ಟೆಹ್ರಾನ್: ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ಬೆನ್ನಲ್ಲೇ ಬೆನ್ನಲ್ಲೇ ಪಾಕಿಸ್ತಾನ (Pakistan) ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯ ದಾಟದೇ ಯೂಟರ್ನ್ ಹೊಡೆದಿದೆ.
ತೈಲ ಟ್ಯಾಂಕರ್ಗಳಾದ ಖೈರ್ಪುರ್ (Khairpur) ಮತ್ತು ಶಲಾಮರ್ (Shalamar) ರಂದು ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ತಮ್ಮ ದಾರಿಯನ್ನು ಬದಲಾಯಿಸಿದೆ ಇರಾನ್ನ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿಯ ಬಳಿ ಯು-ಟರ್ನ್ ತೆಗೆದುಕೊಂಡಿದ್ದ ಖೈರ್ಪುರ್ ಹಡಗು, ನಂತರ ಎರಡನೇ ಬಾರಿ ಹಾದಿ ಬದಲಿಸಿ ಪರ್ಷಿಯನ್ ಗಲ್ಫ್ನತ್ತ ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ವರದಿಯಾಗಿದೆ. ಇದು ಕುವೈತ್ನ ಮಿನಾ ಅಬ್ದುಲ್ಲಾ (Mina Abdullah) ಬಂದರಿನತ್ತ ಸಾಗುತ್ತಿತ್ತು. ಇದನ್ನೂ ಓದಿ: ಪಾಕ್ ಜನತೆಗೆ ಮತ್ತೊಂದು ಶಾಕ್ – ವಿದ್ಯುತ್ ದರ ದುಪ್ಪಟ್ಟು ಹೆಚ್ಚಳ
ಯುಎಇಯ ದಾಸ್ ದ್ವೀಪದತ್ತ (Das Island) ಹೊರಟಿದ್ದ ಶಲಾಮರ್ ಹಡಗು ಯೂಟರ್ನ್ ತೆಗೆದುಕೊಂಡಿದ್ದು ಇದು ಸದ್ಯಕ್ಕೆ ಕಾಯುವ ಸ್ಥಿತಿಯಲ್ಲಿದ್ದು ತನ್ನ ಮುಂದಿನ ಪ್ರಯಾಣದ ಬಗ್ಗೆ ನಿರ್ಧರಿಸಬೇಕಿದೆ. ಇದನ್ನೂ ಓದಿ: ಇರಾನ್ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್ ವಾರ್ನಿಂಗ್

