ನಾನು (Duniya Vijay) ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸಿನಿಮಾ ಒಂದರ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಫ್ಯಾಮಿಲಿ ವಿಚಾರದ ಬಗ್ಗೆ ನಾನು ಏನೂ ಮಾತನಾಡಲಾರೆ. ಈಗಾಗಲೇ ನಾನು ನನ್ನ ಸಾಂಸಾರಿಕ ಜೀವನದ ಬಗ್ಗೆ ಸೋಶಿಯಲ್ ಪೋಸ್ಟ್ ಹಾಕಿದ್ದೇನೆ. ಎಲ್ಲ ವಿಚಾರವನ್ನು ನಾನು ಹೇಳಿದ್ದೇನೆ. ಮಕ್ಕಳ ವಿಚಾರವನ್ನೂ ಹಾಕಿದ್ದೇನೆ ಎಂದರು. ಇದನ್ನೂ ಓದಿ: ಸ್ನೇಹಿತನ ಮೇಲೆ ಹಲ್ಲೆ, ಕಿಡ್ನ್ಯಾಪ್ – ನಟ ದುನಿಯಾ ವಿಜಯ್ ಮಗ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು
ಇದೇ ವೇಳೆ ಮಗನ ಪ್ರಕರಣದ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದು, ಮಗನೇ ಆದ್ರೂ ತಪ್ಪು ಮಾಡಿದ್ರೆ ತಪ್ಪೇ. ಕಾನೂನು ಅದನ್ನ ನೋಡಿಕೊಳ್ಳುತ್ತದೆ. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಮಗನ ಜೊತೆ ಮಾತಾಡಿದ್ದೇನೆ, ತಿಳುವಳಿಕೆ ಹೇಳಿದ್ದೇನೆ. ಮಕ್ಕಳು ಅಂದಾಗ ಜಗಳ ಇರುತ್ತೆ. ಎಲ್ಲರ ಜೀವನದಲ್ಲೂ ಇದ್ದೇ ಇರುತ್ತೆ.. ನಾನೂ ಕೂಡು ಬುದ್ದಿ ಹೇಳಿದ್ದೇನೆ ಎಂದರು.
ವಿಚ್ಛೇದನದ (Divorce) ಬಳಿಕ ಪೋಸ್ಟ್ ಹಂಚಿಕೊಂಡಿದ್ದ ಅವರು, ನನಗೆ ಎರಡು ಹೆಣ್ಣುಮಕ್ಕಳಿದ್ದು, ಅವರಿಗೆ ಯಾವುದೇ ರೀತಿಯಲ್ಲೂ ಮುಜುಗರವಾಗಬಾರದು. ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ ಎಂದು ಕಳಕಳಿಯಾಗಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ವಿಚ್ಛೇದನ ಇತ್ಯರ್ಥದ ಬಳಿಕ ಪೋಸ್ಟ್ – ದುನಿಯಾ ವಿಜಯ್ ಕಳಕಳಿಯ ಮನವಿ
