ನವದೆಹಲಿ: ಎಲ್ಲಾ ಪೈಲಟ್‌ಗಳಿಗೆ (Pilot) ಕಡ್ಡಾಯವಾಗಿ ಡೋಪ್ ಟೆಸ್ಟ್‌ಗೆ (Dope Test) ಏರ್ ಇಂಡಿಯಾ (Air India) ಸಂಸ್ಥೆ ನಿರ್ಧರಿಸಿದೆ. ಫುಕೆಟ್- ದೆಹಲಿ ವಿಮಾನ ಕ್ಯಾಪ್ಟನ್ ಗಾಂಜಾ ಸೇವಿಸಿದ್ದಕ್ಕೆ ಸಂಸ್ಥೆ ಈ ಕ್ರಮಕೈಗೊಂಡಿದೆ. ಪರೀಕ್ಷೆ ಇಂದಿನಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲಾ ಪೈಲಟ್‌ಗಳಿಗೆ ಟೆಸ್ಟ್ ಕಡ್ಡಾಯವಾಗಿದೆ ಎಂದು ಏರ್‌ಲೈನ್ಸ್ ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ.
ಏರ್ ಇಂಡಿಯಾ ಈಗಾಗಲೇ ಭಾರತದ ಡಿಜಿಸಿಎ (DGCA) ಸೂಚಿಸಿದ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದೆ. ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳ ಅಡಿ ಅನುಮತಿಸದ ವಸ್ತುಗಳು ಹಾಗೂ ಔಷಧಿಗಳಿಗಾಗಿ ಎಲ್ಲಾ ಗ್ರೂಪ್ ಪೈಲಟ್‌ಗಳನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದು ನಮ್ಮ ಪ್ರಯಾಣಿಕರು, ಪಾಲುದಾರರಿಗೆ ಧೈರ್ಯ ತುಂಬುವ ನಮ್ಮ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ದಿಢೀರ್ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ – 12 ಮಂದಿಗೆ ಗಾಯ
ಏರ್ ಇಂಡಿಯಾ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ನಮ್ಮ ಪೈಲಟ್‌ಗಳ ವೃತ್ತಿಪರತೆ, ಕೌಶಲ್ಯ ಮತ್ತು ಸುರಕ್ಷತೆ ಬದ್ಧತೆಯಿಂದ ಲಕ್ಷಾಂತರ ಪ್ರಯಾಣಿಕರ ವಿಶ್ವಾಸ ಗಳಿಸಿದೆ. ಈ ನಂಬಿಕೆ ನಮ್ಮ ಪ್ರಮುಖ ಆಸ್ತಿಯಾಗಿದೆ ಮತ್ತು ಅದನ್ನು ಉಳಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುವುದು ನಮ್ಮ ಕರ್ತವ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.
ಆಗಸ್ಟ್ 4 ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು (Air India Flight) ಮಧ್ಯ ಆಕಾಶದಲ್ಲಿ ದಿಢೀರ್ 300 ಅಡಿ ಕುಸಿದು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದರು. ಈ ವೇಳೆ ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿತ್ತು. ಈ ಸಮಯದಲ್ಲಿ ಪೈಲಟ್ ಸುದೀಪ್ ವಶಿಷ್ಠ ತಮ್ಮ ಸೀಟಿನಲ್ಲಿ ಇರಲಿಲ್ಲ, ವಿಮಾನದ ಸಹ ಪೈಲಟ್ ನೇತೃತ್ವ ವಹಿಸಿದ್ದರು. ಬಳಿಕ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು.
ಈ ಘಟನೆಗೆ ಕ್ಲಿಯರ್ ಏರ್ ಟರ್ಬುಲೆನ್ಸ್ (Turbulence) ಅಥವಾ ಅಪ್‌ಡ್ರಾಫ್ಟ್/ಡೌನ್‌ಡ್ರಾಫ್ಟ್ (ಗಾಳಿಯ ಮೇಲ್ಮುಖ ಹಾಗೂ ಕೆಳಮುಖ ಹರಿವು) ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು.
ಇದರ ನಡುವೆ ಪೈಲಟ್‌ನ್ನು ಸುದೀಪ್ ವಶಿಷ್ಠ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ವೈಯಕ್ತಿಕ ಕಾರಣಗಳಿಂದಾಗಿ ನಿದ್ರೆಯ ಸಮಸ್ಯೆ ಅನುಭವಿಸುತ್ತಿದ್ದೆ. ಅದಕ್ಕಾಗಿ ನನ್ನ ಕುಟುಂಬದ ವೈದ್ಯರು ಔಷಧಿಗಳನ್ನು ಶಿಫಾರಸು ಮಾಡಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿದ್ರೆಯ ತೊಂದರೆಗಾಗಿ ಔಷಧಿ ಪಡೆಯುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆಯ ಆಂತರಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮತ್ತು ಬರಿಸಿ ಗಂಡನ ಖಾಸಗಿ ಅಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹತ್ಯೆ – ಪತ್ನಿ, ಪ್ರಿಯಕರ ಸೇರಿ ಮೂವರು ಅರೆಸ್ಟ್

