ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನ A12379, ದಿಢೀರ್ 300 ಕೆಳಗೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ-ಪೈಲಟ್ ಮಾದಕ ವಸ್ತು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ವಿಮಾನ ಒಡಿಶಾದ ಮೇಲೆ ಪ್ರಯಾಣದ ಹಂತದಲ್ಲಿ 300 ಅಡಿ ಕೆಳಕ್ಕೆ ಕುಸಿತವನ್ನು ಅನುಭವಿಸಿತು. ಆ ವಿಮಾನದ ಸಹ-ಪೈಲಟ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಾಥಮಿಕ ವರದಿ ತಿಳಿಸಿದೆ. ಇದನ್ನೂ ಓದಿ: ಎಲ್ಲಾ ಪೈಲಟ್‌ಗಳಿಗೆ ಡೋಪ್ ಟೆಸ್ಟ್ | ಫುಕೆಟ್ – ದೆಹಲಿ ವಿಮಾನ ಪೈಲಟ್ ಗಾಂಜಾ ಸೇವನೆ ದೃಢಪಟ್ಟ ಬೆನ್ನಲ್ಲೇ ಏರ್ ಇಂಡಿಯಾ ನಿರ್ಧಾರ
ತಾಂತ್ರಿಕ ಮತ್ತು ಇತರ ಅಂಶಗಳ ಕುರಿತು ವಿವರವಾದ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ದೃಢೀಕರಣ ಪರೀಕ್ಷೆಯಲ್ಲಿ PIC ಸೈಕೋ-ಆಕ್ಟಿವ್ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಸೈಕೋ-ಆಕ್ಟಿವ್ ಪದಾರ್ಥಗಳ ಬಳಕೆಯ ದೃಢೀಕರಣವು ಗಂಭೀರ ಕಳವಳಕಾರಿಯಾಗಿದೆ. AAIB ಆದ್ಯತೆಯ ಮೇಲೆ DGCA ಯಿಂದ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡುತ್ತದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ದ ಪ್ರಾಥಮಿಕ ವರದಿ ತಿಳಿಸಿದೆ.
ಇದಕ್ಕೂ ಮೊದಲು, ದೆಹಲಿಯಲ್ಲಿ ಹಾರಾಟದ ನಂತರದ ತಪಾಸಣೆಯ ಸಮಯದಲ್ಲಿ ಪೈಲಟ್ ಮಾದಕ ವಸ್ತು ಸೇವಿಸಿದ್ದು ದೃಢಪಟ್ಟಿತ್ತು. ನಂತರ ಮತ್ತೊಂದು ಪರೀಕ್ಷೆಯನ್ನು ನಡೆಸಲಾಯಿತು. ಅದು ಕೂಡ ಪಾಸಿಟಿವ್ ಬಂದಿತು. ಪೈಲಟ್ ಗಾಂಜಾವನ್ನು ಸೇದಿದ್ದಾರೆ ಎಂದು ಪರೀಕ್ಷೆಯು ದೃಢಪಡಿಸಿತು. ಇದನ್ನೂ ಓದಿ: ದಿಢೀರ್ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ – 12 ಮಂದಿಗೆ ಗಾಯ
