ಸ್ಯಾಂಡಲ್ವುಡ್ (Sandalwood) ಮೊದಲ ಪ್ಯಾನ್ ಇಂಡಿಯಾ ಸಿನಿಮಾ (Shantikranthi) ಶಾಂತಿ ಕ್ರಾಂತಿ. ಕನ್ನಡದ ಮೊದಲ ಬಿಗ್ ಬಜೆಟ್ ಸಿನಿಮಾ ಕೂಡ ಹೌದು. ಒಂದೇ ಸಿನಿಮಾ ನಾಲ್ಕು ಭಾಷೆಗಳಲ್ಲಿ ತಯಾರಾಗಿ, ಮೂವರು ಸ್ಟಾರ್ ನಟರು ನಾಯಕನ ಪಾತ್ರ ಮಾಡಿದ ಮೊದಲ ಚಿತ್ರವೂ ಹೌದು. ಈ ಸಿನಿಮಾವನ್ನ ಮತ್ತೆ ನೋಡಬೇಕು ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ʻಶಾಂತಿಕ್ರಾಂತಿ ಸಿನಿಮಾ ರಿರಿಲೀಸ್ʼ ಕ್ಯಾಂಪೇನ್ ಮಾಡುತ್ತಿದ್ದಾರೆ.

ಈ ಮಧ್ಯೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸ್ಪಷ್ಟನೆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ಭಾಗ-2 | ಶಾಂತಿ ಕ್ರಾಂತಿ ರೀರಿಲೀಸ್ – ಸಿನಿಮಾದ ನೆಗೆಟಿವ್ ಕಾಪಿ ಇಲ್ಲ, ದುಬಾರಿ ದುನಿಯಾ

ಶಾಂತಿಕ್ರಾಂತಿ ನೆಗೆಟಿವ್ ಸದ್ಯಕ್ಕೆ ಇಲ್ಲ. ನೆಗೆಟಿವ್ ಮೆಲ್ಟ್ ಆಗಿರುವ ಕಾರಣದಿಂದಾಗಿ ಬೇರೆ ಮೂಲ ಹುಡುಕುತ್ತಿದ್ದೇವೆ. ಥಿಯೇಟರ್ಗೆ ಹೊಂದಾಣಿಕೆ ಆಗುವಂಥ ಕ್ವಾಲಿಟಿ ಸಿಗಬೇಕು. ಅದು ಸಿಕ್ಕರೂ ಕನಿಷ್ಠ 8 ತಿಂಗಳು ಸಿನಿಮಾಗಾಗಿ ಕೆಲಸ ಮಾಡಬೇಕು. ಆವತ್ತೇ ನಮ್ಮಣ್ಣ ರವಿಚಂದ್ರನ್ ಅದ್ಭುತ ಕ್ವಾಲಿಟಿ ಕೊಟ್ಟಿರುವ ಸಿನಿಮಾ ಅದು. ಅದನ್ನು ಹಾಗೆಯೇ ತರಬೇಕು. ಹಾಗಾಗಿ ಸಾಕಷ್ಟು ತಂತ್ರಜ್ಞಾನದ ಮೊರೆ ಹೋಗಬೇಕು ಅಂತ ಹೇಳಿದ್ದಾರೆ.
ಶಾಂತಿಕ್ರಾಂತಿ ಒಳ್ಳೆಯ ಕ್ವಾಲಿಟಿ ಪ್ರಿಂಟ್ ಅಥವಾ ಸೋರ್ಸ್ ಸಿಕ್ಕರೆ ಅಲ್ಲಿಂದ ಕೆಲಸ ಪ್ರಾರಂಭ ಮಾಡುತ್ತೇವೆ. ಸಡನ್ನಾಗಿ ಶಾಂತಿಕ್ರಾಂತಿ ಸಿನಿಮಾ ರಿರಿಲೀಸ್ ಕಷ್ಟ. ಈಗ ತಾಂತ್ರಿಕ ಕೆಲಸ ಶುರು ಮಾಡಿದ್ರು, 8 ತಿಂಗಳಿಂದ 1 ವರ್ಷ ಆಗಬಹುದು. ಅದಕ್ಕಿಂತಲೂ ಹೆಚ್ಚು ಸಮಯ ಆಗಬಹುದು. ಸೆಪ್ಟೆಂಬರ್, ಅಕ್ಟೋಬರ್ನಲ್ಲೇ ಸಿನಿಮಾ ರಿರಿಲೀಸ್ ಆಗುತ್ತೆ ಅನ್ನೋದೆಲ್ಲ ಸುಳ್ಳು, ಏನೇ ಇದ್ದರೂ, ಅಭಿಮಾನಿಗಳಿಗೆ ಹೇಳಿಯೇ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಭಾಗ -1: ಶಾಂತಿಕ್ರಾಂತಿ ಮರು ಬಿಡುಗಡೆಗೆ ಹಲವು ವಿಘ್ನ – ಮೇಕಿಂಗ್ ಹಿಂದಿದೆ ಕರಾಳ ಕಥೆ

ಮೊದ ಮೊದಲು ಶಾಂತಿ ಕ್ರಾಂತಿ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಕನಸಾಗಿತ್ತು. ಸಿನಿಮಾ ಶುರುವಾಗಿ ಹತ್ತೇ ಹತ್ತು ದಿನಕ್ಕೆ ಅದು ಕೆಟ್ಟ ಕನಸಾಗಿ ಬದಲಾಯ್ತು. ಬೆಟ್ಟದಷ್ಟು ಆಸೆಗಳನ್ನು ಹೊತ್ತು ಶಾಂತಿಕ್ರಾಂತಿ ಸಿನಿಮಾ ಮಾಡಲು ಹೊರಟಿದ್ದ ರವಿಚಂದ್ರನ್, ಹತ್ತು ದಿನಗಳ ನಂತರ ಸಿನಿಮಾ ನಿಲ್ಲಿಸಿಬಿಡುವ ಮಾತುಗಳನ್ನು ಆಡಿದ್ದರು. ಆದರೆ, ಆ ಸಿನಿಮಾ ಆಗಿದ್ದೇ ರೋಚಕ. ಫಲಿತಾಂಶ ಬೆಚ್ಚಿ ಬೀಳಿಸುವಂಥದ್ದು. ಶಾಂತಿಕ್ರಾಂತಿ ಸಿನಿಮಾದ ಹಿಂದೆ ಹತ್ತಾರು ಕರಾಳ ಕಥೆಗಳಿವೆ. ಆದರೂ, ಈ ಸಿನಿಮಾವನ್ನು ಮತ್ತೆ ನೋಡಬೇಕು ಅಂತ ಅಭಿಮಾನಿಗಳು ಬಯಸುತ್ತಿರೋದು ನಿಜಕ್ಕೂ ಶ್ಲಾಘನೀಯ.
