ಬಿಗ್ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ಗೆ ಕೌಂಟ್ಡೌನ್ ಶುರುವಾಗಿದೆ. ಸುಮಾರು 18 ಕಂಟೆಸ್ಟಂಟ್ಗಳು ಈ ಸಲ ಸ್ಪರ್ಧೆಯಲ್ಲಿದ್ದರೆ ಅದರಲ್ಲಿ ಮೂವರು ಅಗ್ನಿಪರೀಕ್ಷೆಯಲ್ಲಿ ಗೆದ್ದ ಸಾಮಾನ್ಯರು. ಉಳಿದವರೆಲ್ಲ ಸೆಲೆಬ್ರಿಟಿಗಳೇ ಆಗಿರುತ್ತಾರೆ. ಸಿನಿಮಾ, ಸೀರಿಯಲ್, ಕ್ರೀಡೆ ಹಾಗೂ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳು ಈ ಬಾರಿ ಬಿಗ್ಬಾಸ್ ಸ್ಪರ್ಧಿಗಳ ಲಿಸ್ಟಲ್ಲಿ ಥಳುಕು ಹಾಕಿಕೊಂಡಿದೆ.
ರಿಯಾಲಿಟಿ ಶೋ ದಾದ ಎಂದು ಕರೆಸಿಕೊಳ್ಳುವ ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಈ ಬಾರಿ ಸ್ಪರ್ಧಿಗಳು ಪ್ರಯಾಣಿಕರು ಹಾಗೂ ಕಿಚ್ಚ ಸುದೀಪ್ ಕ್ಯಾಪ್ಟನ್ ಆಗಿರುತ್ತಾರೆ. ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲು ಸ್ಪರ್ಧಿಗಳು ಸಿದ್ಧವಾಗಿದ್ದು ಹಲವು ವಿಭಾಗದಿಂದ ಸ್ಪರ್ಧೆಗೆ ಅಣಿಯಾಗುತ್ತಿರುವ ಸ್ಪರ್ಧಿಗಳ ಪಟ್ಟಿ ಕೇಳಿಬರುತ್ತಿದೆ.
ಸುಮಾರು 18 ಕಂಟೆಸ್ಟಂಟ್ಗಳ ಲಿಸ್ಟ್ ರೆಡಿಯಾಗಿದೆ. ಅದರಲ್ಲಿ ಮೂವರು ಸಾಮಾನ್ಯರ ಕೋಟಾದಡಿ ಬರ್ತಾರೆ. ಅವರಿಗೆ ಈಗಾಗ್ಲೇ ಅಗ್ನಿಪರೀಕ್ಷೆ ಎದುರಾಗಿದ್ದು ಅದರಲ್ಲಿ ಗೆದ್ದ ಸ್ಪರ್ಧಿಗಳು ಸೆಲೆಬ್ರಿಟಿಗಳ ಜೊತೆ ಪೈಪೋಟಿ ಕೊಡಲಿದ್ದಾರೆ.
1) ಗಿಲ್ಲಿ ಗೆಳತಿ ಗಗನ
ಬಿಗ್ಬಾಸ್ ಕಳೆದ ಸೀಸನ್ನಲ್ಲಿ ಗಿಲ್ಲಿಯ ಹ್ಯೂಮರ್ ಸೆನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿರೋ ಕಾರಣಕ್ಕೆ ಈ ಬಾರಿ ಅದಕ್ಕೆ ಪರ್ಯಾಯ ಅನ್ನೋ ಥರದಲ್ಲಿ ಕಂಟೆಸ್ಟಂಟ್ ಹುಡುಕಾಟ ನಡೆದಿತ್ತು ಅನ್ನೋ ಮಾತಿದೆ. ಆಗ ಕೇಳಿ ಬಂದ ಹೆಸರೇ ಗಗನ ಭಾರಿ. ಇವರು ಮಹಾನಟಿ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಟ್ಟ ಪ್ರತಿಭೆಯಾಗಿದ್ದು ಇದೀಗ ಸೀರಿಯಲ್ ಹಾಗೂ ಹಲವು ರಿಯಾಲಿಟಿ ಶೋಗಳಲ್ಲ ಮಿಂಚುತ್ತಿದ್ದಾರೆ. ಇವರು ಬಿಗ್ಬಾಸ್ ಕಂಟೆಸ್ಟಂಟ್ ಆಗಿ ಮನೆಯೊಳಗೆ ಎಂಟ್ರಿ ಕೊಡುವ ಸುಳಿವಿದೆ.
2) ಕಾಮಿಡಿ ಕಲರವಕ್ಕೆ ಹುಲಿಕಾರ್ತಿಕ್?
ಪ್ರತಿ ಸೀಸನ್ನಲ್ಲೂ ಭರ್ಜರಿ ಮನರಂಜನೆ ಸಲುವಾಗಿ ಹಾಸ್ಯ ನಟರನ್ನು ಸ್ಪರ್ಧೆಯಲ್ಲಿ ಇಟ್ಟುಕೊಳ್ಳೋದು ಸಾಮಾನ್ಯ. ಈ ಬಾರಿ ಆ ಜಾಗ ತುಂಬಲು ಗಿಚ್ಚಿಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಬರುತ್ತಾರೆ ಎಂಬ ಮಾತು ಜೋರಾಗಿದೆ. ಪಂಚಿಂಗ್ ಡೈಲಾಗ್ ಜೊತೆ ಪವರ್ಫುಲ್ ಕಾಮಿಡಿ ಎಂಟರ್ಟೈನ್ಮೆಂಟ್ ಕೊಡಲು ಹುಲಿ ಕಾರ್ತಿಕ್ ಎಂಟ್ರಿಯಾಗುತ್ತೆ ಎಂಬ ಸುದ್ದಿ ಇದೆ.

3) ಸೂರಜ್ ಹಾಗೂ ಪ್ರಶಾಂತ್ ಹೆಸರು ಮುಂಚೂಣಿ
ಸೀರಿಯಲ್ , ಸಿನಿಮಾ , ರಿಯಾಲಿಟಿ ಶೋಗಳಲ್ಲಿ ಭರ್ಜರಿ ಮಿಂಚುತ್ತಿರುವ ಪ್ರತಿಭೆ ಸೂರಜ್. ಹೀಗಾಗಿ ಈ ಬಾರಿ ಸೂರಜ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಜೊತೆಗೆ ಗಿಚ್ಚಿಗಿಲಿ ಖ್ಯಾತಿಯ ಪ್ರಶಾಂತ್ ಹೆಸರು ಕೇಳಿಬಂದಿದೆ.
4) ಸ್ಪರ್ಧೆಗೆ ಅನನ್ಯ ಅಮರ್?
ಗಿಚ್ಚಿಗಿಲಿಗಿಲಿ ಶೋ ಮೂಲಕ ಹೆಸರು ಮಾಡಿರುವ ಬಹುಮುಖ ಪ್ರತಿಭೆ ಅನನ್ಯ ಅಮರ್. ಇವರು ನಟಿ ಅಂಕಿತ ಅಮರ್ ಸಹೋದರಿಯಾಗಿದ್ದು ಈ ಅಕ್ಕತಂಗಿಯರ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿದೆ. ಇದೀಗ ಅನನ್ಯ ಅಮರ್ ದೊಡ್ಮನೆ ಅಖಾಡಕ್ಕೆ ಕಾಲಿಡಲಿದ್ದಾರೆನ್ನುವ ಸುದ್ದಿ ಇದೆ.
5) ಬರ್ತಾರಾ ಅಣ್ಣಯ್ಯ ಖ್ಯಾತಿಯ ಜಿಮ್ಸೀನ?
ಸೀರಿಯಲ್ ಪ್ರಿಯರಿಗೆ ಕಾಡುವ ಹುಡಗನೇ ಜಿಮ್ಸೀನ. ನಿಜ ಹೆಸರು ಸುಶ್ಮಿತ್ ಜೈನ್. ಇವರು ಅಣ್ಣಯ್ಯ ಧಾರವಾಹಿಯ ಪಾತ್ರಧಾರಿ. ಗುಂಡಮ್ಮನ ಗಂಡನಾಗಿ ಭಾರೀ ಫೇಮಸ್ ಆಗಿರೋ ಈ ನಟ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಮನರಂಜನೆ ಕೊಡಲು ಬರ್ತಿದ್ದಾರೆ ಎಂಬ ಮಾತು ಜೋರಾಗಿದೆ.
6) ಬಹುಮುಖ ಪ್ರತಿಭೆ ರಾಜೇಶ್ ಧ್ರುವ?
ಸದ್ಯಕ್ಕೆ ಸಿನಿಮಾರಂಗದಲ್ಲಿ ಮಿಂಚುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟ ರಾಜೇಶ್ ಧ್ರುವ. ಬಹುಮುಖ ಪ್ರತಿಭೆ ಇದೀಗ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಜೊತೆ ಹಣಾಹಣಿಗೆ ರೆಡಿಯಾಗ್ತಿದ್ದಾರೆ ಎಂಬ ಮಾತಿದೆ.
7) ರಿಷಬ್ ಶೆಟ್ಟಿ ನಾಯಕಿ ತಪಸ್ವಿನಿ ಪೂಣಚ್ಚ
ಸಿನಿಮಾ ವಿಭಾಗದಲ್ಲಿ ಮುಂಚೂಣಿಯಲ್ಲಿರೋ ನಟಿ ಹೆಸರೇ ತಪಸ್ವಿನಿ ಪೂಣಚ್ಚ. ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಟಿಸಿದ್ದ ಬೆಡಗಿ, ಗಜರಾಮ ಚಿತ್ರದಲ್ಲೂ ನಟಿಸಿದ್ದಾರೆ. ಇದೀಗ ಈ ನಟಿಯ ಹೆಸರು ಬಿಗ್ಬಾಸ್ ಮನೆಯಲ್ಲಿ ಕೇಳಿಬಂದಿದೆ.
8) ರಾಧಾ ಭಗವತಿ
ಸೀರಿಯಲ್ ನಟಿ ರಾಧಾ ಭಗವತಿ ಹೆಸರು ಜೋರಾಗಿದೆ. ಇವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ಮಿಂಚುತ್ತಿರುವ ನಟಿ. ಈ ಚೆಲುವೆಯ ಹೆಸರು ಮುಂಚೂಣಿಯಲ್ಲಿದೆ.
9) ಗ್ಲ್ಯಾಮರ್ ಡಾಲ್ ಸೌಂದರ್ಯ ಶೆಟ್ಟಿ
ಈ ಬಾರಿ ಇನ್ನೊಂದು ವಿಶೇಷ ಹೆಸರು ಕೇಳಿಬಂದಿದ್ದು ಇದೀಗ ಹಿಂದಿ ರಿಯಾಲಿಟಿ ಶೋಗಲ್ಲಿ ಮಿಂಚುತ್ತಿರುವ ಸೌಂದರ್ಯ ಶೆಟ್ಟಿ. ಮಂಗಳೂರು ಮೂಲದ ಮಾಡೆಲ್ ಇವರಾಗಿದ್ದು ಮುಂಬೈನಲ್ಲಿ ವಾಸಿಸುತ್ತಾರೆ. ಇವರೂ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
10) ಭವಿಷ್ ಗೌಡ, ಅಮೋಘ್ ಆದಿತ್ಯ, ಯಶ್ವಂತ್, ಸುದರ್ಶನ್ ರಂಗಪ್ರಸಾದ್ ಹೆಸರು ಮುಂಚೂಣಿ..!
ಬಿಗ್ಬಾಸ್ ವೇದಿಕೆಯಲ್ಲಿ ಮನರಂಜನೆ ಕೊಡಲು ಸೀರಿಯಲ್ ಹೀರೋಗಳ ದೊಡ್ಡ ಲಿಸ್ಟ್ ರೆಡಿಯಾಗಿದ್ದು ಗಂಧದಗುಡಿ ಸೀರಿಯಲ್ ಹೀರೋ ಭವಿಷ್ ಗೌಡ, ಶ್ರಾವಣಿ ಸುಬ್ರಹ್ಮಣ್ಯ ನಟ ಅಮೋಘ್ ಆದಿತ್ಯ, ನಂದಗೋಕುಲ ಧಾರಾವಾಹಿಯಿಂದ ಹೊರಬಂದ ನಟ, ಕೇಶವ್ ಪಾತ್ರಧಾರಿ ಯಶ್ವಂತ್ಅಷ್ಟೇ ಅಲ್ಲ ನಟಿ ಸಂಗೀತ ಭಟ್ ಪತಿ ಭಾಗ್ಯಲಕ್ಷ್ಮಿ ಧಾರಾವಾಹಿ ಹೀರೋ ಸುದರ್ಶನ್ ರಂಗಪ್ರಸಾದ್ ಹೆಸರು ಕೇಳಿಬಂದಿದೆ.
