ಭುವನೇಶ್ವರ: 26 ವರ್ಷದ ಟೆಕ್ಕಿ ಮನೆಗೆ ಅಪರಿಚಿತ ಮುಸುಕುಧಾರಿ ವ್ಯಕ್ತಿಯೊಬ್ಬ ನುಗ್ಗಿ ಬಂದೂಕು ತೋರಿಸಿ, ಬೆದರಿಸಿ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ಭುವನೇಶ್ವರದಲ್ಲಿ ಘಟನೆ ನಡೆದಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಭುವನೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯ ಗುರುತು ಪತ್ತೆಹಚ್ಚುವುದು, ಆತ ಮನೆಗೆ ಹೇಗೆ ಪ್ರವೇಶಿಸಿದ ಮತ್ತು ಘಟನೆಗೂ ಮುನ್ನ ಹಾಗೂ ನಂತರ ಏನಾಯಿತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಆದರೆ, ಆತನನ್ನು ಆರೋಪಿಯಾಗಿ ಅಧಿಕೃತವಾಗಿ ಘೋಷಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಟೆಕ್ಕಿ ಹಾಗೂ ಆಕೆಯ ಅಕ್ಕ ಭುವನೇಶ್ವರದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಳು. ಘಟನೆ ನಡೆದ ಸಮಯದಲ್ಲಿ ಆಕೆಯ ಸಹೋದರಿ ಮನೆಯಲ್ಲಿ ಇರಲಿಲ್ಲ. ಮಹಿಳೆ ಒಂಟಿಯಾಗಿದ್ದಾಗ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಬಂದೂಕಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಚಿತಾ ರಾಮ್ಗೆ ನಿರಾಸೆ; 2 ಗಂಟೆ ಕಾದರೂ ಹೊರಬರಲಿಲ್ಲ ದರ್ಶನ್
ಪೊಲೀಸರು ಮನೆಯೊಳಗೆ ಬಲವಂತವಾಗಿ ಪ್ರವೇಶಿಸಿದ ಯಾವುದೇ ಗುರುತುಗಳಿವೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಮನೆಯ ಸುತ್ತಮುತ್ತಲಿನ CCTV ದೃಶ್ಯಾವಳಿಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ.ಇದನ್ನೂ ಓದಿ: Asian Games: ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದುಕೊಟ್ಟ ನಿತೇಶ್; ಸ್ಕ್ವ್ಯಾಷ್ ತಂಡಕ್ಕೆ ಕಂಚು

