– ಮುಖದ ಸಮೇತ ದೃಶ್ಯ ಸೆರೆ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಖಾಲಿ ನಿವೇಶನಗಳು ಹಾಗೂ ಬ್ಲಾಕ್ ಸ್ಪಾಟ್‌ಗಳಲ್ಲಿ ಅನಧಿಕೃತವಾಗಿ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ (Garbage) ಸುರಿಯುವವರ ವಿರುದ್ಧ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಲು ಪಾಲಿಕೆಯ `ಪ್ರಹರಿ’ (Prahari) ವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 2 ಪ್ರಹರಿ ವಾಹನಗಳ ಜೊತೆಗೆ, ಘನತ್ಯಾಜ್ಯ ನಿರ್ವಹಣೆ ಹಾಗೂ ನಿಯಮ ಉಲ್ಲಂಘನೆಗಳ ಮೇಲಿನ ಕಣ್ಗಾವಲನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಹೊಸದಾಗಿ ಖರೀದಿಸಲಾದ 2 ಪ್ರಹರಿ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಒಟ್ಟು 4 ಪ್ರಹರಿ ವಾಹನಗಳ ಕಾರ್ಯಾಚರಣೆಗೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ಶನಿವಾರ ಚಾಲನೆ ನೀಡಿದರು. ಇದನ್ನೂ ಓದಿ: ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್ ಉಳಿಸಲು ಬೃಹತ್ ಅಭಿಯಾನ
ಕಸ ಸುರಿದು ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಬೇಡ:
ಒಟ್ಟು 4 ಪ್ರಹರಿ ವಾಹನಗಳು ಎರಡು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಗಸ್ತು ನಡೆಸಲಿವೆ. ವಿಶೇಷವಾಗಿ ಕಸ ಸುರಿಯುವಿಕೆ ಹೆಚ್ಚಾಗಿ ಕಂಡುಬರುವ ಪ್ರದೇಶಗಳು, ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಇದನ್ನೂ ಓದಿ: ಕೊಡಗಿನ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ; ವಿದ್ಯಾರ್ಥಿಗಳ ಶೂ-ಸಾಕ್ಸ್ ಕಳಪೆ, ಪುಸ್ತಕಗಳಿಗೆ ಗೆದ್ದಲು
ಎಲ್ಲಾ ಪ್ರಹರಿ ವಾಹನಗಳಲ್ಲಿ ಮುಂಭಾಗ ಹಾಗೂ ಹಿಂಭಾಗದ ಜಿಪಿಎಸ್ ಆಧಾರಿತ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಗಸ್ತಿನ ಸಂದರ್ಭದಲ್ಲಿ ಕಂಡುಬರುವ ನಿಯಮ ಉಲ್ಲಂಘನೆಗಳನ್ನು ಫೋಟೋ, ವೀಡಿಯೋ, ಸಮಯ ಹಾಗೂ ಜಿಪಿಎಸ್ ಸ್ಥಳ ಮಾಹಿತಿಯೊಂದಿಗೆ ದಾಖಲಿಸಲಾಗುತ್ತದೆ. ಇದನ್ನೂ ಓದಿ: ರಾಜಕೀಯವೆಂಬುದು ಸ್ವಾರ್ಥದ ಆಟವಾಗಿದೆ – ಮೋಹನ್ ಭಾಗವತ್ ಬೇಸರ
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಸ ಅಥವಾ ಸಿ&ಡಿ ತ್ಯಾಜ್ಯ ಸುರಿಯುತ್ತಿರುವುದು ಕಂಡುಬಂದಲ್ಲಿ, ಲಭ್ಯವಾಗುವ ದೃಶ್ಯಾವಳಿ ಹಾಗೂ ಸ್ಥಳ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿ/ಸಂಸ್ಥೆ/ವಾಹನವನ್ನು ಗುರುತಿಸಿ ಅನ್ವಯವಾಗುವ ನಿಯಮಗಳ ಪ್ರಕಾರ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರು ರಾಯರ ಮಧ್ಯಾರಾಧನೆ – ಮಠದಲ್ಲಿ ಚಿನ್ನದ ರಥೋತ್ಸವ, ಮಹಾಪಂಚಾಮೃತ ಅಭಿಷೇಕ

ಸಾರ್ವಜನಿಕ ಸ್ಥಳ ಕಸದ ತೊಟ್ಟಿಯಲ್ಲ – ಆಯುಕ್ತರ ಕಟ್ಟುನಿಟ್ಟಿನ ಎಚ್ಚರಿಕೆ:
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ಸಾರ್ವಜನಿಕ ಸ್ಥಳ, ರಸ್ತೆ ಬದಿ, ಖಾಲಿ ನಿವೇಶನ ಅಥವಾ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಈಗಿರುವ 2 ಪ್ರಹರಿ ವಾಹನಗಳಿಗೆ ಹೊಸದಾಗಿ 2 ವಾಹನಗಳನ್ನು ಸೇರ್ಪಡೆಗೊಳಿಸಿ ಒಟ್ಟು 4 ವಾಹನಗಳ ಮೂಲಕ 24*7 ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಜಿಪಿಎಸ್ ಆಧಾರಿತ ಡ್ಯಾಶ್ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘನೆಗಳನ್ನು ದಾಖಲಿಸಲಾಗುವುದು. ಕಸ ಸುರಿದು ಯಾರಿಗೂ ಗೊತ್ತಾಗುವುದಿಲ್ಲ ಅಥವಾ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಬೇಡ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ‘ಹಿಂದೂ ರಾಷ್ಟ್ರ’ ಅಂದ್ರೆ ಮುಸ್ಲಿಮರನ್ನ ಹೊರಹಾಕೋದಲ್ಲ, ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಭಾಗವತ್
ಬ್ಲಾಕ್ ಸ್ಪಾಟ್‌ಗಳ ಮರುಸೃಷ್ಟಿಗೆ ಕಡಿವಾಣ:
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿ ಸ್ವಚ್ಛಗೊಳಿಸಿರುವ Garbage Vulnerable Points/Black Spots ಮತ್ತೆ ಕಸ ಸುರಿಯುವುದನ್ನು ತಡೆಯಲು ಪ್ರಹರಿ ವಾಹನಗಳ ಮೂಲಕ ನಿರಂತರ ನಿಗಾ ವಹಿಸಲಾಗುವುದು. ಹೊಸ ಬ್ಲಾಕ್ ಸ್ಪಾಟ್‌ಗಳು ಸೃಷ್ಟಿಯಾಗದಂತೆ ತಡೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ನಿಯಂತ್ರಿಸುವುದು ಹಾಗೂ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ಕಸ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ. ಇದನ್ನೂ ಓದಿ: KPSC ಹಗರಣ ಕೇಸಲ್ಲಿ CID ಮಾಸ್ಟರ್‌ಪ್ಲ್ಯಾನ್; CBIಗೆ ವಹಿಸುವಂತೆ ಹೈಕೋರ್ಟ್‌ಗೆ ಅರ್ಜಿ
ಘನತ್ಯಾಜ್ಯ ನಿಯಮ ಉಲ್ಲಂಘನೆಗಳ ಮೇಲೆ ವಿಶೇಷ ನಿಗಾ:
ಪ್ರಹರಿ ವಾಹನಗಳ ಮೂಲಕ ಮುಖ್ಯವಾಗಿ:
– ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಸ ಸುರಿಯುವುದು
– ಬ್ಲಾಕ್ ಸ್ಪಾಟ್‌ಗಳಲ್ಲಿ ಪದೇಪದೇ ತ್ಯಾಜ್ಯ ಎಸೆಯುವುದು
– ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಜಾಗಗಳಲ್ಲಿ ತ್ಯಾಜ್ಯ ಸುರಿಯುವುದು
– ಕಟ್ಟಡ ಮತ್ತು ಅವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುವುದು
– ವಾಣಿಜ್ಯ ಸಂಸ್ಥೆಗಳಿAದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು
– ತ್ಯಾಜ್ಯ ಸಾಗಣೆ ವೇಳೆ ರಸ್ತೆಗಳಲ್ಲಿ ತ್ಯಾಜ್ಯ ಚೆಲ್ಲುವುದು
– ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಇತರೆ ನಿಯಮ ಉಲ್ಲಂಘನೆಗಳು ಇವುಗಳ ಮೇಲೆ ನಿರಂತರ ನಿಗಾ ವಹಿಸಲಾಗುವುದು.
ಕಂಟ್ರೋಲ್ ರೂಂ ಹಾಗೂ ಪಾಲಿಕೆಯ ಐಟಿ ಟೀಮ್‌ನಿಂದ ನೇರ ಮೇಲ್ವಿಚಾರಣೆ:
ಎಲ್ಲಾ 4 ಪ್ರಹರಿ ವಾಹನಗಳ ಜಿಪಿಎಸ್ ಸ್ಥಳ, ಸಂಚಾರ ಹಾಗೂ ಕಾರ್ಯಾಚರಣೆಯನ್ನು ಆಪ್ ಆಧಾರಿತ ರಿಮೋಟ್ ಆಕ್ಸೆಸ್ ಮೂಲಕ ಕಂಟ್ರೋಲ್ ರೂಂ ಮತ್ತು ಹಿರಿಯ ಅಧಿಕಾರಿಗಳು ನೇರವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ. ವಾಹನಗಳಿಂದ ದಾಖಲಾಗುವ ಫೋಟೋ, ವಿಡಿಯೋ ಮತ್ತು ಜಿಪಿಎಸ್ ಮಾಹಿತಿಯನ್ನು ಪಾಲಿಕೆಯ ಕಂಟ್ರೋಲ್ ರೂಂ ಹಾಗೂ ಐಟಿ ತಂಡ ಪ್ರತಿದಿನ ಪರಿಶೀಲಿಸಿ, ಗುರುತಿಸಲಾದ ಸಮಸ್ಯೆಗಳು ಹಾಗೂ ಅವುಗಳ ಮೇಲೆ ಕೈಗೊಂಡ ಕ್ರಮಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದೆ. ಇದನ್ನೂ ಓದಿ: ಬೈಕ್ ಬೆನ್ನಟ್ಟಿ ಬಂದು ಗುಂಡಿನ ದಾಳಿ – ಪಂಜಾಬ್‌ನಲ್ಲಿ ಆಪ್ ನಾಯಕನ ಬರ್ಬರ ಹತ್ಯೆ
4 ‘ಪ್ರಹರಿ’ – 24*7 ಕಣ್ಗಾವಲು:
ಒಟ್ಟು 4 ಪ್ರಹರಿ ವಾಹನಗಳು ಎರಡು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಪ್ರತಿ ವಾಹನದಲ್ಲಿ ಚಾಲಕ ಮತ್ತು ಮಾರ್ಷಲ್ ಕಾರ್ಯನಿರ್ವಹಿಸಲಿದ್ದಾರೆ. ಈ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗಾಗಿ ಒಟ್ಟು 24 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಹರಿ ವಾಹನಗಳು ಕೇವಲ ದೂರುಗಳಿಗೆ ಸ್ಪಂದಿಸುವ ವಾಹನಗಳಾಗಿರದೆ, ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ಪತ್ತೆಹಚ್ಚುವ, ಬ್ಲಾಕ್ ಸ್ಪಾಟ್‌ಗಳ ಮೇಲೆ ನಿಗಾ ವಹಿಸುವ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನವನ್ನು ಬಲಪಡಿಸುವ ‘ಮೊಬೈಲ್ ಕಣ್ಗಾವಲು ಮತ್ತು ಜಾರಿ ಘಟಕ’ಗಳಾಗಿ ಕಾರ್ಯನಿರ್ವಹಿಸಲಿವೆ. ಇದನ್ನೂ ಓದಿ: ನೇಪಾಳ ಪ್ರವಾಹ ದುರಂತ – 3 ದಿನ ಮಣ್ಣಿನಡಿ ಸಿಲುಕಿದ್ದ 6 ವರ್ಷದ ಬಾಲಕಿಯ ರಕ್ಷಣೆ
ಕಸವನ್ನು ಎಲ್ಲೆಂದರಲ್ಲಿ ಸುರಿಯಬೇಡಿ; ನಿಯಮಬದ್ಧವಾಗಿ ವಿಲೇವಾರಿ ಮಾಡಿ. ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದರೆ ‘ಪ್ರಹರಿ’ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಸಾರ್ವಜನಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ತ್ಯಾಜ್ಯ ಉತ್ಪಾದಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Exclusive | ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆ
