ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋದಿಂದ (Namma Metro) ಗುಡ್ ನ್ಯೂಸ್ ಹೊರಬಂದಿದೆ. ದೇಶದ ಅತಿ ಎತ್ತರದ ಮೆಟ್ರೋ ಸ್ಟೇಷನ್ (Pink Line Metro) ಎಂಬ ಹೆಗ್ಗಳಿಕೆ ಹೊಂದಿರುವ ಜಯದೇವ ಜಂಕ್ಷನ್ ಹಾಗೂ ಐದು ಹಂತದ ಸಾರಿಗೆ ಸಂಪರ್ಕ ಇರುವ ಪಿಂಕ್ ಲೈನ್ ಶೀಘ್ರದಲ್ಲೇ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಿರ್ಮಾಣವಾಗಿರುವ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಸೇವೆಗೆ ತೆರೆಯಲು ಬಿಎಂಆರ್‌ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಾರ್ಗದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಅಗತ್ಯ ಪರೀಕ್ಷಾರ್ಥ ಸಂಚಾರಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈ ಹಿಂದೆ ಆಗಸ್ಟ್ 15ರೊಳಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲು ಯೋಜಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಇದಕ್ಕೂ ಮುನ್ನ ಹಲವು ಡೆಡ್‌ಲೈನ್‌ಗಳು ಮುಗಿದರೂ ಪಿಂಕ್ ಲೈನ್ ಸಂಚಾರ ಆರಂಭವಾಗಿರಲಿಲ್ಲ.
ಇದೀಗ ಅಗತ್ಯ ಕಾಮಗಾರಿಗಳು ಹಾಗೂ ಅನುಮತಿಗಳು ಪೂರ್ಣಗೊಂಡಿವೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಪಿಂಕ್ ಲೈನ್ ಉದ್ಘಾಟನೆ ಹಾಗೂ ಸಾರ್ವಜನಿಕ ಸಂಚಾರ ಆರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಪಿಂಕ್ ಲೈನ್ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ದಿನಾಂಕ ನೀಡುವಂತೆ ಕೇಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.ಇದನ್ನೂ ಓದಿ: ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್ ಉಳಿಸಲು ಬೃಹತ್ ಅಭಿಯಾನ
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಪಿಂಕ್ ಲೈನ್ ಕಾರ್ಯಾಚರಣೆ ಆರಂಭವಾದರೆ, ಈ ಮಾರ್ಗವು ಪಿಂಕ್ ಮತ್ತು ಹಳದಿ ಮಾರ್ಗಗಳ ಇಂಟರ್‌ಚೇಂಜ್ ಸಂಪರ್ಕಕ್ಕೂ ಪ್ರಮುಖವಾಗಲಿದೆ. ಸದ್ಯ ಸೆಪ್ಟೆಂಬರ್‌ನಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಆರು ಮೆಟ್ರೋ ನಿಲ್ದಾಣಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ರಾಜಕೀಯವೆಂಬುದು ಸ್ವಾರ್ಥದ ಆಟವಾಗಿದೆ – ಮೋಹನ್ ಭಾಗವತ್ ಬೇಸರ
