ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ಚುನಾವಣಾ ಆಯೋಗ (Election Commission) ನೋಟಿಸ್ ವಿತರಣೆಯನ್ನು ಆರಂಭಿಸಿದೆ.
ಅನ್ ಮ್ಯಾಪಿಂಗ್ ಮತ್ತು ಗೊಂದಲಮಯ ಆಗಿರುವವರಿಗೆ ನೋಟಿಸ್ ನೀಡಲು ಚುನಾವಣಾ ಆಯೋಗ ಮುಂದಾಗಿದೆ. ಇದುವರೆಗೂ 7.31 ಲಕ್ಷ ಮತದಾರರಿಗೆ ನೋಟಿಸ್ ವಿತರಿಸಲಾಗಿದೆ. ಒಟ್ಟು 43,81,143 ಮತದಾರರಿಗೆ ನೋಟಿಸ್ ನೀಡುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ನಾಲ್ಕನೇ ದಿನಕ್ಕೆ ಕಾಲಿಟ್ಟ ʻಬಳ್ಳಾರಿ ಚಲೋʼ: ಇಂದು ರಾಯಚೂರಿನಿಂದ ಕೊಪ್ಪಳ ಜಿಲ್ಲೆಗೆ ಪಾದಯಾತ್ರೆ ಪ್ರವೇಶ
7,31,770 ಮತದಾರರಿಗೆ ಸದ್ಯಕ್ಕೆ ನೋಟಿಸ್ ನೀಡಲಾಗಿದೆ. ಇನ್ನೂ 36,49,373 ಮತದಾರರಿಗೆ ನೋಟಿಸ್ ವಿತರಿಸುವುದು ಬಾಕಿ ಇದೆ. ನೋಟಿಸ್ ನೀಡಿದ 206 ಮಂದಿಯನ್ನ ಮಾತ್ರ ವಿಚಾರಣೆ ಮಾಡಲಾಗಿದೆ.
ಸೆಪ್ಟೆಂಬರ್ 24 ರ ಒಳಗೆ ನೋಟಿಸ್ ಪಡೆದು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ರಿಪ್ಲೈ ನೀಡಬೇಕಿದೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ಬದಲಾವಣೆಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಯಾಗಿತ್ತು. 9,45,968 ಮಂದಿ ಫಾರಂ6, ಫಾರಂ6A, ಫಾರಂ7, ಪಾರಂ8ಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: Exclusive | ಹಗರಣದ ಹಣದಲ್ಲಿ 5 ಕೋಟಿ ಮೌಲ್ಯದ ಕೃಷಿ ಭೂಮಿ ಖರೀದಿಸಿದ್ದ ಕನ್ನಾಳೆ
