ಮುಂಬೈ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. 10 ತಂಡಗಳ ಪೈಕಿ ಬೆಂಗಳೂರು (RCB), ಗುಜರಾತ್, ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡಗಳು ಈ ಬಾರಿಯ ಪ್ಲೇ ಆಫ್ ಪ್ರವೇಶಿಸಿವೆ. ಉಳಿದ ಆರು ತಂಡಗಳು ಐಪಿಎಲ್ ಅಭಿಯಾನ ಮುಗಿಸಿವೆ.
It’s Playoffs time, folks 😎
Comment your early prediction for the winner 👇🏆 #TATAIPL | #TheFinalLeap | #Qualifier1 | #Eliminator pic.twitter.com/cT0Y2Ri3T6
— IndianPremierLeague (@IPL) May 24, 2026
ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ (Qualifier1) ಮೇ 26ರಂದು ಅಗ್ರ ಎರಡು ತಂಡಗಳಾದ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮೇ 31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರವಾಗಿ ಎಂಟ್ರಿ ಕೊಡಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುತ್ತದೆ.
ಮೇ 27 ರಂದು ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನೆಡೆಸಲಿವೆ. ಈ ಪಂದ್ಯ ನ್ಯೂ ಚಂಢೀಗಡದಲ್ಲಿ ನಡೆಯಲಿದ್ದು, ಗೆದ್ದ ತಂಡ ಕ್ವಾಲಿಫೈಯರ್ -2ಕ್ಕೆ ಲಗ್ಗೆ ಇಡಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇದನ್ನೂ ಓದಿ: ಕ್ವಾಲಿಫೈಯರ್-1ಗೂ ಮುನ್ನವೇ RCB ಗೆ ಆಘಾತ – ಐಪಿಎಲ್‌ನಿಂದ ಜಾಕೋಬ್ ಬೆಥೆಲ್ ಔಟ್
No second chances 🙅♂️
Orange fire meets Pink royalty in the #Eliminator 🧡🩷#TATAIPL | #TheFinalLeap | #SRHvRR pic.twitter.com/VGm9fzJaEu
— IndianPremierLeague (@IPL) May 24, 2026
ಮೇ 29ರಂದು ನ್ಯೂ ಚಂಢೀಗಡದಲ್ಲಿ ಕ್ವಾಲಿಫೈಯರ್-2ರ ಪಂದ್ಯ ನಡೆಯಲಿದ್ದು, ಕ್ವಾಲಿಫೈಯರ್-1ರಲ್ಲಿ ಸೋತ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಇದರಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.
19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಹಾಗೂ 2ನೇ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡಗಳು ಟ್ರೋಫಿಗಾಗಿ ಸೆಣೆಸಾಟ ನಡೆಸಲಿವೆ. ಇದನ್ನೂ ಓದಿ: ಲಕ್ನೋ ಸೋತರೂ ಗೆದ್ದ ಅರ್ಜುನ್ – ಚೊಚ್ಚಲ ಪಂದ್ಯದ ಪ್ರದರ್ಶನಕ್ಕೆ ತೆಂಡೂಲ್ಕರ್ ಭಾವುಕ ಪೋಸ್ಟ್

ವೇಳಾಪಟ್ಟಿ
1 ಕ್ವಾಲಿಫೈಯರ್ -1: ಮೇ 26, ಧರ್ಮಶಾಲಾ
ಆರ್‌ಸಿಬಿ vs ಗುಜರಾತ್
2 ಎಲಿಮಿನೇಟರ್: ಮೇ 27, ನ್ಯೂ ಚಂಢೀಗಡ
ಆರ್‌ಆರ್ vs ಎಸ್‌ಆರ್‌ಹೆಚ್
3 ಕ್ವಾಲಿಫೈಯರ್-2: ಮೇ 29, ನ್ಯೂ ಚಂಢೀಗಡ
4 ಫೈನಲ್ ಪಂದ್ಯ – ಮೇ 31, ಅಹಮದಾಬಾದ್
