– ಬೇರೆ ಜಿಲ್ಲೆಗಳಿಂದ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದ ಕಾಮುಕ ತಂದೆ
– 2.5 ಲಕ್ಷ ರೂ. ಕೊಟ್ಟು ಸುಪಾರಿ ನೀಡಿದ್ದ ಮಗ
ಯಾದಗಿರಿ: ಮಗನಿಂದಲೇ ತಂದೆಯ ಕೊಲೆ ನಡೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ.
ಮೃತ ತಂದೆಯನ್ನು 75 ವರ್ಷದ ಹಂಪಣ್ಣ ಸಜ್ಜನ್ ಹಾಗೂ ಸುಪಾರಿ ಕೊಟ್ಟ ಮಗನನ್ನು ನರಸರೆಡ್ಡಿ, ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುಪ್ತಾಂಗ, ದೇಹದ ಮೇಲೆ 17 ಬಾರಿ ಚಾಕುವಿನಿಂದ ಇರಿದು ಕ್ರೌರ್ಯ – ಅಪ್ರಾಪ್ತೆಯನ್ನ ಪ್ರೀತಿಸಿ, ಎಂಗೇಜ್ಮೆಂಟ್ ಆಗಿದ್ದ ಭಾವಿ ಪತಿ ಎಸ್ಕೇಪ್
ಯಾದಗಿರಿಯ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿದ್ದ. ಈ ವೇಳೆ ಪೊಲೀಸರು ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಇಂಟರೆಸ್ಟಿಂಗ್ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೊಬೈಲ್‌ನಲ್ಲಿ ಸಿಕ್ಕಿದ್ದೇನು?
ಮೃತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆ ತೆಗೆದುಕೊಂಡ ಫೋಟೋ ಸಿಕ್ಕಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿ ತನ್ನ ಮಕ್ಕಳ ಜೊತೆ ಊರಲ್ಲಿ ಇರದೇ ಕಾಮದಾಟಕ್ಕಾಗಿ ಹೊಲದಲ್ಲಿ ವಾಸವಾಗಿದ್ದ. 42 ಎಕರೆ ಭೂಮಿಯನ್ನು ಹೊಂದಿದ್ದು, ಬಂದ ಆದಾಯದಲ್ಲಿ ಶೋಕಿ ನಡೆಸುತ್ತಿದ್ದ. ಅಲ್ಲದೇ ಮದ್ಯವ್ಯಸನಿಯೂ ಕೂಡ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಂದ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದ. ಕೆಲ ಮಹಿಳೆಯನ್ನು ತಿಂಗಳುಗಳ ಕಾಲ ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದ. ಸೊಸೆಯನ್ನೂ, ಜಮೀನಿಗೆ ಕೆಲಸಕ್ಕೆ ಬಂದವರನ್ನೂ ಬಿಡುತ್ತಿರಲಿಲ್ಲ ಎಂದು ತನಿಖೆ ವೇಳೆ ಬಯಲಾಗಿದೆ.
ಕಾಮಿಷ್ಟ ತಂದೆಯಿಂದ ಬೇಸತ್ತು ಹೋಗಿದ್ದ ಮಗ ನಾಲ್ವರನ್ನು ಕರೆಸಿ, 2.5 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ. ಪೊಲೀಸರಿಗೆ ನಾನು ದೂರು ನೀಡುತ್ತೇನೆ. ನಿಮಗೆ ಏನು ಆಗಲ್ಲ, ನಾನೇ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಕ್ಕೆ ಹಂತಕರು ಕೊಲೆ ಮಾಡಿದ್ದರು. ಬಳಿಕ ದೂರು ನೀಡಿ, ಅಂತ್ಯಕ್ರಿಯೆಯಲ್ಲಿ ಕಣ್ಣೀರು ಹಾಕಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನ – ಮ್ಯಾಕ್ರನ್ ಜೊತೆ ಮೋದಿ ಮಾತುಕತೆ

