– ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಲು ಅಬ್ದುಲ್ ಮಜೀದ್ ಬೇಡಿಕೆ
ಮೈಸೂರು: ತುಳು (Tulu) ಭಾಷೆ ಬೆನ್ನಲ್ಲೇ ಉರ್ದುಗೂ (Urdu) ಅಧಿಕೃತ ಭಾಷಾ ಸ್ಥಾನಮಾನಕ್ಕೆ ಆಗ್ರಹ ಶುರುವಾಗಿದೆ. ಎಸ್ಡಿಪಿಐ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಈ ಸಂಬಂಧ ಸಿಎಂಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಭಾಷೆ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ 4,236 ಉರ್ದು ಮಾಧ್ಯಮ ಶಾಲೆಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ತೆಲಂಗಾಣ ಮಾದರಿಯಲ್ಲಿ ಉರ್ದುವಿಗೆ ಸ್ಥಾನಮಾನ ನೀಡಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ
ಉರ್ದುವಿಗೆ ಸ್ಥಾನಮಾನ ನೀಡುವುದರಿಂದ ಕನ್ನಡಕ್ಕೆ ಧಕ್ಕೆಯಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಲು ಬೇಡಿಕೆ ಇಟ್ಟಿದ್ದು, ಉರ್ದು ಶಾಲೆಗಳ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹಿದ್ದಾರೆ. ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಉರ್ದುವಿನಲ್ಲೂ ನೀಡಲು ಒತ್ತಾಯಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿದ್ದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಕರಾವಳಿಯ ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಭಾಷೆ ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದರು. ಜೊತೆಗೆ ಕರಾವಳಿ ಅಭಿವೃದ್ಧಿಗೆ ಅನುದಾನ ಕೂಡ ಘೋಷಿಸಿದರು. ಇದನ್ನೂ ಓದಿ: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿದ್ದು ಐತಿಹಾಸಿಕ ಕ್ರಮ: ತಾರಾನಾಥ ಗಟ್ಟಿ ಕಾಪಿಕಾಡ್

