ಬೆಂಗಳೂರು: KPSC ನೇಮಕಾತಿ (KPSC Scam) ಹಗರಣ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರಕರಣವನ್ನ ಸಿಬಿಐಗೆ (Gyanendra Kumar Arrest) ವಹಿಸಲು ಸಿಐಡಿ ಮಾಸ್ಟರ್‌ಪ್ಲ್ಯಾನ್ ಮಾಡಿದೆ.
ಹೌದು. ಪ್ರಕರಣವನ್ನು CBIಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಿನ್ನೆ ಸಂಜೆಯಷ್ಟೇ ಪೂರ್ಣಗೊಂಡಿದೆ. ಪ್ರಕರಣದಲ್ಲಿ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂಬ ವಾದವೂ ಹೈಕೋರ್ಟ್‌ನಲ್ಲಿ ಕೇಳಿಬಂದಿತ್ತು. ಇದೇ ವೇಳೆ, ಪ್ರಕರಣದ ತನಿಖೆ ಮತ್ತು ಇದುವರೆಗಿನ ಪ್ರಗತಿ ಬಗ್ಗೆ CID ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
KPSC ಹಗರಣ ಪ್ರಕರಣವನ್ನು CBIಗೆ ವಹಿಸಬೇಕು ಎಂಬ ಅರ್ಜಿಯ ವಿಚಾರಣೆ ವೇಳೆ, ಪ್ರಕರಣದಲ್ಲಿ ನಾಗೇಂದ್ರ ಕುರಿತು ನಡೆದ ಬೆಳವಣಿಗೆಗಳನ್ನ ಉದಾಹರಣೆಯಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ CID ಪ್ರಕರಣದ ಪ್ರಗತಿ ವರದಿಯನ್ನು ಸಲ್ಲಿಸುವ ಮೂಲಕ ತನಿಖೆಯ ಮಾಹಿತಿ ನೀಡಿದೆ. ಇದನ್ನೂ ಓದಿ:
ಐಎಎಸ್ ಅಧಿಕಾರಿ ಬಂಧನ
ಇನ್ನೂ ಕಳೆದ ರಾತ್ರಿಯಷ್ಟೇ ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆ ಗ್ಯಾನೇಂದ್ರ ಅವರನ್ನ ಸಿಐಡಿ ಅರೆಸ್ಟ್ ಮಾಡಿತ್ತು. ಈ ಸುದ್ದಿಯನ್ನ ನಿಮ್ಮ ʻಪಬ್ಲಿಕ್ ಟಿವಿʼ ಬ್ರೇಕ್ ಮಾಡಿತ್ತು. ಈ ಬೆನ್ನಲ್ಲೇ ಕಾರ್ಯಾಚರಣೆ ತೀವ್ರಗೊಳಿಸಿದ ಸಿಐಡಿ ತಂಡ ಮಧ್ಯವರ್ತಿಯೊಬ್ಬನನ್ನ ಬಂಧಿಸಿದೆ.
ಇದಕ್ಕೂ ಮುನ್ನ 11 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ಗ್ಯಾನೇಂದ್ರ ಅವರ ವಿಚಾರಣೆ ನಡೆಸಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ನಡೆಸಿದ್ದರು.
