ಮುಂಬೈ: ಭಾರತೀಯ ವಾಯುಪಡೆ ಉದ್ಯೋಗಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ, ಅತ್ಯಾಚಾರ ಎಸಗಿ, ಮತಾಂತರಕ್ಕೆ ಒತ್ತಾಯಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 16 ತಿಂಗಳ ಕಾಲ ವ್ಯವಸ್ಥಿತವಾಗಿ ಮಾದಕ ದ್ರವ್ಯ ನೀಡಿ, ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮದುವೆ ಮಾಡಿ ಬೇರೆ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಜೂ.22 ರವರೆಗೆ ದೇಶದಲ್ಲಿ ಟೆಲಿಗ್ರಾಂ ನಿಷೇಧ – ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ
ಅಯ್ಯಜ್ ತಾಜ್ ಮದರೆ (26) ಮತ್ತು ಆಮಿನ್ ಶೇಖ್ (30) ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಹಜರತ್ ಮೌಲಾನಾ ಎಂಬ ಧರ್ಮಗುರುವನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ನಗರದಲ್ಲಿ ಕೆಲಸ ಮಾಡುವ ಭಾರತೀಯ ವಾಯುಪಡೆಯ ಉದ್ಯೋಗಿಯನ್ನು ಮದುವೆಯಾಗಿರುವ ಮಹಿಳೆ ಜೂನ್ 12 ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಬಹು ಸೆಕ್ಷನ್‌ಗಳ ಅಡಿಯಲ್ಲಿ, ಅತ್ಯಾಚಾರ, ಸುಲಿಗೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹಾಗೂ ಮಹಾರಾಷ್ಟ್ರ ಮಾಟ ಮಂತ್ರ ವಿರೋಧಿ ಕಾಯ್ದೆಯಡಿ ಆರೋಪಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೋನೆಗಾಂವ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅದೇ ದಿನ ಇಬ್ಬರ ಬಂಧನ ನಡೆದಿದೆ ಎಂದು ಡಿಸಿಪಿ ಋಷಿಕೇಶ್ ಸಿಂಗಾರೆಡ್ಡಿ ತಿಳಿಸಿದ್ದಾರೆ. ಪೊಲೀಸರಿಗೆ ಬೇಕಾಗಿರುವ ಧರ್ಮಗುರುವನ್ನು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿ ಮಾಡುವಂತಿಲ್ಲ: ಕೇಂದ್ರ ಆದೇಶ
ದೂರು ನೀಡಿರುವ ಮಹಿಳೆ ಮತ್ತು ಆರೋಪಿ ಮಾದಾರೆ ಪರಸ್ಪರ ಪರಿಚಯಸ್ಥರು. 2025ರಿಂದ ನನಗೆ ಚಿತ್ರಹಿಂಸೆ ನೀಡಿದ್ದಾರೆಂದು ಮಹಿಳೆ ದೂರಿದ್ದಾರೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸುಲಿಗೆ ಮಾಡಿದ್ದಾರೆ, ಧರ್ಮವನ್ನು ಮತಾಂತರಿಸಲು ಒತ್ತಡ ಹೇರಿದ್ದಾರೆ. ಅಲ್ಲದೇ ಮಾಟ ಮಂತ್ರ ಮಾಡಿದ್ದಾರೆಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
