ತುಮಕೂರು: ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೌರ ಕಾರ್ಮಿಕ ಯುವಕನಿಗೆ ಯುವತಿಯ ಪೋಷಕರು ಮನಸೋ ಇಚ್ಛೆ ಥಳಿಸಿದ ಘಟನೆ ತುಮಕೂರಿನ (Tumakuru) ಕುಣಿಗಲ್‌ನಲ್ಲಿ (Kunigal) ನಡೆದಿದೆ.
ಗುಬ್ಬಿ ಪಟ್ಟಣದ ನಿವಾಸಿ ಮೋಹಿತ್ ಥಳಿತಕ್ಕೊಳಗಾದ ಯುವಕ. ಕುಣಿಗಲ್ ಮೂಲದ ಕಾಲೇಜು ಯುವತಿ ಗುಬ್ಬಿ ಜಾತ್ರೆಗೆ ಬಂದಾಗ ಮೋಹಿತ್‌ನ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್‌ನಲ್ಲಿ ತೊಡಗಿದ್ದರು. ಇದು ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇದನ್ನೂ ಓದಿ: ಐದೇ ಸೆಕೆಂಡ್‌ನಲ್ಲಿ ಹಾರಿದ 10 ಗುಂಡು – ಬಿಷ್ಣೋಯ್ ಗ್ಯಾಂಗ್‌ನಿಂದ ಜಿಮ್ ಮಾಲೀಕನ ಬರ್ಬರ ಹತ್ಯೆ
ಇದರಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಮಗಳ ಮೊಬೈಲ್‌ನಿಂದ ಮೋಹಿತ್‌ಗೆ ಮೆಸೆಜ್ ಮಾಡಿ ಕುಣಿಗಲ್‌ನ ತೋಟಕ್ಕೆ ಬರುವಂತೆ ಕರೆಸಿಕೊಂಡಿದ್ದರು. ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಯುವಕನ ಕಾಲು, ಸೊಂಟದ ಮೂಳೆ ಮುರಿತವಾಗಿದೆ.
ಗಾಯಗೊಂಡ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಪೋಷಕರ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಜೈಲಿನಿಂದಲೇ ಪತ್ನಿ ಕೊಲೆಗೆ ಸುಪಾರಿ – ಬುರ್ಖಾ ಧರಿಸಿ ಬಂದು ಧರ್ಮದೇಟು ತಿಂದ ಪತಿಯ ಸಹಚರರು
