ದಾವಣಗೆರೆ: ನಾನು ಕೂಡ ಬಿಜೆಪಿಯ (BJP) ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಕಾಲಿಗೆ ಬೀಳುತ್ತೇನೆ. ನನ್ನ ರಾಜಕೀಯ ಗುರುಗಳು ಅವರೇ ಎಂದು ಹೇಳುತ್ತೇನೆ. ಹಾಗಂತ ಇದು ಹೊಂದಾಣಿಕೆ ರಾಜಕೀಯನಾ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಹೇಳಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಕಾಲಿಗೆ ಬಿಜೆಪಿ ಅಭ್ಯರ್ಥಿ ನಮಸ್ಕರಿಸಿದ ವಿಡಿಯೋ ವೈರಲ್ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಪರಿಷತ್ ಅಭ್ಯರ್ಥಿ ಕೆಎಂ ಸುರೇಶ್, ನಾನು ಹಾಗೂ ಸಚಿವರು ಪರಿಚಯಸ್ಥರು. ಹಿರಿಯರು ಎಂದು ಕಾಲಿಗೆ ಬೀಳೋದು ಸಹಜ. ಆ ವಿಡಿಯೋ ವೈರಲ್ ಮಾಡೋದು ಸರಿಯಲ್ಲ. ಹಿಂದೂ ಸಂಪ್ರದಾಯದಲ್ಲಿ ಹಿರಿಯರ ಕಾಲಿಗೆ ಬೀಳೋದು ಸಾಮಾನ್ಯ ಎಂದರು. ಇದನ್ನೂ ಓದಿ: ಡಿಸಿಎಂ ಪರಮೇಶ್ವರ್ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ, ಡಿಕೆಶಿ ದೌಡು
ಜಿಲ್ಲೆಯಲ್ಲಿ ಜೂಜಿನ ಹಾವಳಿ
ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ದಂಧೆ ಹೆಚ್ಚಾಗಿದೆ ಎಂದು ಗೃಹ ಸಚಿವರಿಗೆ ಪತ್ರ ಬರೆದ ವಿಚಾರವಾಗಿ, ಪತ್ರ ಬರೆದಿದ್ದೇನೆ ಆದರೆ ಸಹಿ ಹಾಕಿ ಕಳಿಸಿಲ್ಲ. ಚನ್ನಗಿರಿ ಅಷ್ಟೇ ಅಲ್ಲ, ಇಡೀ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ದಂಧೆ ಜಾಸ್ತಿಯಾಗಿದೆ. ಇದರಿಂದ ಮನೆ ಮಕ್ಕಳು ಹಾಳಾಗುತ್ತಿದ್ದಾರೆ. ಅರ್ಥಿಕ ಪರಿಸ್ಥಿತಿ ಕೆಡುತ್ತಿದೆ ಎಂದು ಜನರು ನನ್ನ ಬಳಿ ಹೇಳುತ್ತಿದ್ದಾರೆ. ಇದರ ಬಗ್ಗೆ ಎಸ್ಪಿ ಯಿಂದ ಹಿಡಿದು ಡಿಜಿ ಸಲೀಂ ಅವರಿಗೂ ಮನವಿ ಮಾಡಿದರೂ ಕೂಡ ಕಡಿಮೆಯಾಗಿಲ್ಲ. ನಮ್ಮ ಜಿಲ್ಲೆಯ ಎಸ್ಪಿ ಹಾಗೂ ಪೂರ್ವ ವಲಯ ಐಜಿಪಿಯವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಇಲ್ಲ ಸಿಎಂ ಹಾಗೂ ಗೃಹ ಸಚಿವರೇ ಬಂದು ಅಕ್ರಮ ಚಟುವಟಿಕೆ ನಿಲ್ಲಿಸಬೇಕು. ಇದನ್ನು ಕಡಿಮೆ ಮಾಡದೇ ಇದ್ದರೆ ನಾನೇ ಹೋರಾಟಕ್ಕೆ ಇಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಹೆಣ್ಣು ಮಕ್ಕಳಿಂದ ಕಸಿದುಕೊಂಡು ಹೋಗುವ ಪ್ರಕರಣಗಳಿವೆ. ಮಗಳ ಮದುವೆಗೆ ಇಟ್ಟಿದ್ದ ಒಡವೆ ಗಳನ್ನು ಅಡವಿಟ್ಟು ಜೂಜಾಡಿದ್ದಾರೆ. ಇನ್ನೊಂದು ವಿಡಿಯೋ ಬಂದರೆ ನಾನೇ ಎಸ್ಪಿ ಅಫೀಸ್ ಮುಂದೆ ಕೂರುತ್ತೇನೆ. ಇಂದು ಸಿಎಂ ಹಾಗೂ ಗೃಹ ಸಚಿವರಿಗೆ ಪತ್ರ ನೀಡುತ್ತೇನೆ. ನಾನು ಹೇಳಿದ ತಕ್ಷಣ ಅಲ್ಲೊಂದು ಇಲ್ಲೊಂದು ಸಣ್ಣ ಪ್ರಮಾಣದ ದಾಳಿ ನಡೆಸಿದ್ದಾರೆ. ಅದ್ದರಿಂದ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಚನ್ನಗಿರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ, ಕುಡಿಯುವ ನೀರಿಗೆ 15 ದಿನ ತೊಂದರೆಯಾಗಿದೆ. ಮೋಟರ್ ಕೆಟ್ಟು ಹೋಗಿದೆ, ರಿಪೇರಿ ಮಾಡಿಸಿ ಕಳಿಸುತ್ತೇನೆ. ಅದು ನಮ್ಮ ನಿಮ್ಮ ಜಮೀನಿನ ಹೊಲದ ಪಂಪ್ಸೆಟ್ನಂತೆ ಅಲ್ಲ. ಎಲ್ಲಿ ತೆಗೆದುಕೊಂಡಿದ್ದಾರೋ ಅಲ್ಲೇ ಹೋಗಿ ರಿಪೇರಿ ಮಾಡಿಸಬೇಕು. ಇನ್ನೂ ಸ್ವಲ್ಪ ದಿನದಲ್ಲೇ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 4 ಎಂಎಲ್ಸಿ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ: ಪರಮೇಶ್ವರ್
