ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ(KRS Dam) ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ (Inflow) ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ನಿನ್ನೆ ಡ್ಯಾಂಗೆ 17,427 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಆದರೆ ಇದೀಗ ಮಳೆ ಕಡಿಮೆಯಾಗಿರುವುದರಿಂದ ಇಂದಿನ ಒಳಹರಿವು 10,028 ಕ್ಯೂಸೆಕ್‌ಗೆ ಕುಸಿದಿದೆ. ಇದನ್ನೂ ಓದಿ: ಕಟ್ಟಡದ ಅಳತೆ ಸುಳ್ಳು ಹೇಳಿದ್ರೆ ಬೀಳುತ್ತೆ ದಂಡ: ಬೆಂಗಳೂರಿನಲ್ಲಿ ಆಸ್ತಿಗಳ ಲೆಕ್ಕಕ್ಕೆ ಮುಂದಾದ ಜಿಬಿಎ
ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 110.20 ಅಡಿ
ಇಂದಿನ ಒಳಹರಿವು: 10,028 ಕ್ಯೂಸೆಕ್
ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಪ್ರಸ್ತುತ ನೀರಿನ ಸಂಗ್ರಹ: 31.923 ಟಿಎಂಸಿ
ಒಳಹರಿವು ತಗ್ಗಿದ್ದರೂ ಜಲಾಶಯದಲ್ಲಿ ನೀರಿನ ಮಟ್ಟ 110 ಅಡಿ ದಾಟಿದ್ದು, ರೈತರು ಹಾಗೂ ಕುಡಿಯುವ ನೀರಿನ ಅಗತ್ಯತೆಗೆ ಸದ್ಯಕ್ಕೆ ಆಸರೆಯಾಗಿದೆ. ಈ ವಾರದ ಆರಂಭದಲ್ಲಿ ಕೊಡಗಿನಲ್ಲಿ ಭಾರೀ ಮಳೆಯಾಗಿದ್ದರಿಂದ ಜಲಾಶಯದ ಒಳ ಹರಿವು ಹೆಚ್ಚಿತ್ತು. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು ನಿರಂತರ ಮಳೆಯಿಂದಾಗಿ(Rain) ಗುರುವಾರ 17,427 ಕ್ಯೂಸೆಕ್‌ಗೆ ಹೆಚ್ಚಳವಾಗಿತ್ತು.
