ಬೆಂಗಳೂರು: ತಮಿಳುನಾಡು ಫಲಿತಾಂಶದಿಂದ (Tamil Nadu Assembly Election Results) ಆಶ್ಚರ್ಯ ಆಗಿದೆ. ಅಲ್ಲಿ ಹೊಸ ಯುಗಾರಂಭವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಫಲಿತಾಂಶ ಗ್ರಹಿಸಲು ಆಗಲಿಲ್ಲ. 30-40% ವೋಟ್ ಹೋಗಬಹುದು ಅಂದುಕೊಂಡಿದ್ದೆವು. ಈ ಪ್ರಮಾಣದಲಿ ಬದಲಾವಣೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್‌ರನ್ನ ನಟನಾಗಿ ನೋಡಿದ್ರು, ಮುಂದೆ ಸಿಎಂ ಆಗಿ ನೋಡ್ತಾರೆ: ಡಿವಿಎಸ್

ಕೇರಳದಲ್ಲಿ ನಂಬಿಕೆ ಇತ್ತು. 10 ವರ್ಷ ಆಗಿತ್ತು. ಜನ ಬದಲಾವಣೆ ಬಯಸಿದ್ದಾರೆ. ಇವತ್ತು ದೊಡ್ಡ ಬೆಂಬಲ ಸಿಕ್ಕಿದೆ. ಅಸ್ಸಾಂನಲ್ಲಿ ಪಾರ್ಟಿ ಡ್ಯೂಟಿ ಮಾಡಿದ್ದೇನೆ. ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಲೋಕಲ್ ಕೂಡ 50 ಹೇಳಿತ್ತು. ಡಿಲಿಮಿಟೇಷನ್ ಕಾರಣ ಆಯ್ತು. ಪಶ್ಚಿಮ ಬಂಗಾಳದಲ್ಲಿ ವೋಟ್ ಡಿಲೀಟ್ ಮಾಡಿದ್ದಾರೆ. ಮೆಷಿನ್ ಕೂಡ ಸಮಸ್ಯೆ ಮಾಡಿದ್ರು. ಗೆಲ್ಲಲೇಬೇಕು ಅನ್ನೋ ಕಾರಣಕ್ಕೆ ಬಿಜೆಪಿ ಏನೇನೋ ಮಾಡಿದರು ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ
ದಾವಣಗೆರೆಯಲ್ಲಿ ಕಾಂಗ್ರೆಸ್ ಲೀಡ್ ಇದೆ. ಎಸ್‌ಡಿಪಿಐ ವೋಟ್ ನಮಗೆ ಡೇಂಜರ್ ಆಗಿದೆ. ಎಸ್‌ಡಿಪಿಐ ಅವರನ್ನು ಲೈಟಾಗಿ ತೆಗೆದುಕೊಂಡಿಲ್ಲ. ಇಷ್ಟು ಆಗಲಿದೆ ಅಂತ ಅಂದಾಜಿಸಿರಲಿಲ್ಲ. ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಎಂಬ ಬಗ್ಗೆ ನಾನು ಮಾತನಾಡಲ್ಲ. ಎಸ್‌ಡಿಪಿಐ ಕೂಡ 12 ಸಾವಿರ ವೋಟ್ ತೆಗೆದುಕೊಂಡಿದೆ. ಈ ಬಗ್ಗೆ ಸಿಎಂ ಕೂಡ ಮಾತಾನಾಡಿದ್ದಾರೆ. ನಮ್ಮ ಗ್ಯಾರಂಟಿ ರಾಜ್ಯದಲ್ಲಿ ಚೆನ್ನಾಗಿ ನಡೆಯುತ್ತಿದೆ. ಜನ ಸ್ಪಂದಿಸಿದ್ದಾರೆ. ಇದಕ್ಕೆ ಈ ಫಲಿತಾಂಶ ಉದಾಹರಣೆ. ಇನ್ನೂ ರೌಂಡ್ ಇದೆ, ಚೆನ್ನಾಗಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್!












