ನವದೆಹಲಿ: ಇಟಲಿಯ ದೀರ್ಘಾವಧಿಯ ಪ್ರಧಾನಿ ಎಂಬ ಐತಿಹಾಸಿಕ ದಾಖಲೆ ಮಾಡಿದ ಜಾರ್ಜಿಯಾ ಮೆಲೋನಿ(Giorgia Meloni) ಅವರನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಅಭಿನಂದಿಸಿದ್ದಾರೆ.
ಇಟಲಿಯ( Italy) ಇತಿಹಾಸದಲ್ಲಿ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನನ್ನ ಸ್ನೇಹಿತೆ ಜಾರ್ಜಿಯಾ ಮೆಲೋನಿ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ನಾಯಕತ್ವದ ಮೇಲೆ ಇಟಲಿಯ ಜನರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ ಎಂದು ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮೆಲೋನಿ ಅವರೊಂದಿಗಿನ ಸ್ನೇಹವು ಭಾರತ-ಇಟಲಿ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎರಡೂ ದೇಶಗಳ ಜನರ ಸಮೃದ್ಧ ಭವಿಷ್ಯಕ್ಕಾಗಿ ನಮ್ಮ ನಿಕಟ ಸಹಯೋಗವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ. ಮುಂದಿನ ವರ್ಷಗಳಲ್ಲಿ ಅವರ ನಿರಂತರ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು ಎಂದು ಮೋದಿ ಹೇಳಿದ್ದಾರೆ.
Congratulations to my friend Prime Minister Meloni on becoming the longest continuously serving Prime Minister in Italy’s postwar history. This milestone is a reflection of the trust and confidence of the Italian people in her leadership.
Her friendship has also been…
— Narendra Modi (@narendramodi) September 4, 2026
ಏನಿದು ಮೆಲೋನಿ ದಾಖಲೆ?
ಜಾರ್ಜಿಯಾ ಮೆಲೋನಿ ನೇತೃತ್ವದ ಬಲಪಂಥೀಯ ಸರ್ಕಾರವು ಎರಡನೇ ಮಹಾಯುದ್ಧದ (Second World War) ನಂತರ ಸತತವಾಗಿ 1,413 ದಿನಗಳ ಕಾಲ ಆಡಳಿತ ಪೂರ್ಣಗೊಳಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದೆ.
ಈ ಹಿಂದೆ ಮಾಧ್ಯಮ ಉದ್ಯಮಿ ಹಾಗೂ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೊನಿ ಅವರ ಎರಡನೇ ಸರ್ಕಾರ ನಿರ್ಮಿಸಿದ್ದ ದಾಖಲೆಯನ್ನು ಮೆಲೋನಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗೆ ಪ್ರವೇಶವಿಲ್ಲ, ಭಾಗವಹಿಸುವವರಿಗೆ ತಿಲಕ ಕಡ್ಡಾಯ – ನವರಾತ್ರಿ ಕಾರ್ಯಕ್ರಮಗಳಿಗೆ VHP ರೂಲ್ಸ್
Grazie, caro @narendramodi, per le tue parole e per la tua amicizia.
Il rapporto tra Italia e India è oggi più forte che mai 🇮🇹🇮🇳Il Partenariato Strategico Speciale che abbiamo lanciato durante il nostro ultimo incontro è il riconoscimento dell’importanza di questo legame e… https://t.co/7xQgo7RbvH
— Giorgia Meloni (@GiorgiaMeloni) September 4, 2026
ಕಳೆದ 80 ವರ್ಷಗಳಲ್ಲಿ ಬರೋಬ್ಬರಿ 68 ಸರ್ಕಾರಗಳನ್ನು ಕಂಡಿರುವ ಇಟಲಿಯಲ್ಲಿ ಈ ಮೈಲಿಗಲ್ಲು ಅತ್ಯಂತ ಮಹತ್ವದ್ದಾಗಿದೆ. ಹಿಂದಿನ ಸರ್ಕಾರಗಳು ರಾಜಕೀಯ ಬಿಕ್ಕಟ್ಟುಗಳು, ಪಕ್ಷಾಂತರ ಹಾಗೂ ಮೈತ್ರಿಕೂಟಗಳ ಆಂತರಿಕ ಕಲಹದಿಂದಾಗಿ ಪತನಗೊಳ್ಳುತ್ತಿದ್ದವು. ಆದರೆ ಮೆಲೋನಿ ತಮ್ಮ ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಒಂದೆಡೆ ಸರ್ಕಾರದ ಈ ದೀರ್ಘಾವಧಿಯ ಯಶಸ್ಸನ್ನು ಬೆಂಬಲಿಗರು ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ಬಾರಿಯ ಐತಿಹಾಸಿಕ ಕೇಂದ್ರಭಾಗದಲ್ಲಿ ಮೆಲೋನಿ ಸರ್ಕಾರದ ವಿರುದ್ಧ ವಿರೋಧಿಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸರ್ಕಾರವು ಯುದ್ಧ-ಶಸ್ತ್ರಾಸ್ತ್ರ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತಿದೆ, ಪೊಲೀಸ್ ರಾಜ್ಯವನ್ನು ನಿರ್ಮಿಸುತ್ತಿದೆ ಮತ್ತು ವಲಸಿಗರನ್ನು ಹಿಂಸಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
