– ಟೀಂ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಜಯ
– ಬೌಲಿಂಗ್‌ನಲ್ಲಿ ಮಿಂಚಿದ ಶ್ರೀ ಚರಣಿ, ಪ್ರೇಮಾ ರಾವತ್
ದುಬೈ: ಶನಿವಾರ ದುಬೈನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ 2026 ರ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಪಾಕ್ ತಂಡ ಭಾರತ ತಂಡದ ಸಿಂಹಿಣಿಯರಿಗೆ ಸುಲಭ ತುತ್ತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಬ್ಯಾಟರ್‌ಗಳಾದ ಮುನೀಬಾ ಅಲಿ (15), ಶವಾಲ್ ಜುಲ್ಫಿಕರ್ (14) ಬಿಟ್ಟರೆ ಯಾವೊಬ್ಬ ಆಟಗಾರ್ತಿಯೂ ಒಂದಂಕಿ ರನ್ ದಾಟುವಲ್ಲಿ ವಿಫಲರಾದರು. ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವು ಭಾರತದ ಸ್ಪಿನ್ನರ್‌ಗಳ ದಂಗೆಗೆ ಕಾರಣವಾಯಿತು. ಟೀಂ ಇಂಡಿಯಾದ ಶ್ರೀ ಚರಣಿ, ಪ್ರೇಮಾ ರಾವತ್ ಬೌಲಿಂಗ್ ದಾಳಿಗೆ ಪಾಕ್ ಆಟಗಾರ್ತಿಯರು ತರಗೆಲೆಯಂತೆ ಉದುರಿದರು. ಈ ಇಬ್ಬರೂ ಬೌಲರ್‌ಗಳು ತಲಾ 3 ವಿಕೆಟ್ ಕಿತ್ತು. ದೀಪ್ತಿ ಶರ್ಮಾ 2, ಶೆಫಾಲಿ ವರ್ಮಾ 1 ವಿಕೆಟ್ ಪಡೆದರು.
ಪಾಕಿಸ್ತಾನವನ್ನು ಭಾರತ ತಂಡ 55 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 8.4 ಓವರ್‌ಗಳಲ್ಲೇ ಗುರಿಯನ್ನು ತಲುಪಿ ಬೃಹತ್ ಗೆಲುವು ಸಾಧಿಸಿತು. ಭಾರತ ತಂಡವು ಇನ್ನೂ 68 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿ, ಸತತ ಮೂರನೇ ಗೆಲುವು ಮತ್ತು ಗುಂಪಿನಲ್ಲಿ ಅಗ್ರ ಸ್ಥಾನವನ್ನು ಗಳಿಸಿತು.
ಶೆಫಾಲಿ ವರ್ಮಾ 12, ಹರ್ಮನ್ ಪ್ರೀತ್ ಕೌರ್ (ಔಟಾಗದೇ) 18, ದೀಪ್ತಿ ಶರ್ಮಾ (ಔಟಾಗದೇ) 12, ಸ್ಮೃತಿ ಮಂಧಾನಾ 9, ಪ್ರತೀಕಾ ರಾವಲ್ 4 ರನ್ ಗಳಿಸಿದರು. ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಪಾಕ್ ಪರ ಫಾತಿಮಾ ಸನಾ 3 ವಿಕೆಟ್ ಪಡೆದರು.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ 150 ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮೊದಲ ಪುರುಷ ಅಥವಾ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
