ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಮಿಂಚು ಸಹಿತ ಜೋರು ಮಳೆಯಾಗಿದ್ದು (Thundestorm), ನಾನಾ ಅವಾಂತರ ಸಹ ಸೃಷ್ಟಿಯಾಗಿವೆ. ಲಿಂಗಸೂಗೂರು (Lingasuguru) ತಾಲೂಕಿನ ಯರಜಂತಿ ಬಳಿ ಬಸವನ ಬಗಡಿ ದೊಡ್ಡಿಯಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದ್ದಾರೆ.
40 ವರ್ಷದ ದುರುಗಮ್ಮ ಸಿಡಿಲಿಗೆ ಬಲಿಯಾದ ರೈತ ಮಹಿಳೆ. ಮಳೆ ಹಿನ್ನೆಲೆ ಬಣವೆಗೆ ತಾಡಪಾಲು ಹೊದಿಸುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ – ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು
ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಸಿಡಿಲು ಬಡಿದು ಮರ ಹೊತ್ತಿ ಉರಿಯುವುದು ಕಂಡು ಜನ ಆತಂಕಕ್ಕೊಳಗಾಗಿದ್ದರು. ರಾಯಚೂರು ನಗರದಲ್ಲೂ ಸುಮಾರು ಹೊತ್ತು ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟ ಬಿಸಿಲನಾಡು ಜನರಿಗೆ ಒಂದೆಡೆ ಮಳೆ ತಂಪೆರೆದರೆ ಇನ್ನೊಂದಡೆ ಸಿಡಿಲು ಬಡಿದು ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಫಾರಿನ್ ಸ್ಟೈಲಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಸೀಮೆ ಎಣ್ಣೆ ಸುರಿದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!



