ಬೆಳಗಾವಿ: ಬಸ್ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ಎರಡು ಗ್ರಾಮದ ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಸವದತ್ತಿ ತಾಲೂಕಿನ ಜಕ್ಕಬಾಳದಲ್ಲಿ ನಡೆದಿದೆ.
ಬಸ್ ಚಲಿಸುತ್ತಿದ್ದ ವೇಳೆಯೇ ಜಕ್ಕಬಾಳ ಹಾಗೂ ಬಸರಗಿ ಗ್ರಾಮದ ಯುವಕರ ನಡುವೆ ಗಲಾಟೆ ಆರಂಭವಾಗಿತ್ತು. ಬಳಿಕ ಗಲಾಟೆ ತೀವ್ರವಾಗಿ ಬಸ್ ನಿಲ್ಲಿಸಲಾಗಿದೆ. ಈ ವೇಳೆ ಬೆಲ್ಟ್, ಕಲ್ಲು, ಕಟ್ಟಿಗೆಯಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೂಲಿ ವಿಚಾರಕ್ಕೆ ಗಲಾಟೆ, ಮಾಲೀಕನಿಂದ ಫೈರಿಂಗ್ – ಮಗುವಿನ ತಲೆಗೆ ಹೊಕ್ಕ ಗುಂಡು
ಪೊಲೀಸರಿಗೆ, ವಾಯುವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಬಸ್ ನಲ್ಲಿ ಈ ರೀತಿಯ ಕಿರುಕುಳಕ್ಕೆ ಕಡಿವಾಣ ಹಾಕಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ – ಪತಿ, ಮಾವ ಪೊಲೀಸರ ವಶಕ್ಕೆ
