ಚಂಢೀಗಡ: ಐಪಿಎಲ್ 2026ರ (IPL 2026) ಪ್ಲೇ-ಆಫ್ (Playoffs) ಪರ್ವ ಶುರುವಾಗಿದೆ. ಇಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿವೆ.
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ (Maharaja Yadavindra Singh PCA Stadium) ಎಲಿಮಿನೇಟರ್ ಪಂದ್ಯ (Eliminator) ನಡೆಯಲಿದ್ದು, ಉಭಯ ತಂಡಗಳೂ `ಮಾಡು ಇಲ್ಲವೇ ಮಡಿ’ ಎಂಬಂತೆ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್-2ರಲ್ಲಿ ಗುಜರಾತ್ ಟೈಟನ್ಸ್‌ನೊಂದಿಗೆ ಆಡಲಿದ್ದು, ಸೋತ ತಂಡವು ಐಪಿಎಲ್ 2026ರ ಫೈನಲ್ ರೇಸ್‌ನಿಂದ ಹೊರಬೀಳಲಿದೆ. ಇದನ್ನೂ ಓದಿ: IPL 2026 | ಪ್ಲೇಆಫ್‌ಗೆ ತಂಡಗಳು ಫೈನಲ್ – ವೇಳಾಪಟ್ಟಿ ಹೀಗಿದೆ…
𝐍𝐎 𝐒𝐄𝐂𝐎𝐍𝐃 𝐂𝐇𝐀𝐍𝐂𝐄𝐒 😮💨#SRH & #RR are ready for a do-or-die battle to move a step closer to the Final! 🔥
Which team will make it to Qualifier 2? 🤔#TATAIPL 2026, Eliminator 👉 #SRHvRR | WED, 27th MAY, 6:30 PM pic.twitter.com/XO9yTZo5ve
— Star Sports (@StarSportsIndia) May 27, 2026
ಟೂರ್ನಿಯ ಆರಂಭದಲ್ಲಿ ಸರಣಿ ಸೋಲುಗಳಿಂದ ಪಾಠ ಕಲಿತ ಹೈದರಾಬಾದ್ ತಂಡ ನಂತರದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ 18 ಅಂಕಗಳೊಂದಿಗೆ ಪ್ಲೇ-ಆಫ್ ತಲುಪಿದೆ. ಇನ್ನೂ ಆರಂಭಿಕ ನಾಲ್ಕೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್, ಮಧ್ಯದಲ್ಲಿ ಸಡನ್ ಆಗಿ ಫಾರ್ಮ್ ಕಳೆದುಕೊಂಡಿತ್ತು. ಬಳಿಕ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಜಯ ಸಾಧಿಸಿ ಪ್ಲೇ-ಆಫ್ಸ್‌ಗೆ ಲಗ್ಗೆ ಇಟ್ಟಿದೆ.

ಸನ್‌ರೈಸರ್ಸ್ ಹೈದರಾಬಾದ್‌ಗೆ ಬ್ಯಾಟಿಂಗ್‌ನದ್ದೇ ಬಲ
ಸನ್‌ರೈಸರ್ಸ್ ಹೈದರಾಬಾದ್ (Sunrisers Huderabad) ತಂಡದ ಬ್ಯಾಟಿಂಗ್ ಬಲವು ಅಗ್ರ ಕ್ರಮಾಂಕದ ನಾಲ್ಕು ಪ್ರಮುಖ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಮೇಲೆ ನಿಂತಿದೆ. ಟ್ರಾವಿಸ್ ಹೆಡ್ ಈ ವರ್ಷ ಅಷ್ಟಾಗಿ ರನ್ ಗಳಿಸದಿದ್ದರೂ, ಉಳಿದ ಮೂವರು ಆಟಗಾರರು ಅದನ್ನು ಯಶಸ್ವಿಯಾಗಿ ಸರಿದೂಗಿಸಿದ್ದಾರೆ.ಇದನ್ನೂ ಓದಿ: ಗುಜರಾತ್ ಬಗ್ಗುಬಡಿದು ಫೈನಲ್‌ಗೆ RCB ‘ರಾಯಲ್’ ಎಂಟ್ರಿ – ಈ ಸಲನೂ ಕಪ್ ನಮ್ದೆ?

ಲೀಗ್ ಹಂತದ ಅಂತ್ಯಕ್ಕೆ ಕ್ಲಾಸೆನ್, ಕಿಶನ್ ಮತ್ತು ಅಭಿಷೇಕ್ ಮೂವರೂ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಎಸ್‌ಆರ್‌ಹೆಚ್ ಈ ಸೀಸನ್‌ನಲ್ಲಿ ಜಂಟಿ ಗರಿಷ್ಠವಾಗಿ ಬರೋಬ್ಬರಿ 9 ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿ ದಾಖಲೆ ಬರೆದಿದೆ. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಹೆನ್ರಿಚ್ ಕ್ಲಾಸೆನ್ ಒಟ್ಟು 606 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
Skydiving straight into the final four! 🪂#TheFinalLeap is 🔛#TATAIPL | @RCBTweets | @gujarat_titans | @SunRisers | @rajasthanroyals pic.twitter.com/n4HVCAtBeB
— IndianPremierLeague (@IPL) May 24, 2026
ರಾಜಸ್ಥಾನ್ ರಾಯಲ್ಸ್‌ಗೆ `ವೈಭವ’ದ ಅಬ್ಬರ
ಆರ್‌ಆರ್ (Rajasthan Royals) ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಈ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಜಸ್ಪ್ರಿತ್ ಬುಮ್ರಾ ಅವರಂತಹ ಬೌಲರ್‌ಗಳ ಎದುರು ಹೆದರದೇ ಆಡಿರುವ ಅವರು, ತಮ್ಮ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಸೂರ್ಯವಂಶಿಗೆ ಸಾಥ್ ನೀಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.ಇದನ್ನೂ ಓದಿ: ಡಫಿ ಜಾಗದಲ್ಲಿ ಶೆಪಾರ್ಡ್ ತಂದು ಬೌಲಿಂಗ್ ಮಾಡಿಸಿದ್ದು ಯಾಕೆ – ತಂಡದ ತಂತ್ರಗಾರಿಕೆಯನ್ನು ಬಿಚ್ಚಿಟ್ಟ ರಜತ್

ರನ್ ಹೊಳೆ ಹರಿಯುವ ನಿರೀಕ್ಷೆ:
ಮುಲ್ಲಾನ್‌ಪುರದ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ರನ್‌ಗಳ ಮಳೆ ಹರಿಯುವುದು ಗ್ಯಾರಂಟಿ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಬೌಲರ್‌ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಲಿದೆ. ರಾಜಸ್ಥಾನ ತಂಡದಲ್ಲಿ ಜೋಫ್ರಾ ಆರ್ಚರ್ ಅವರ ವೇಗದ ದಾಳಿ ನಡೆಸಬೇಕಿದೆ. ಈ ಸೀಸನ್‌ನಲ್ಲಿ ಈಗಾಗಲೇ 21 ವಿಕೆಟ್ ಉರುಳಿಸಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ಚರ್, ಪವರ್‌ಪ್ಲೇನಲ್ಲೇ ಹೈದರಾಬಾದ್‌ನ ಸ್ಫೋಟಕ ಆರಂಭಿಕರನ್ನು ಕಟ್ಟಿಹಾಕಬೇಕಿದೆ.
No second chances 🙅♂️
Orange fire meets Pink royalty in the #Eliminator 🧡🩷#TATAIPL | #TheFinalLeap | #SRHvRR pic.twitter.com/VGm9fzJaEu
— IndianPremierLeague (@IPL) May 24, 2026
ಹೈದರಾಬಾದ್ ಪರ ಎಶಾನ್ ಮಾಲಿಂಗ (19 ವಿಕೆಟ್) ಮತ್ತು ಸಾಕಿಬ್ ಹುಸೈನ್ (15 ವಿಕೆಟ್) ಜೋಡಿ ರಾಜಸ್ಥಾನದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯವರ ರನ್ ವೇಗಕ್ಕೆ ಬ್ರೇಕ್ ಹಾಕಲು ವಿಶೇಷ ತಂತ್ರ ರೂಪಿಸಬೇಕಿದೆ. ಕ್ಯಾಪ್ಟನ್ ಕಮಿನ್ಸ್ ಮತ್ತು ಪ್ರಫುಲ್ ಕೂಡ ಸಾಥ್ ನೀಡಲಿದ್ದಾರೆ.

ಸಂಭವನೀಯ ಆಟಗಾರರು:
ಸನ್‌ರೈಸರ್ಸ್ ಹೈದರಾಬಾದ್:
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಸಲೀಲ್ ಅರೋರಾ, ಸ್ಮರಣ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಾಂಗ್, ಎಶಾನ್ ಮಾಲಿಂಗ, ಸಾಕಿಬ್ ಹುಸೈನ್, ಪ್ರಫುಲ್ ಹಿಂಗೆ / ಹರ್ಷಲ್ ಪಟೇಲ್.
ರಾಜಸ್ಥಾನ್ ರಾಯಲ್ಸ್:
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ದಾಸುನ್ ಶನಕ, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ಪ್ರದೋಷ್ ರಂಜನ್ ದುಬೆ, ನಂಡ್ರೆ ಬರ್ಗರ್, ಯಶ್ ರಾಜ್ ಪೂಂಜ, ಬ್ರಿಜೇಶ್ ಶರ್ಮಾ.ಇದನ್ನೂ ಓದಿ: ತಂಡದಿಂದ ಹೊರಬಂದಿದ್ದು ನನ್ನ ನಿರ್ಧಾರವಲ್ಲ – RCB ವಿರುದ್ಧ ತಿರುಗಿಬಿದ್ರಾ ರೇಪ್ ಆರೋಪಿ ಯಶ್ ದಯಾಳ್
