ಆರು ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಟಾಕ್ಸಿಕ್ (Toxic) ಚಿತ್ರ ಸೆನ್ಸಾರ್ ಆಗಿದೆ. ಎಲ್ಲರ ನಿರೀಕ್ಷೆಯಂತೆ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಸಿನಿಮಾ ರನ್‌ಟೈಂ ಬೆರಗು ಮೂಡಿಸುವಂತಿದೆ.

ಹೌದು ಮೂರು ಗಂಟೆ 14 ನಿಮಿಷಗಳ ಕಾಲ ಟಾಕ್ಸಿಕ್ ರನ್‌ಟೈಂ ಹೊಂದಿದೆ. ಟಾಕ್ಸಿಕ್ ಪ್ರದರ್ಶನದ ಸಮಯ 194 ನಿಮಿಷಗಳನ್ನ ಒಳಗೊಂಡಿದ್ದು, ಭರ್ತಿ ಮಾಸ್ ಮನರಂಜನೆ ಕೊಡಲು ಯಶ್ ಸಿದ್ಧರಾಗಿದ್ದಾರೆ. ಬಲ್ಲ ಮೂಲದ ಪ್ರಕಾರ ಟಾಕ್ಸಿಕ್ ಕೇವಲ ಒಂದೇ ಭಾಗದಲ್ಲಿ ಬರಲಿರುವ ಚಿತ್ರ. ಯಶ್ (Yash) ಹಿಂದಿನ ಸಿನಿಮಾದ ಥರ ಎರಡು ಭಾಗದಲ್ಲಿ ಬರುವುದಿಲ್ಲ. ಹೀಗಾಗಿ ಒಂದೇ ಸಿನಿಮಾದಲ್ಲಿ ಭರಪೂರ ಮನರಂಜನೆ ಕೊಡಲು ಯಶ್ ಸಿನಿಮಾದ ಕಥೆ, ಪಾತ್ರವರ್ಗಕ್ಕೆ ತಕ್ಕಂತೆ ಹೆಚ್ಚಿನ ಡ್ಯುರೇಷನ್ ಒಳಗೊಂಡು ಚಿತ್ರ ಮಾಡಿದ್ದಾರಂತೆ. ಇದನ್ನೂ ಓದಿ: ರೋಡ್ ರೇಜ್ ಕಿರುಚಿತ್ರಕ್ಕೆ ನಟ ಶ್ರೀಮುರಳಿ ಸಾಥ್
ಪ್ರತಿ ಭಾಷೆಯಲ್ಲೂ ಸಪರೇಟ್ ಸೆನ್ಸಾರ್ ಆಗಿದೆ. ಇದೇ 26ಕ್ಕೆ ಅಖಾಡಕ್ಕೆ ಬರಲು ಚಿತ್ರ ಸಿದ್ಧವಾಗಿದೆ. 10,000ಕ್ಕೂ ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ವಿಶ್ವಾದಾದ್ಯಂತ ತೆರೆ ಕಾಣಲು ಟಾಕ್ಸಿಕ್ ರೆಡಿಯಾಗಿದೆ. ಇದನ್ನೂ ಓದಿ: ರಾಶಿ ಹಾಡಿನಲ್ಲಿ ಮೋಡಿ ಮಾಡಿದ ಆದಿತ್ಯ ಶಶಿಕುಮಾರ್
