* ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 4,55,00,011
* ಮಹಿಳಾ ಮತದಾರರೇ ಮೇಲುಗೈ
ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ (SIR) ಪ್ರಕ್ರಿಯೆ ಮುಗಿದಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯದಲ್ಲಿ ಒಟ್ಟು 4,54,55,689 ಮತದಾರರು ಇದ್ದಾರೆ.
ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, 4,54,55,689 ಮತದಾರರು ಇದ್ದಾರೆ. ಮಹಿಳೆಯರು- 2,29,15,196 ಹಾಗೂ ಪುರುಷರು 2,25,40,493 ಮತದಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದರು.
10,62,336 ರಷ್ಟು ಫಾರ್ಮ್-6 ಬಂದಿದೆ. 2 ಲಕ್ಷದಷ್ಟು ಫಾರ್ಮ್-7 ಬಂದಿದೆ. ರಾಜ್ಯದಲ್ಲಿ ಮಹಿಳಾ ಮತದಾರರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್ ನೀಡಲಾಗಿದೆ.
ಎಸ್ಐಆರ್ಗೂ ಮುನ್ನ ಬೆಂಗಳೂರಲ್ಲಿ 1.3 ಕೋಟಿ ಮತದಾರರು ಇದ್ದರು. ಆದರೆ, SIR ಮುಗಿದ ಬಳಿಕ 59,08,151 ಮತದಾರರು ಇದ್ದಾರೆ. ಡಿಲೀಟ್ ಆದ ಮತದಾರರ ಸಂಖ್ಯೆ 48,00,565 ಆಗಿದೆ.
19,00,926 ಮತದಾರರು ಎಸ್ಐಆರ್ ಪ್ರಕ್ರಿಯೆಯಲ್ಲಿ ಗೈರಾಗಿದ್ದಾರೆ. 65,45,679 ಮತದಾರರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 16,39,864 ಮಂದಿ ಮೃತಪಟ್ಟಿದ್ದಾರೆ. 7,09,870 ಮಂದಿ ನಕಲಿ ಮತದಾರರನ್ನು ಎಸ್ಐಆರ್ನಿಂದ ಕೈಬಿಡಲಾಗಿದೆ.
ಯಾವುದೇ ಒಂದೇ ಒಂದು ಅರ್ಹ ಮತದಾರರ ಹೆಸರು ಡಿಲೀಟ್ ಆಗಿಲ್ಲ. ಫಾರ್ಮ್-6 ಮೂಲಕ ಅರ್ಹ ಮತದಾರರ ಪಟ್ಟಿ ಸೇರ್ಪಡೆ ಮಾಡಲಾಗುತ್ತದೆ. ಯಾವ ಅನುಮಾನ, ಗೊಂದಲವೂ ಬೇಡ. ಮತದಾರರಿಗೆ ತೊಂದರೆ ಕೊಡುವ ಅಧಿಕಾರ ಯಾರಿಗೂ ಇಲ್ಲ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ವಿಚಾರಣೆ ಕಡ್ಡಾಯ ಎಂದು ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮತದಾರರು?
ಉಡುಪಿ: 10,14,143
ದಕ್ಷಿಣ ಕನ್ನಡ: 16,78,448
ರಾಮನಗರ: 8,39,039
ಚಿತ್ರದುರ್ಗ: 13,17,025
ಉತ್ತರ ಕನ್ನಡ: 11,39,623
ಮಂಡ್ಯ: 14,27,462
ಹಾಸನ: 13,93,908
ವಿಜಯಪುರ: 17,08,099
ಚಾಮರಾಜನಗರ: 8,00,858
ಬೆಂಗಳೂರು ಗ್ರಾ.: 8,04,534
ತುಮಕೂರು: 20,94,762
ದಾವಣಗೆರೆ: 13,20,819
ವಿಜಯನಗರ: 10,08,367
ಶಿವಮೊಗ್ಗ: 13,54,046
ಹಾವೇರಿ: 12,33,294
ಚಿಕ್ಕಮಗಳೂರು: 8,74,462
ಕೊಪ್ಪಳ: 10,59,164
ಬೆಳಗಾವಿ: 36,35,860
ಮೈಸೂರು: 22,80,067
ಚಿಕ್ಕಬಳ್ಳಾಪುರ: 9,53,372
ಯಾದಗಿರಿ: 8,87,174
ಬಾಗಲಕೋಟೆ: 14,13,341
ಗದಗ: 7,94,567
ಧಾರವಾಡ: 13,78,016
ಕೊಡಗು: 4,11,632
ರಾಯಚೂರು: 14,24,909
ಕೋಲಾರ: 11,39,393
ಕಲಬುರಗಿ: 18,94,144
ಬೀದರ್: 12,46,746
ಬೆಂಗಳೂರು ನಗರ: 24,01,939
ಬಳ್ಳಾರಿ: 10,20,264
ಬಿಬಿಎಂಪಿ (ಉತ್ತರ): 13,25,284
ಬಿಬಿಎಂಪಿ (ಕೇಂದ್ರ): 10,67,374
ಬಿಬಿಎಂಪಿ (ದಕ್ಷಿಣ): 11,13,554



