-ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ʻಮಹಾʼ ಸಿಎಂ
ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರಿಂದು (ಆ.17) ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಭೇಟಿ ಮಾಡಿದರು.
ಈ ಕುರಿತು ಸಿಎಂ ಫಡ್ನವೀಸ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭೇಟಿ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಹಾಗೂ ಕೇಂದ್ರ-ರಾಜ್ಯ ಜಂಟಿ ಯೋಜನೆಗಳಿಗೆ ಹೆಚ್ಚಿನ ಬೆಂಬಲ ಕೋರುವ ಕುರಿತು ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಿತಿನ್ ನಬಿನ್ ಹೊಸ ತಂಡ ರಚನೆ – ರಾಷ್ಟ್ರೀಯ ಉಪಾಧ್ಯಕ್ಷ ಪಟ್ಟಕ್ಕೆ ರಾಜ್ಯದ ನಾಗರಾಜ, ಸ್ಮೃತಿ ಇರಾನಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ
I called on and met our global leader, Nation’s beloved PM Hon @narendramodi Ji in New Delhi today.
We had a detailed discussion on various topics.
I briefed him on progress of numerous developmental projects and requested for more support from GoI on the joint Centre-State… pic.twitter.com/NyNta0hlnp— Devendra Fadnavis (@Dev_Fadnavis) August 17, 2026
ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ಈ ಚರ್ಚೆಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಪ್ರಧಾನಮಂತ್ರಿಯವರ ಮಾರ್ಗದರ್ಶನ ಮಹಾರಾಷ್ಟ್ರದ ಬೆಳವಣಿಗೆಗೆ ಅತ್ಯಂತ ಮುಖ್ಯವಾದುದು. ಈ ಭೇಟಿಯು ತಮಗೆ ಸಕಾರಾತ್ಮಕ ಶಕ್ತಿಯನ್ನು ನೀಡಿದೆ. ಅಭಿವೃದ್ಧಿ ದೃಷ್ಟಿಯಿಂದ ಅವರ ಮಾರ್ಗದರ್ಶನ ಹಾಗೂ ರಾಜ್ಯಕ್ಕೆ ಅವರು ನೀಡುವ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಧನ್ಯವಾದ ಅರ್ಪಿಸಿದ್ದಾರೆ.
ಪ್ರಧಾನಮಂತ್ರಿಯವರೊಂದಿಗಿನ ಮಾತುಕತೆಯ ಬಳಿಕ ಮುಂಬೈಗೆ ವಾಪಸಾಗಲಿರುವ ಮುಖ್ಯಮಂತ್ರಿಗಳು, ಮಂಗಳವಾರ (ಆ.18) ಮುಂಬೈನ `ದಿ ಲಲಿತ್’ ಹೋಟೆಲ್‌ನಲ್ಲಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಲಾಗಿರುವ 2026ರ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.
केंद्रीय अर्थमंत्री मा. निर्मला सीतारामनजी यांची आज नवी दिल्ली येथे भेट घेतली.
मुंबई-वाढवण एक्सप्रेस-वे कनेक्टिव्हीटीसाठी (उत्तन-विरार सी-लिंक) जायकामार्फत आर्थिक सहाय्य मिळण्यासाठी केंद्रीय वित्त मंत्रालयाकडून परवानगी मिळावी, अशी विनंती या बैठकीत केली. याबाबत निश्चितपणे… pic.twitter.com/OVxBIYITaH— Devendra Fadnavis (@Dev_Fadnavis) August 17, 2026
ನಿರ್ಮಲಾ ಸೀತಾರಾಮನ್ ಭೇಟಿಯಾದ ʻಮಹಾʼ ಸಿಎಂ:
ಇದೇ ವೇಳೆ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂಬೈ-ವಧವನ್ ಎಕ್ಸ್‌ಪ್ರೆಸ್‌ವೇ ಸಂಪರ್ಕ ಯೋಜನೆಯಾದ ಉತ್ತನ್-ವಿರಾರ್ ಸಮುದ್ರ ಸೇತುವೆ ನಿರ್ಮಾಣಕ್ಕಾಗಿ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA)ಯಿಂದ ಧನಸಹಾಯವನ್ನು ಪಡೆಯಲು ಅನುಮೋದನೆ ಕೋರಿ ಮನವಿ ಸಲ್ಲಿಸಿದರು. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ‘ಉಚಿತ ಎಲೆಕ್ಟ್ರಿಕ್ ಸ್ಟೌ’ ಸುಳ್ಳು ಸಂದೇಶವನ್ನು ನಂಬಬೇಡಿ: ಪ್ರಹ್ಲಾದ್ ಜೋಶಿ ಎಚ್ಚರಿಕೆ


