಯಾದೆ ತೆಗೆಯೋದು ಎಷ್ಟು ಮಾತ್ರ ಸರಿ. ಅವನು ಲೂಸ್ ಆಗಿ ಹೋಗಿದ್ದಾನೆ ಅಷ್ಟೇ. ಇಷ್ಟು ದಿನ ಅಣ್ಣ ಅಣ್ಣ ಅಂತ TRP ತಗೊಂಡ. ಈಗ ನಮ್ಮಂತವರ ಹೆಸರು ಹೇಳಿ TRP ತಗೋತ ಇದ್ದಾನೆ. ಧನ್ವೀರ್ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದು ಝೈದ್ ತಿಳಿಸಿದರು.
