– ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯನಟ
ಹಾಸ್ಯನಟ ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇಂದು ಬೆಳಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು, ಚಿಕ್ಕಣ್ಣ–ಪಾವನಾ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಹಾರೈಸಿದ್ದಾರೆ.
ಚಿಕ್ಕಣ್ಣನ ಬಾಳಲ್ಲಿ ಶುರುವಾಯ್ತು ‘ಹೊಸ ಸಿನಿಮಾ’! – ‘ಸಿಂಗಲ್’ ಸೀನ್‌ಗೆ ಫುಲ್‌ಸ್ಟಾಪ್!
– ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯನಟ https://t.co/I69ZFhNJll#ChikkannaMarriage #ChikkannaPavana #Sandalwood #ChikkannaPavanaMarriage #Mysuru pic.twitter.com/vyWbE6wCK2
— PublicTV (@publictvnews) August 30, 2026
ಇನ್ನೂ, ಚಿಕ್ಕಣ್ಣ ಅವರ ಮದುವೆಗೂ ಮುನ್ನ ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ರು.
ಹಾಸ್ಯದ ಮೂಲಕ ಕನ್ನಡಿಗರ ಮನಗೆದ್ದ ಚಿಕ್ಕಣ್ಣ ಇದೀಗ ಪಾವನಾ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ನವದಂಪತಿಗೆ ಸಿನಿರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಒಟ್ಟಿನಲ್ಲಿ ಚಿಕ್ಕಣ್ಣ ಅವರ ಬಾಳಿನಲ್ಲಿ ಹೊಸ ಸಿನಿಮಾ ಶುರುವಾಗಿದ್ದು, ʻಸಿಂಗಲ್ ಸೀನ್ʼಗೆ ಫುಲ್‌ಸ್ಟಾಪ್ ಬಿದ್ದಿದೆ.
