ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ (Marrriage) ಹೆಂಡತಿ ಇಬ್ರು ಮಕ್ಕಳಿದ್ದರೂ ಎರಡನೇ ಮದುವೆಗೆ ರೆಡಿ ಆಗಿದ್ದ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲೇ ಮೊದಲ ಹೆಂಡತಿ ಧಿಡೀರ್ ಎಂಟ್ರಿ ಕೊಟ್ಟು ಮದುವೆ ರದ್ದಾಗಿ, ಗಂಡ ಪೊಲೀಸರ (Police) ಅತಿಥಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಬಳಿ ಘಟನೆ ನಡೆದಿದೆ. ಅಂದಹಾಗೆ ಆಂಧ್ರ ಮೂಲದ ಕದಿರಿಯ ಸುರೇಶ್ ಎಂಬಾತ ಹಲವು ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ನಾಗಮಣಿ ಎಂಬುವವರೊಂದಿಗೆ ವಿವಾಹವಾಗಿ ಇಬ್ಬರು ಮಕ್ಕಳು ಸಹ ಇದ್ದರು. ಇದನ್ನೂ ಓದಿ: ಮತ್ತೊಂದು ʻಮನಿ ಬ್ಯಾಗ್ʼ ಕೇಸ್ – 6 ಲಕ್ಷ ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ

ಆದ್ರೆ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ ಹೆಂಡತಿ ಬೇರೆ ಬೇರೆಯಾಗಿದ್ರು. ಹೀಗಾಗಿ ಈಗ ಸುರೇಶ್ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಮತ್ತೊಂದು ಮದುವೆಗೆ ರೆಡಿಯಾಗಿ ನಿಂತಿದ್ದ. ಇನ್ನೇನು ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಅಕ್ಕ ಪಡೆ ಪೊಲೀಸರೊಂದಿಗೆ ನಾಗಮಣಿ ಮದುವೆ ಮನೆಗೆ ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾಳೆ.
ವರ ಸುರೇಶ್ ನನ್ನ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದು ಇದರಿಂದ ಮದುವೆ ನಿಂತು ಹೋಗಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು – ಸರ್ವಪಕ್ಷಗಳ ಸಭೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳ ತೀವ್ರ ಆಕ್ಷೇಪ

